ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಡುಪಿ ನಗರಸಭೆ ಕಾರ್ಯವೈಖರಿ ಮಾದರಿ

Last Updated 18 ಅಕ್ಟೋಬರ್ 2011, 10:05 IST
ಅಕ್ಷರ ಗಾತ್ರ

ಉಡುಪಿ: `ಸರ್ಕಾರದ ಅನುದಾನಗಳನ್ನು ಸದುಪಯೋಗ ಪಡಿಸಿಕೊಂಡು ರಾಜ್ಯದ ಮಾದರಿ ನಗರಸಭೆಯಾಗಿರುವ ಉಡುಪಿ ನಗರಸಭೆ ಕಾರ್ಯವೈಖರಿಯನ್ನು ಇತರ ನಗರಸಭೆಗಳು ಅನುಕರಿಸಲಿ~ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ವಿ.ಎಸ್.ಆಚಾರ್ಯ ಇಲ್ಲಿ ಹೇಳಿದರು.

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದವರಿಗೆ ವಿವಿಧ ಸೌಲಭ್ಯಗಳ ಕುರಿತು ಮಾಹಿತಿ ನೀಡುವ, ಅರ್ಜಿ ಸ್ವೀಕರಿಸುವ ಹಾಗೂ ಸವಲತ್ತು ವಿತರಿಸುವ ಸಲುವಾಗಿ ಉಡುಪಿ ನಗರಸಭೆ ಆಯೋಜಿಸಿರುವ `ಸೌಲಭ್ಯ-2011~ ಕಾರ್ಯಕ್ರಮವನ್ನು ಬನ್ನಂಜೆಯಲ್ಲಿ ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.
40 ವರ್ಷ ಹಿಂದೆ ನಗರಸಭೆ ಅಧ್ಯಕ್ಷರಾಗಿ ಎಂಟು ವರ್ಷ ಕೆಲಸ ಮಾಡಿದ್ದನ್ನು, ಆ ಕಾಲದಲ್ಲಿ ನಗರಸಭೆ ಪ್ರಾರಂಭಿಸಿದ್ದ ಸುಧಾರಣಾ ಕಾರ್ಯಕ್ರಮಗಳನ್ನು ಆಚಾರ್ಯ ಸ್ಮರಿಸಿದರು.

`ಕಳೆದ ವರ್ಷದಲ್ಲಿ ಉಡುಪಿ ನಗರಸಭೆ ಪರಿಶಿಷ್ಟರು ಹಾಗೂ ಹಿಂದುಳಿದವರಿಗೆ ರೂ.3.50 ಕೋಟಿಯಷ್ಟು ಸವಲತ್ತು ವಿತರಿಸಿದೆ. ಅರ್ಹ ಫಲಾನುಭವಿಗಳನ್ನು ಗುರುತಿಸಿ ಇವುಗಳನ್ನು ನೀಡುವ ಮೂಲಕ ಈ ವರ್ಗದಲ್ಲಿ ದೊಡ್ಡ ಪರಿವರ್ತನೆಗೆ ಕಾರಣವಾಗಿದೆ~ ಎಂದರು.

2,700 ಕುಟುಂಬಕ್ಕೆ `ಡಾಟಾಕಾರ್ಡ್~:
`ಉಡುಪಿ ಆಸುಪಾಸಿನ 2,700 ಕುಟುಂಬಗಳಿಗೆ `ಡಾಟಾಕಾರ್ಡ್~ ಹಾಗೂ ಆರೋಗ್ಯ ಕಾರ್ಡ್ ವಿತರಿಸಲಾಗಿದೆ. ಈ ಮೂಲಕ ಉಡುಪಿ ಸುತ್ತಮುತ್ತಲಿನ 9 ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ದೊರಕಲಿದೆ. ಈ ಕಾರ್ಯಕ್ರಮವನ್ನು ಉಳಿದ ನಗರಸಭೆಗಳು ಅನುಕರಿಸಲಿ~ ಎಂದು ಆಚಾರ್ಯ ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ನಗರಸಭೆ ಮಾಜಿ ಅಧ್ಯಕ್ಷ ಗುಜ್ಜಾಡಿ ಪ್ರಭಾಕರ ನಾಯಕ್, `ಮೂಲಸೌಕರ್ಯ ಕಲ್ಪಿಸಲು ಉಡುಪಿ ನಗರಸಭೆ ಆದ್ಯತೆ ನೀಡಿದೆ. ಸರ್ಕಾರ ನೀಡುವ ಅನುದಾನವನ್ನು ಅದೇ ವರ್ಷ ಶೇ.100ರಷ್ಟು ಬಳಕೆ ಮಾಡುತ್ತಿದೆ. ಶೇ 98ರಷ್ಟು ತೆರಿಗೆ ಸಂಗ್ರಹ ಆಗುತ್ತಿದೆ. ದಿನದ 24 ಗಂಟೆಯೂ ನೀರು ಪೂರೈಸಲಾಗುತ್ತಿದೆ. ಇತರೆ ಯಾವ ನಗರಸಭೆಯ್ಲ್ಲಲೂ ಕೆಲಸ ಇಷ್ಟು ಸಮರ್ಪಕವಾಗಿ ಆಗುತ್ತಿಲ್ಲ~ ಎಂದರು.

`ಉಡುಪಿ ನಗರಸಭೆ ವ್ಯಾಪ್ತಿಯಲ್ಲಿ ಪರಿಶಿಷ್ಟರ ಸಂಖ್ಯೆ ಒಟ್ಟು ಜನಸಂಖ್ಯೆಯ ಶೇ 10ಕ್ಕಿಂತ ಕಡಿಮೆ. ಆದರೆ ಅವರಿಗೆ ಸೌಲಭ್ಯ ಮಾತ್ರ ಶೇ 225ರಷ್ಟು ದೊರಕುತ್ತಿದೆ~ ಎಂದರು. ಜಿಲ್ಲಾಧಿಕಾರಿ ಡಾ.ಎಂ.ಟಿ.ರೇಜು ನಗರ ಸಭೆ ಕಾರ್ಯವೈಖರಿ ಶ್ಲಾಘಿಸಿದರು.

ನಗರಸಭೆಗೂ `ಡಾಟಾ ಕಾರ್ಡ್~: ಶಾಸಕ ರಘುಪತಿ ಭಟ್ ಮಾತನಾಡಿ, `ಪ್ರಸ್ತುತ ಉಡುಪಿ ನಗರಸಭೆ ವ್ಯಾಪ್ತಿಯ ಎಲ್ಲ ಪರಿಶಿಷ್ಟರ ಸಮಗ್ರ ಮಾಹಿತಿ ಕಲೆ ಹಾಕಲಾಗಿದ್ದು, ಅವರಿಗೆಲ್ಲ `ಡಾಟಾ ಕಾರ್ಡ್~ ನೀಡಲಾಗುತ್ತಿದೆ. ಇದರಿಂದ ಫಲಾನುಭವಿಗಳನ್ನು ಗುರುತಿಸಲು ಸಹಾಯವಾಗುತ್ತದೆ. ಇದೇ ರೀತಿ ಇಡೀ ಉಡುಪಿ ನಗರಸಭೆ ವ್ಯಾಪ್ತಿಯಲ್ಲಿ `ಡಾಟಾ ಕಾರ್ಡ್~ ನೀಡಬೇಕು~ ಎಂದರು.

ಉಡುಪಿ ನಗರಸಭೆ ಅಧ್ಯಕ್ಷ ಕಿರಣ್‌ಕುಮಾರ್ ಅಧ್ಯಕ್ಷತೆ ವಹಿಸಿದ್ದರು.ತಾ.ಪಂ. ಅಧ್ಯಕ್ಷ ದೇವದಾಸ್ ಹೆಬ್ಬಾರ್, ನಗರಸಭಾ ಉಪಾಧ್ಯಕ್ಷೆ ಭಾರತಿ ಚಂದ್ರಶೇಖರ್, ಸ್ಥಾಯಿ ಸಮಿತಿ ಅಧ್ಯಕ್ಷ ನವೀನ್ ಭಂಡಾರಿ, ಸದಸ್ಯರಾದ ದಿನಕರ ಶೆಟ್ಟಿ, ಯಶಪಾಲ ಸುವರ್ಣ, ವಸಂತಿ ಶೆಟ್ಟಿ, ರವಿ ಅಮೀನ್, ಇಂದಿರಾ ಶೇಖರ್, ಆಯುಕ್ತ ಗೋಕುಲದಾಸ್ ನಾಯಕ್ ಮತ್ತಿತರರು ಸಮಾವೇಶದಲ್ಲಿ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT