ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಡುಗೊರೆ ಹಿಂದಿರುಗಿಸಿದ ಪ್ರತಿಭಾ ಪಾಟೀಲ್‌

Last Updated 1 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ರಾಷ್ಟ್ರಪತಿ­ಯಾಗಿದ್ದ ಸಂದರ್ಭದಲ್ಲಿ ತಮಗೆ ನೀಡ­ಲಾಗಿದ್ದ ಉಡುಗೊರೆಗಳನ್ನು ಮಾಜಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್‌ ಅವರು ರಾಷ್ಟ್ರಪತಿ ಭವನಕ್ಕೆ ಹಿಂದಿರುಗಿಸಿದ್ದಾರೆ. ಈ ಉಡುಗೊರೆಗಳನ್ನು ಅವರ ಕುಟುಂಬವು ಮಹಾ­ರಾಷ್ಟ್ರದ ಅಮರಾ­ವತಿಯಲ್ಲಿ ನಡೆಸುತ್ತಿರುವ ಶಾಲೆಯಲ್ಲಿ ಪ್ರದರ್ಶನಕ್ಕೆ ಇರಿಸಲಾಗಿತ್ತು.

‘ಪ್ರತಿಭಾ ದೇವಿಸಿಂಗ್‌ ಪಾಟೀಲ್‌ ಅವರು ರಾಷ್ಟ್ರಪತಿ ಆಗಿದ್ದಾಗ 155 ಉಡುಗೊರೆಗಳನ್ನು ಸ್ವೀಕರಿಸಿದ್ದರು. ಇವು­ಗಳನ್ನು ಅಮರಾವತಿಯ ವಿದ್ಯಾಭಾರತಿ ಶೈಕ್ಷಣಿಕ ಮಂಡಳಿಯು ತಾತ್ಕಾಲಿಕವಾಗಿ ಎರವಲು ಪಡೆದಿದೆ’ ಎಂದು ರಾಷ್ಟ್ರಪತಿ ಭವನವು ಮಾಹಿತಿ ಹಕ್ಕು ಕಾಯ್ದೆ­ಯಡಿಯ (ಆರ್‌ಟಿಐ) ಅರ್ಜಿಯೊಂದಕ್ಕೆ ಉತ್ತರಿಸಿತ್ತು. ಈ ಉಡುಗೊರೆಗಳನ್ನು ರಾಷ್ಟ್ರಪತಿ ಭವನಕ್ಕೆ ಇತ್ತೀಚೆಗೆ ಹಿಂದಿರು­ಗಿಸಲಾಗಿದೆ ಎಂದು ಆರ್‌ಟಿಐ ಕಾರ್ಯ­ಕರ್ತ ಸುಭಾಷ್‌ ಅಗರ್‌ವಾಲ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT