ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಚಿತ ಯೋಗ ಶಿಬಿರ: ಇಂದು ಚಾಲನೆ

Last Updated 14 ಸೆಪ್ಟೆಂಬರ್ 2011, 5:40 IST
ಅಕ್ಷರ ಗಾತ್ರ

ದಾವಣಗೆರೆ: ಶ್ರೀಪತಂಜಲಿ ಯೋಗ ಶಿಕ್ಷಣ ಸಮಿತಿ ವತಿಯಿಂದ ನಗರದ 22 ಸ್ಥಳಗಳಲ್ಲಿ ಉಚಿತ ಯೋಗಾಸನಾ, ಪ್ರಾಣಾಯಾಮ ಹಾಗೂ ಧ್ಯಾನ ಶಿಬಿರ ಹಮ್ಮಿಕೊಳ್ಳಲಾಗಿದ್ದು, ಸೆ. 14ರಿಂದ 22ರವರೆಗೆ 10 ಶಿಬಿರ ಆರಂಭಿಸಲಾಗುತ್ತಿದೆ.

14ರಂದು ಬೆಳಿಗ್ಗೆ 6ಕ್ಕೆ ಎನ್.ಆರ್. ರಸ್ತೆ ಆದಿನಾಥೇಶ್ವರ ಜೈನ ಮಂದಿರದಲ್ಲಿ, ಅಂದು ಸಂಜೆ 6ಕ್ಕೆ ಸರಸ್ವತಿ ನಗರದ ಬಸವ ಬಳಗದಲ್ಲಿ ಶಿಬಿರ ಆರಂಭಗೊಳ್ಳಲಿದೆ.

15ರಂದು ಸಂಜೆ 6ಕ್ಕೆ ಎಸ್.ಎಸ್. ಬಡಾವಣೆಯ ಅಥಣಿ ವೀರಣ್ಣ ಕಾಲೇಜಿನಲ್ಲಿ, 16ರಂದು ಸಂಜೆ 6ಕ್ಕೆ ವಿದ್ಯಾನಗರದ ಈಶ್ವರ- ಪಾರ್ವತಿ- ಗಣಪತಿ ದೇವಸ್ಥಾನ ಹಾಗೂ ತರಳಬಾಳು ಬಡಾವಣೆಯ ಮಾಗನೂರು ಬಸಪ್ಪ ಶಾಲೆಯಲ್ಲಿ, 18ರಂದು ಸಂಜೆ 6ಕ್ಕೆ ದೇವರಾಜ ಅರಸು ಬಡಾವಣೆಯ  ಲಯನ್ಸ್ ಕ್ಲಬ್‌ನಲ್ಲಿ, 19ರಂದು ಸಂಜೆ 6ಕ್ಕೆ ಎಂಸಿಸಿ `ಬಿ~ ಬ್ಲಾಕ್‌ನ ಸದ್ಯೋಜಾತ ಶ್ರೀನಿಕೇತನದಲ್ಲಿ, 20ರಂದು ಸಂಜೆ 6ಕ್ಕೆ ನಿಟ್ಟುವಳ್ಳಿ ದುಗಾಂಬಿಕಾ ದೇವಸ್ಥಾನದ ಬಳಿಯ ಸಮುದಾಯ ಭವನದಲ್ಲಿ, 21ರಂದು ಸಂಜೆ 6ಕ್ಕೆ ಆಂಜನೇಯ ಬಡಾವಣೆಯ ಸಿದ್ದೇಶ್ವರ ಕಾಲೇಜಿನಲ್ಲಿ, 22ರಂದು ಸಂಜೆ 6ಕ್ಕೆ ಭಗತ್‌ಸಿಂಗ್ ನಗರದ ನಲಂದ ವಿದ್ಯಾಸಂಸ್ಥೆಯಲ್ಲಿ ಶಿಬಿರಕ್ಕೆ ಚಾಲನೆ ನೀಡಲಾಗುವುದು ಎಂದು ಸಮಿತಿ ಜಿಲ್ಲಾ ಅಧ್ಯಕ್ಷ ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಜಯಪ್ರಕಾಶ್ ಶಿರಮಗೊಂಡನಹಳ್ಳಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಉದ್ಘಾಟನೆಯ ನಂತರ ಪ್ರತಿದಿನ ಬೆಳಿಗ್ಗೆ 5.30ರಿಂದ 7ರವರೆಗೆ ಯೋಗ ನಡೆಸಲಾಗುವುದು. ಮಹಿಳೆಯರು ಚೂಡಿದಾರ್ ಮೇಲೆ ಟೀಶರ್ಟ್, ಪುರುಷರು ಬರ್ಮುಡ ಚಡ್ಡಿ, ಟೀಶರ್ಟ್ ಧರಿಸಬೇಕು. ಆಸನ ಮಾಡಲು ಸಾಕಷ್ಟು ದಪ್ಪದಾದ ಜಮಖಾನ ತರಬೇಕು. ಎರಡು ಲೋಟ ನೀರು ಕುಡಿದು, ನಿತ್ಯ ಕರ್ಮಗಳನ್ನು ಮುಗಿಸಿ ಬರಬೇಕು ಎಂದು ಸಲಹೆ ನೀಡಿದರು.

ಇಡೀ ಜಿಲ್ಲೆಯನ್ನು ಯೋಗ ಜಿಲ್ಲೆಯಾಗಿ ಮಾಡಬೇಕು ಎನ್ನುವ ಗುರಿಯೊಂದಿಗೆ ಗುರುಗಳಾದ ರಾಮಸ್ವಾಮಿ ಅವರ ಮಾರ್ಗದರ್ಶನದಲ್ಲಿ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ಶಿಬಿರ ನಡೆಸಲಾಗುತ್ತಿದೆ. ನಗರದಲ್ಲಿ ಪ್ರಸ್ತುತ 68 ಯೋಗ ಶಿಕ್ಷಕರು ಉಚಿತವಾಗಿ ಯೋಗ ಕಲಿಸುತ್ತಿದ್ದಾರೆ ಎಂದು ವಿವರ ನೀಡಿ, ಹೆಚ್ಚಿನ

ಮಾಹಿತಿಗೆ ಮೊಬೈಲ್: 94483 58026, 94481 29399, 94483 13335 ಸಂಪರ್ಕಿಸಲು ಕೋರಿದರು.

ಪತ್ರಿಕಾಗೋಷ್ಠಿಯಲ್ಲಿ ಸಮಿತಿ ಜಂಟಿ ಕಾರ್ಯದರ್ಶಿ ಟಿ.ಜೆ. ಜಯಪ್ರಕಾಶ್, ಯೋಗ ಗುರು ಬಿ. ಸುರೇಶ್, ಮುರುಗೇಶ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT