ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಚಿತ ಶಿಕ್ಷಣದ ಲೇಡಿ

Last Updated 2 ಮಾರ್ಚ್ 2011, 19:30 IST
ಅಕ್ಷರ ಗಾತ್ರ

ವಿದ್ಯೆ ಎಂದರೆ ಇಂದು ಕೇವಲ ವ್ಯಾಪಾರವಾಗಿದೆ. ಇದರ ನಡುವೆ, ‘ವ್ಯಾಪಾರಕ್ಕಿಂತ ವಿದ್ಯಾದಾನವೇ ಶ್ರೇಷ್ಠ’ ಎನ್ನುವವರ ಸಂಖ್ಯೆ ವಿರಳವಾಗಿದೆ. ಡೊನೇಷನ್ ಹಾಗೂ ಶುಲ್ಕ ಇಲ್ಲದೇ ಶಿಕ್ಷಣ ಸಂಸ್ಥೆ ನಡೆಸುವುದು ಕಷ್ಟ ಎಂದು ಸಬೂಬು ಹೇಳುವವರೇ ಜಾಸ್ತಿ.

ಇವೆಲ್ಲವನ್ನು ಬದಿಗಿಟ್ಟು ಶಿಕ್ಷಣವೇ ಮುಖ್ಯ ಎನ್ನುವವರು ಅಪರೂಪ. ಈ ಸಾಲಿನಲ್ಲಿದ್ದಾರೆ ಮಂಜುಳಾ ರಾಮಮೂರ್ತಿ.ಜೆ.ಪಿ ನಗರದ ಕೊತ್ತನೂರು ದಿಣ್ಣೆ ಮುಖ್ಯ ರಸ್ತೆಯ ನೃಪತುಂಗ ಬಡಾವಣೆಯಲ್ಲಿ ‘ಲೇಡಿ ವೆಲ್ಲಿಂಗ್‌ಟನ್’ ಶಾಲೆಯನ್ನು 12 ವರ್ಷಗಳಿಂದ ನಡೆಸಿಕೊಂಡು ಬರುತ್ತಿದ್ದಾರೆ. ಈ ಶಾಲೆಯ ವಿಶೇಷ ಎಂದರೆ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಯಾವುದೇ ಶುಲ್ಕ ಇಲ್ಲದೆ ಉಚಿತ ಶಿಕ್ಷಣ ನೀಡುವುದು. ಅಂದರೆ ಇಲ್ಲಿನ ಅರ್ಧದಷ್ಟು ಮಕ್ಕಳು ಉಚಿತ ವಿದ್ಯಾಭ್ಯಾಸ ಪಡೆಯುತ್ತಿದ್ದಾರೆ.

ಮಗುವನ್ನು ಉತ್ತಮ ಪ್ರಜೆಯನ್ನಾಗಿ ರೂಪಿಸಬೇಕು, ಸಮಾಜಕ್ಕೆ ಉಪಯುಕ್ತ ವ್ಯಕ್ತಿಯಾಗಿ ಬೆಳೆಸಬೇಕು ಎಂಬ ಹಂಬಲದಿಂದ 1998 ರಲ್ಲಿ ಕೇವಲ 6 ವಿದ್ಯಾರ್ಥಿಗಳಿಂದ ಪ್ರಾರಂಭವಾದ ಈ ಶಾಲೆಯಲ್ಲಿ ಈಗ ಸುಮಾರು 450 ವಿದ್ಯಾರ್ಥಿಗಳಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ಸತತವಾಗಿ ಹತ್ತನೆ ತರಗತಿ ಪರೀಕ್ಷೆಯಲ್ಲಿ ನೂರರಷ್ಟು ಫಲಿತಾಂಶವನ್ನು ಪಡೆಯುತ್ತಿರುವುದು ಶಾಲೆಯ ಗುಣಮಟ್ಟವನ್ನು ತೋರಿಸುತ್ತದೆ.

ಅನೇಕ ಕಾರಣಗಳಿಂದಾಗಿ ಸಂಕಷ್ಟದಲ್ಲಿರುವ ಮಕ್ಕಳಿಗೆ ಸಹಾಯ ಮಾಡುತ್ತಿದ್ದು, ಶಿಕ್ಷಣದ ಜೊತೆಗೆ ಭಾರತೀಯ ಸಂಸ್ಕೃತಿಯನ್ನು ನಮ್ಮ ಮಕ್ಕಳಲ್ಲಿ ಬೆಳೆಸುತ್ತೇವೆ ಎನ್ನುತ್ತಾರೆ ಮಂಜುಳಾ. ಇವರ ಕಾರ್ಯದಲ್ಲಿ ಮಗಳು ಮನುಶ್ರೀ ಮತ್ತು 35 ಕ್ಕೂ ಹೆಚ್ಚಿನ ಸಿಬ್ಬಂದಿ ಸಹಕಾರ ನೀಡುತ್ತಿದ್ದಾರೆ.

ಪ್ರತಿ ವರ್ಷ ಹತ್ತನೆ ತರಗತಿಯಲ್ಲಿ ಹೆಚ್ಚು ಅಂಕಪಡೆದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುತ್ತಿದೆ.ಅಲ್ಲದೇ ಶಿಕ್ಷಣ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದವರಿಗೆ ಸನ್ಮಾನ ಮಾಡುತ್ತಿದೆ. ಈ ಶಾಲೆಯ ಶಿಕ್ಷಣ ಪ್ರೇಮ, ಬಡವರ ಬಗೆಗಿನ ಕಾಳಜಿ, ಸಮಾಜ ಸೇವೆಯನ್ನು ಗುರುತಿಸಿ ಸರ್ಕಾರ ಹಾಗು ಸಂಘ ಸಂಸ್ಥೆಗಳು ಗೌರವಿಸಿವೆ. ರಾಜ್ಯ ಹಾಗೂ ರಾಷ್ಟ್ರೀಯ ಪ್ರಶಸ್ತಿಗಳು ಲಭಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT