ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಜ್ಜಯಿನಿ: ಶ್ರೀಗಳ ಪಟ್ಟಾಭಿಷೇಕಕ್ಕೆ ಸಿದ್ಧತೆ

Last Updated 27 ಅಕ್ಟೋಬರ್ 2011, 10:05 IST
ಅಕ್ಷರ ಗಾತ್ರ

ಕೊಟ್ಟೂರು: ಉಜ್ಜಯಿನಿ ಸದ್ದರ್ಮಪೀಠದಲ್ಲಿ ನ.2 ರಂದು ಲಿಂ. ಮರುಳಸಿದ್ದೇಶ್ವರ ಸ್ವಾಮೀಜಿಯ ಪುಣ್ಯಾರಾಧನೆ ಮತ್ತು ನ.3ರಂದು ನಡೆಯುವ ಜಗದ್ಗುರು ಮಹಾಂತ ರಾಜೇಂದ್ರ ಶಿವಾಚಾರ್ಯ ಸ್ವಾಮೀಜಿಯ ಪಟ್ಟಾಭಿಷೇಕಕ್ಕೆ ಉಜ್ಜಯಿನಿ ಸರ್ವರೀತಿಯಲ್ಲೂ ಸಜ್ಜುಗೊಳ್ಳತೊಡಗಿದೆ.

ಮಳೆ ಕೈಕೊಟ್ಟ ನೋವು ಗ್ರಾಮಸ್ಥರನ್ನು ಕಾಡತೊಡಗಿದೆ. ಆದರೂ ಲಿಂ.ಶ್ರೀಗಳ ಪುಣ್ಯಾರಾಧನೆಗೆ ಮತ್ತು ಪಟ್ಟಾಭಿಷೇಕ ವೀಕ್ಷಿಸಿ ಪುನೀತರಾಗಲು ತವಕಿಸುತ್ತಿದ್ದಾರೆ.

ಒಂದೂವರೆ ದಶಕಗಳ ಹಿಂದೆ ಲಿಂ. ಶ್ರೀಮರುಳಸಿದ್ದೇಶ್ವರ ಸ್ವಾಮೀಜಿಗಳ ಪಟ್ಟಾಭಿಷೇಕದ ಸವಿ ನೆನಪು ಗ್ರಾಮಸ್ಥರಲ್ಲಿ ಇನ್ನೂ ಹಸಿರಾಗಿರುವಾಗಲೇ ಮತ್ತೊಂದು ಪಟ್ಟಾಭಿಷೇಕಕ್ಕೆ  ಶ್ರೀಪೀಠ ಶೃಂಗಾರಗೊಳ್ಳತೊಡಗಿದೆ.

ಕೂಡ್ಲಿಗಿ ಕ್ಷೇತ್ರದ ಶಾಸಕ ನಾಗೇಂದ್ರ ಶ್ರೀಪೀಠದಲ್ಲಿ ನಡೆಯುವ ಎಲ್ಲಾ ಧಾರ್ಮಿಕ ಕಾರ್ಯಕ್ರಮಕ್ಕೂ ಅಧ್ಯಕ್ಷರು.  ಹಗರಿಬೊಮ್ಮನಹಳ್ಳಿ ಕ್ಷೇತ್ರದ ಶಾಸಕ ನೇಮಿರಾಜ್ ನಾಯ್ಕ ಉಪಾಧ್ಯಕ್ಷರು ಮತ್ತು ಶ್ರೀಪೀಠದ ಕಾರ್ಯದರ್ಶಿ ಎಂ.ಎಂ.ಜೆ. ಹರ್ಷವರ್ಧನ ಕಾರ್ಯದರ್ಶಿಯಾಗಿರುವುದರಿಂದ ಪುಣ್ಯಾರಾಧನೆಗೆ ಮತ್ತು ಪಟ್ಟಾಭಿಷೇಕಕ್ಕೆ ಹುರುಪು ಮತ್ತು ಉತ್ಸಾಹ ಹೆಚ್ಚಾಗಿದೆ.

 ಶಾಸಕ ನಾಗೇಂದ್ರ ಅವರು ಮುಖ್ಯಮಂತ್ರಿ  ಡಿ.ವಿ. ಸದಾನಂದಗೌಡ ಅವರನ್ನು ಪಟ್ಟಾಭಿಷೇಕಕ್ಕೆ ಆಹ್ವಾನಿಸಿದ್ದು, ಬರುವುದು ನಿಚ್ಚಳವಾಗಿದೆ. ಶಾಸಕ ನೇಮಿರಾಜ್ ನಾಯ್ಕ, ಯಾವುದೇ ಸೌಲಭ್ಯಕ್ಕೆ ಕುಂದುಂಟಾಗದಂತೆ ಎಚ್ಚರ ವಹಿಸಿದ್ದಾರೆ. ರಸ್ತೆ, ವಿದ್ಯುತ್, ನೈರ್ಮಲ್ಯ, ವಸತಿ ಸೌಲಭ್ಯ ಇನ್ನಿತರ ಕಾಮಗಾರಿಗಳು ತ್ವರಿತವಾಗಿ ನಡೆಯ ತೊಡಗಿವೆ.

ಧಾರ್ಮಿಕ ಕಾರ್ಯಕ್ರಮಗಳು ಸುಸೂತ್ರವಾಗಿ ನಡೆಯುವಂತಾಗಲು ಡೋಣೂರು ಚಾನುಕೋಟಿ ಮಠದ ಸ್ದ್ದಿದಲಿಂಗ ಶಿವಾಚಾರ್ಯ ಸ್ವಾಮೀಜಿ, ನಂದಿಪುರ ಶ್ರೀಕ್ಷೇತ್ರದ ಮಹೇಶ್ವರ ಶಿವಾಚಾರ್ಯ  ಸ್ವಾಮೀಜಿ, ಕೂಡ್ಲಿಗಿ ಹೀರೆಮಠದ ಮಲ್ಲಿಕಾರ್ಜುನ ಸ್ವಾಮೀಜಿ, ಕಾನಾಮಡುಗು ದಾಸೋಹ ಮಠದ ನಾಲ್ವಡಿ ಶರಣಾರ್ಯರರು, ಪ್ರಶಾಂತದೇವರು, ಮರಿಯಮ್ಮನಹಳ್ಳಿ ಮಲ್ಲಿಕಾರ್ಜುನ ಸ್ವಾಮೀಜಿ, ಎಮ್ಮಿಗನೂರು ಮಹಾಂತ ದೇಶಿ ಕೇಂದ್ರ ಶಿವಾಚಾರ್ಯ ಸ್ವಾಮೀಜಿ ಅವರು ಶ್ರೀಪೀಠದಲ್ಲಿ ಬಿಡಾರ ಹೂಡಿದ್ದಾರೆ.

ಉಜ್ಜಿಯಿನಿ ಪೀಠಕ್ಕೆ ದೇಶದ ವಿವಿಧೆಡೆ ಸಾವಿರಾರು ಶಾಖಾ ಮಠಗಳಿರುವುದರಿಂದ ಪುಣ್ಯಾರಾಧನೆ ಮತ್ತು ಪಟ್ಟಾಭಿಷೇಕ 500ಕ್ಕೂ ಹೆಚ್ಚು ಶಿವಾಚಾರ್ಯರು ಭಾಗವಹಿಸುವುದರಿಂದ ಉಜ್ಜಿನಿ ಸಂಪೂರ್ಣ ಶಿವಾಚಾರ್ಯರ ಮಯವಾಗಲಿದೆ.

ಘೋಷಿತ ಜಗದ್ಗುರು ಮಹಾಂತ ರಾಜೇಂದ್ರ ಶಿವಾಚಾರ್ಯ ಸ್ವಾಮೀಜಿ ಕೆಲವೇ ದಿನಗಳಲ್ಲಿ ಭಕ್ತರ ಪ್ರೀತಿ, ಅಭಿಮಾನಕ್ಕೆ ಪಾತ್ರರಾಗಿದ್ದಾರೆ. ಒಂಭತ್ತು ಪಾದಗಳ ಪೂಜೆಗೆ ಆಗಮಿಸಿದ ಶ್ರೀಗಳ ದರ್ಶನಕ್ಕಾಗಿ ಭಕ್ತರು ಮುಗಿಬೀಳುತ್ತ್ದ್ದಿದದ್ದು ಸಾಮಾನ್ಯವಾಗಿತ್ತು.

 ಉಜ್ಜಿಯಿನಿ ಗ್ರಾಮದಲ್ಲಿ ಪಟ್ಟಾಭಿಷೇಕಕ್ಕೆ ಯುವ ಪಡೆಯೇ ಸಿದ್ದಗೊಂಡಿದೆ. ವಕೀಲ ಮರುಳಸಿದ್ದಪ್ಪ, ಹರನಾಥ, ದೇವೇಂದ್ರಪ್ಪ, ಜಂಬಣ್ಣ, ಸಬ್ಬೀರ, ಶಾಂತನಹಳ್ಳಿ ಕೊಡದಪ್ಪ, ಕಮ್ಮರ ರುದ್ರಪ್ಪ, ಪೂಜಾರ ರಾಜಪ್ಪ, ಹೆಚ್. ಶ್ರೀನಿವಾಸ, ಓಂಕಾರಪ್ಪ, ಕೆ.ಎಂ. ಕೊಟ್ರಯ್ಯ, ಏಕಾಂತರಾಜ್, ಗೋಪಿನಾಥ, ಎಂ. ಸುರೇಶಬಾಬು, ಸೊಂಡೆಪ್ಪರ ರೇವಣಸಿದ್ದಪ್ಪ, ಬಡೆಗೇರ ಮರುಳಸಿದ್ದಾಚಾರಿ, ಬಿ. ಸಿದ್ದಾಖಲಿ ಸಾಹೇಬ್. ಬುಡೇನ್ ಸಾಹೇಬ್. ಜೆ. ಎಂ.    ಕೊಟ್ರಯ್ಯ, ಕೋಣಿ ರುದ್ರಪ್ಪ , ಮಡಿವಾಳರ ನಾಗೇಂದ್ರಪ್ಪ  ಮುಂತಾದವರು ಹಗಲು ರಾತ್ರಿ ದುಡಿಯುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT