ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಣಕಲ್ ಸಿದ್ಧಪ್ಪಜ್ಜನಿಗೆ ರೂ 65 ಲಕ್ಷದ ಬೆಳ್ಳಿರಥ

Last Updated 17 ಡಿಸೆಂಬರ್ 2013, 19:37 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಇಲ್ಲಿಯ ಉಣಕಲ್‌ ಸಿದ್ಧಪ್ಪಜ್ಜನ ತೊಟ್ಟಿಲೋತ್ಸವ ನಡೆಯುವ ಇದೇ 20ರಂದು ಮೂಲ ಗದ್ದುಗೆ ಮಠಕ್ಕೆ 94 ಕೆ.ಜಿ. ತೂಕದ ಬೆಳ್ಳಿ ರಥ ಅರ್ಪಿಸಲಾಗುತ್ತಿದೆ.

ಸದ್ಗುರು ಸಿದ್ಧಪ್ಪಜ್ಜನ ಸೇವಾ ಸಮಿತಿಯ ಅಧ್ಯಕ್ಷ ಮಲ್ಲಿಕಾರ್ಜುನ ಬಿದರಿಕೊಪ್ಪ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಬೆಳ್ಳಿರಥ ಕುರಿತಾದ ವಿವರಗಳನ್ನು ನೀಡಿದರು.

ಸಿದ್ಧಪ್ಪಜ್ಜನ ಸೇವಾ ಸಮಿತಿಯ ವತಿಯಿಂದ ಭಕ್ತರಿಂದ ದೇಣಿಗೆ ಸಂಗ್ರಹಿಸಿ ₨65 ಲಕ್ಷ ವೆಚ್ಚದಲ್ಲಿ 11.4 ಅಡಿ ಎತ್ತರದ ರಥ ನಿರ್ಮಿಸಲಾಗಿದೆ. ಇದೇ 19 ಹಾಗೂ 20ರಂದು ಎರಡು ದಿನ ಕಾಲ ರಥ ಅರ್ಪಣೆ ಕುರಿತಾದ ಧಾರ್ಮಿಕ ವಿಧಿ–ವಿಧಾನಗಳು ನಡೆಯಲಿವೆ ಎಂದರು.

ಉತ್ತರ ಕನ್ನಡ ಜಿಲ್ಲೆ ಕುಮಟಾದ ಶಿಲ್ಪಿ ಸತೀಶ್ ಶೆಟ್ಟಿ ಸತತ ಆರು ತಿಂಗಳು ಶ್ರಮವಹಿಸಿ ಬೆಳ್ಳಿ ರಥ ನಿರ್ಮಿಸಿದ್ದು, 19ರಂದು ಬೆಳಿಗ್ಗೆ 8 ಗಂಟೆಗೆ ಬಾಲೇಹೊಸೂರು ಮಠದ ದಿಂಗಾಲೇಶ್ವರ ಸ್ವಾಮೀಜಿ ರಥ ಉದ್ಘಾಟಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT