ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಡುಪಿ ಮಠದ ಪಂಕ್ತಿ-ಭೇದ: ಪ್ರತಿಭಟನೆಗೆ ಸಿಪಿಎಂ ನಿರ್ಣಯ

Last Updated 10 ಜನವರಿ 2012, 19:30 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಉಡುಪಿ ಮಠಗಳಲ್ಲಿ ನಿರಂತರವಾಗಿ ಪಂಕ್ತಿ-ಭೇದ ಮತ್ತು ಜಾತಿ-ಭೇದ ನಡೆಯುತ್ತಿದೆ ಎಂದು ಆರೋಪಿಸಿರುವ ಸಿಪಿಎಂ ಇದೇ ಪ್ರಪ್ರಥಮ ಬಾರಿಗೆ ಇಂಥ ಆಚರಣೆ ವಿರುದ್ಧ ರಾಜ್ಯಮಟ್ಟದ ಪ್ರತಿಭಟನೆಯನ್ನು ಜ. 26ರಂದು ಹಮ್ಮಿಕೊಂಡಿದೆ. ನಗರದಲ್ಲಿ ನಡೆಯುತ್ತಿರುವ ಸಿಪಿಎಂ 20ನೇ ರಾಜ್ಯ ಸಮ್ಮೇಳನವು ಮಂಗಳವಾರ ಈ ನಿರ್ಣಯ ಅಂಗೀಕರಿಸಿದೆ.

`ದೇವಾಲಯ, ಮಠಗಳಲ್ಲಿ ಬೇರೆ ಬೇರೆ ಜಾತಿಯವರಿಗೆ ವಿವಿಧ ಪಂಕ್ತಿಭೇದ ಆಚರಣೆ ನಡೆಸಲಾಗುತ್ತಿದೆ. ರಾಜ್ಯದ ಸುಮಾರು 215 ದೇವಾಲಯ ಮತ್ತು ಮಠಗಳಲ್ಲಿ ನಿರಾತಂಕವಾಗಿ ಪಂಕ್ತಿಭೇದ ಮುಂದುವರೆದಿದ್ದು, ಇದಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಉಡುಪಿ ಮಠದ ಎದುರು ಪ್ರತಿಭಟನೆ ನಡೆಸಲು ನಿರ್ಣಯಿಸಲಾಗಿದೆ~ ಎಂದು ಸಿಪಿಎಂ ಜಿಲ್ಲಾ ಘಟಕದ ಕಾರ್ಯದರ್ಶಿ ಜಿ.ವಿ.ಶ್ರೀರಾಮರೆಡ್ಡಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

`ಪಂಕ್ತಿ ನೆಪದಲ್ಲಿ ವಿಂಗಡಿಸಲು ಜನರ ಮೇಲಂಗಿಗಳನ್ನು ತೆಗೆದು ಬರಿಮೈಯಲ್ಲಿ ಊಟ ನೀಡಲಾಗುತ್ತದೆ. ಆಕಸ್ಮಿಕವಾಗಿ ಬೇರೆ ಜಾತಿಯವರು ಬ್ರಾಹ್ಮಣರ ಪಂಕ್ತಿಯಲ್ಲಿ ಊಟಕ್ಕೆ ಕೂತರೆ, ಅವರನ್ನು ಊಟದ ಮಧ್ಯೆಯೇ ಎಬ್ಬಿಸಲಾಗುತ್ತದೆ. ಇಂಥ ಮೌಢ್ಯ, ಕಂದಾಚಾರದ ಆಚರಣೆಗಳನ್ನು ಸಂಪೂರ್ಣವಾಗಿ ನಿಲ್ಲಿಸಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಲಾಗುವುದು~ ಎಂದು ಅವರು ಹೇಳಿದರು.

ಮಡೆ ಮಡೆಸ್ನಾನ ಎಂಬ ಅಮಾನವೀಯ, ಅಸಹ್ಯಕರ ಆಚರಣೆ ಕೂಡ ಈ ರೀತಿಯ ಪಂಕ್ತಿಭೇದದಿಂದಲೇ ಉದ್ಭವಿಸಿದ್ದು. ಈ ಎಲ್ಲ ರೀತಿಯ ಅಮಾನವೀಯ ವರ್ತನೆಗಳ ವಿರುದ್ಧ ನಡೆಸುವ ಪ್ರತಿಭಟನೆಗೆ ಇತರ ಪ್ರಗತಿಪರ ಸಂಘಟನೆಗಳು ಸಹ ಬೆಂಬಲ ನೀಡಲಿವೆ~ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT