ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಚಿತ ಹೃದ್ರೋಗ ತಪಾಸಣೆ ಶಿಬಿರ

Last Updated 16 ಫೆಬ್ರುವರಿ 2011, 9:30 IST
ಅಕ್ಷರ ಗಾತ್ರ

ಶ್ರೀನಿವಾಸಪುರ: ಗ್ರಾಮೀಣ ಪ್ರದೇಶದ ಬಡವರು ಉಚಿತ ಆರೋಗ್ಯ ತಪಾಸಣಾ ಶಿಬಿರಗಳ ಲಾಭ ಪಡೆದು ತಮ್ಮ ಆರೋಗ್ಯ ಸುಧಾರಿಸಿಕೊಳ್ಳಬೇಕು ಎಂದು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಸಲಹೆ ನೀಡಿದರು.ತಾಲ್ಲೂಕಿನ ಲಕ್ಷ್ಮೀಪುರದಲ್ಲಿ ತಾಲ್ಲೂಕು ಪದ್ಮಶಾಲಿ ಸಂಘ, ಪವನ್ ಆಸ್ಪತ್ರೆ, ವೀರಾಂಜನೇಯಸ್ವಾಮಿ ಸೇವಾ ಟ್ರಸ್ಟ್ ಮತ್ತು ನೆಹರು ಕ್ರೀಡಾ ಯುವಕ ಸಂಘದ ವತಿಯಿಂದ ಈಚೆಗೆ ಏರ್ಪಡಿಸಲಾಗಿದ್ದ ಉಚಿತ ಹೃದ್ರೋಗ ತಪಾಣಾ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಆರ್ಥಿಕ ಸಮಸ್ಯೆಯಿಂದ ಗ್ರಾಮೀಣ ಜನತೆಗೆ ಆರೋಗ್ಯ ರಕ್ಷಣೆ ಕಷ್ಟವಾಗುತ್ತಿದೆ. ದಿನೇ ದಿನೇ ವೈದ್ಯಕೀಯ ವೆಚ್ಚ ಹೆಚ್ಚುತ್ತಿರುವುದರಿಂದ ಬಡವರಿಗೆ ರೋಗಗಳಿಂದ ಸಂಪೂರ್ಣ ಮುಕ್ತಿ ಪಡೆಯಲು ಸಾಧ್ಯವಾಗುತ್ತಿಲ್ಲ ಎಂದರು.
ತಾಲ್ಲೂಕು ಪದ್ಮಶಾಲಿ ಸಂಘದ ಅಧ್ಯಕ್ಷ ಜಗದೀಶ್ ಕುಮಾರ್ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಿ.ಪಂ. ಉಪಾಧ್ಯಕ್ಷ ಜಿ.ಸೋಮಶೇಖರ್, ಜಿ.ಪಂ. ಮಾಜಿ ಅಧ್ಯಕ್ಷ ಎಂ.ಶ್ರೀನಿವಾಸನ್, ಗುತ್ತಿಗೆದಾರ ಎಂ.ಬಿ.ಕೃಷ್ಣಾರೆಡ್ಡಿ, ತಾ.ಪಂ. ಸದಸ್ಯರಾದ ಗಂಗಾಧರಪ್ಪ, ವೈದ್ಯಂ ವೆಂಕಟರೆಡ್ಡಿ, ಐಎಂಎ ಕಾರ್ಯದರ್ಶಿ ಡಾ.ಅಶೋಕರೆಡ್ಡಿ, ಡಾ.ವರಲಕ್ಷ್ಮಿ, ಡಾ.ವೇಣುಗೋಪಾಲ್, ವೆಂಕಟಪ್ಪ, ವೀರಾಂಜನೇಯಸ್ವಾಮಿ ಸೇವಾ ಟ್ರಸ್ಟ್‌ನ ಅಧ್ಯಕ್ಷ ವಿ.ವೆಂಕಟೇಶ್ ಉಪಸ್ಥಿತರಿದ್ದರು.
ನೆಹರು ಕ್ರೀಡಾ ಯುವಕ ಸಂಘದ ಅಧ್ಯಕ್ಷ ಎ.ನಾಗೇಂದ್ರ ಸ್ವಾಗತಿಸಿದರು. ಮುಖ್ಯ ಕಾಳಾಚಾರಿ ನಿರೂಪಿಸಿದರು. ವೆಂಕಟೇಶ್ ವಂದಿಸಿದರು.

ಶ್ರೀನಿವಾಸಪುರ: ಗ್ರಾಮೀಣ ಪ್ರದೇಶದ ಬಡವರು ಉಚಿತ ಆರೋಗ್ಯ ತಪಾಸಣಾ ಶಿಬಿರಗಳ ಲಾಭ ಪಡೆದು ತಮ್ಮ ಆರೋಗ್ಯ ಸುಧಾರಿಸಿಕೊಳ್ಳಬೇಕು ಎಂದು ಶಾಸಜಿ.ಕೆ.ವೆಂಕಟಶಿವಾರೆಡ್ಡಿ ಸಲಹೆ ನೀಡಿದರು.ತಾಲ್ಲೂಕಿನ ಲಕ್ಷ್ಮೀಪುರದಲ್ಲಿ ತಾಲ್ಲೂಕು ಪದ್ಮಶಾಲಿ ಸಂಘ, ಪವನ್ ಆಸ್ಪತ್ರೆ, ವೀರಾಂಜನೇಯಸ್ವಾಮಿ ಸೇವಾ ಟ್ರಸ್ಟ್ ಮತ್ತು ನೆಹರು ಕ್ರೀಡಾ ಯುವಕ ಸಂಘದ ವತಿಯಿಂದ ಈಚೆಗೆ ಏರ್ಪಡಿಸಲಾಗಿದ್ದ ಉಚಿತ ಹೃದ್ರೋಗ ತಪಾಣಾ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಆರ್ಥಿಕ ಸಮಸ್ಯೆಯಿಂದ ಗ್ರಾಮೀಣ ಜನತೆಗೆ ಆರೋಗ್ಯ ರಕ್ಷಣೆ ಕಷ್ಟವಾಗುತ್ತಿದೆ. ದಿನೇ ದಿನೇ ವೈದ್ಯಕೀಯ ವೆಚ್ಚ ಹೆಚ್ಚುತ್ತಿರುವುದರಿಂದ ಬಡವರಿಗೆ ರೋಗಗಳಿಂದ ಸಂಪೂರ್ಣ ಮುಕ್ತಿ ಪಡೆಯಲು ಸಾಧ್ಯವಾಗುತ್ತಿಲ್ಲ ಎಂದರು.
ತಾಲ್ಲೂಕು ಪದ್ಮಶಾಲಿ ಸಂಘದ ಅಧ್ಯಕ್ಷ ಜಗದೀಶ್ ಕುಮಾರ್ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಿ.ಪಂ. ಉಪಾಧ್ಯಕ್ಷ ಜಿ.ಸೋಮಶೇಖರ್, ಜಿ.ಪಂ. ಮಾಜಿ ಅಧ್ಯಕ್ಷ ಎಂ.ಶ್ರೀನಿವಾಸನ್, ಗುತ್ತಿಗೆದಾರ ಎಂ.ಬಿ.ಕೃಷ್ಣಾರೆಡ್ಡಿ, ತಾ.ಪಂ. ಸದಸ್ಯರಾದ ಗಂಗಾಧರಪ್ಪ, ವೈದ್ಯಂ ವೆಂಕಟರೆಡ್ಡಿ, ಐಎಂಎ ಕಾರ್ಯದರ್ಶಿ ಡಾ.ಅಶೋಕರೆಡ್ಡಿ, ಡಾ.ವರಲಕ್ಷ್ಮಿ, ಡಾ.ವೇಣುಗೋಪಾಲ್, ವೆಂಕಟಪ್ಪ, ವೀರಾಂಜನೇಯಸ್ವಾಮಿ ಸೇವಾ ಟ್ರಸ್ಟ್‌ನ ಅಧ್ಯಕ್ಷ ವಿ.ವೆಂಕಟೇಶ್ ಉಪಸ್ಥಿತರಿದ್ದರು.
ನೆಹರು ಕ್ರೀಡಾ ಯುವಕ ಸಂಘದ ಅಧ್ಯಕ್ಷ ಎ.ನಾಗೇಂದ್ರ ಸ್ವಾಗತಿಸಿದರು. ಮುಖ್ಯ ಕಾಳಾಚಾರಿ ನಿರೂಪಿಸಿದರು. ವೆಂಕಟೇಶ್ ವಂದಿಸಿದರು.
 
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT