ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಗ್ರರಿಗೆ ಪಾಕ್ ನೆರವು

Last Updated 16 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ನ್ಯೂಯಾರ್ಕ್(ಪಿಟಿಐ): `ಭಾರತ,ಆಫ್ಘಾನಿಸ್ತಾನ ಹಾಗೂ ಅಂತರರಾಷ್ಟ್ರೀಯ ಭದ್ರತಾ ನೆರವು ಪಡೆ (ಐಎಸ್‌ಎಎಫ್) ಮೇಲೆ ಕಣ್ಣಿಟ್ಟಿರುವ ಉಗ್ರರಿಗೆ ಪಾಕಿಸ್ತಾನದ ಗುಪ್ತಚರ ಸಂಸ್ಥೆಗಳು ನೆರವು ನೀಡುತ್ತಿದ್ದು, ಅವರಿಂದ ಪ್ರಯೋಜನವನ್ನೂ ಪಡೆಯುತ್ತಿವೆ~ಎಂದು ಅಮೆರಿಕದ ವರದಿಯೊಂದು ಅಭಿಪ್ರಾಯಪಟ್ಟಿದೆ.

ನೆರೆ ರಾಷ್ಟ್ರಗಳೊಂದಿಗೆ ವೈಮನಸ್ಸು ಸಾಧಿಸಲು ಪಾಕಿಸ್ತಾನವು ಭಯೋತ್ಪಾದಕರು ಹಾಗೂ ಉಗ್ರಗಾಮಿಗಳ ಜತೆ ಸಂಪರ್ಕ ಇಟ್ಟುಕೊಂಡಿದೆ.

ತನ್ನ ದೇಶಕ್ಕೆ ಮಾರಕವಾದ ಸಂಘಟನೆಗಳು, ಅದರಲ್ಲೂ ಪ್ರಮುಖವಾಗಿ ತೆಹ್ರಿಕ್-ತಾಲಿಬಾನ್ ಪಾಕಿಸ್ತಾನ್ ವಿರುದ್ಧ ಕಾರ್ಯಾಚರಣೆ ನಡೆಸಲು ಪಾಕ್ ಅವೆುರಿಕಕ್ಕೆ ಬೆಂಬಲ ನೀಡುತ್ತದೆ. ಆದರೆ ತನ್ನ ಲಾಭದ ಹಿತದೃಷ್ಟಿಯಿಂದ ಇತರ ಸಂಘಟನೆಗಳ ಜತೆ, ಪ್ರಮುಖವಾಗಿ ಲಷ್ಕರ್-ಎ-ತೊಯ್ಬಾದೊಂದಿಗೆ ಸಂಪರ್ಕ ಇಟ್ಟುಕೊಂಡಿದೆ ಎಂದು ಅಮೆರಿಕ ಮತ್ತು ಭಾರತದ ವಿದೇಶಾಂಗ ವ್ಯವಹಾರಗಳ ಜಂಟಿ ವರದಿ ತಿಳಿಸಿದೆ.

ಹದಗೆಟ್ಟ ಆರ್ಥಿಕ ಸ್ಥಿತಿಯ ನಡುವೆಯೂ ಪಾಕ್, ತನ್ನ ರಾಷ್ಟ್ರೀಯ ಬಜೆಟ್‌ನಲ್ಲಿ ಸೇನೆಗಾಗಿ ಅಪಾರ ಹಣ ಮೀಸಲಿಡುತ್ತದೆ. ಇಸ್ಲಾಂ ಉಗ್ರವಾದ ತೀವ್ರ ಸ್ವರೂಪದಲ್ಲಿರುವ ಪಾಕ್, ಹಂತ ಹಂತವಾಗಿ ಅಧಃಪತನಕ್ಕೆ ಇಳಿಯುತ್ತಿದೆ ಎಂದೂ ವರದಿಯಲ್ಲಿ ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT