ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಉತ್ತಮ ಕಾರ್ಯಕ್ಕೆ ಸಹಕಾರ ಅಗತ್ಯ'

Last Updated 18 ಫೆಬ್ರುವರಿ 2013, 6:55 IST
ಅಕ್ಷರ ಗಾತ್ರ

ಕೂಡ್ಲಿಗಿ: `ಇಲಾಖೆಯಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸಲು ಪ್ರತಿಯೊಬ್ಬರ ಸಹಕಾರವೂ ಅಗತ್ಯ' ಎಂದು ವರ್ಗಾವಣೆಗೊಂಡಿರುವ ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎಂ.ಮಲ್ಲಿಕಾರ್ಜುನ ಸ್ವಾಮಿ ಹೇಳಿದರು.

ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಪ್ರೌಢಶಾಲಾ ಸಹಶಿಕ್ಷಕರ ಸಂಘದ ವತಿಯಿಂದ ಈಚೆಗೆ ಏರ್ಪಡಿಸಿದ್ದ ವರ್ಗಾವಣೆಗೊಂಡ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಬೀಳ್ಕೊಡುಗೆ ಹಾಗೂ ನೂತನ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸ್ವಾಗತ ಕಾರ್ಯಕ್ರಮದಲ್ಲಿ ಮಾತನಾಡಿದರು.

ತಾಲ್ಲೂಕಿನಲ್ಲಿ ದಕ್ಷ ಸಹೃದಯಿ ಶಿಕ್ಷಕರಿದ್ದಾರೆ, ಅವರ ಉತ್ತಮ ಕಾರ್ಯದಿಂದ 4 ವರ್ಷಗಳು ಯಾವುದೇ ಸಮಸೈಗಳಿಲ್ಲದಂತೆ ಕಾರ್ಯನಿರ್ವಹಿಸಲು ಸಾಧ್ಯವಾಯಿತು ಎಂದು ತಿಳಿಸಿದರು.

ಸ್ವಾಗತ ಸ್ವೀಕರಿಸಿದ ನೂತನ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಆರ್.ಮಂಜುನಾಥ್ `ಜಿಲ್ಲೆಯಲ್ಲಿ ತಾಲ್ಲೂಕು ಅತ್ಯಂತ ವಿಶಾಲವಾಗಿದ್ದು, ಶೈಕ್ಷಣಿಕವಾಗಿ, ಆರ್ಥಿಕವಾಗಿ ಹಿಂದುಳಿದ ತಾಲ್ಲೂಕೆಂದು ಘೋಷಿತವಾಗಿದೆ.

ಶೈಕ್ಷಣಿಕವಾಗಿ ಇನ್ನೂ ಹೆಚ್ಚು ಸುಧಾರಣೆಗಳಾಗುವುದು ಅತ್ಯಂತ ಅವಶ್ಯವಿದೆ. ಶಿಕ್ಷಣದ ಸುಧಾರಣೆಗಾಗಿ ಶಿಕ್ಷಕರೆಲ್ಲರೂ ಶ್ರಮವಹಿಸಿ ಕಾರ್ಯನಿರ್ವಹಿಸಬೇಕು, ಉತ್ತಮ ಶೈಕ್ಷಣಿಕ ತಾಲ್ಲೂಕೆಂದು ರೂಪುಗೊಳ್ಳಲು ಎಲ್ಲರೂ ಸಹಕರಿಸಬೇಕು' ಎಂದು ಅವರು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಆರ್.ಶ್ರಿಧರ್, ಸಹಶಿಕ್ಷಕರು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಿ ಸಂಘವನ್ನು ಬೆಳೆಸಬೇಕು. ಈ ನಿಟ್ಟಿನಲ್ಲಿ ಎಲ್ಲ ಶಿಕ್ಷಕರ ಸಹಾಯ ಮತ್ತು ಸಹಕಾರವು ಅಗತ್ಯವಿದೆ ಎಂದರು.

ಸಂಘದ ಉಪಾಧ್ಯಕ್ಷ  ಪಿ.ಫಣಿರಾಜ್, ಕಾಲೇಜಿನ ಉಪ ಪ್ರಾಚಾರ್ಯ ಕೆ.ಮಾರಪ್ಪ, ಸಂಘದ ಪದಾಧಿಕಾರಿಗಳಾದ ಸಿ.ಎಸ್.ಲೋಕೇಶ್, ಟಿ.ಎಸ್.ಬಸವರಾಜ, ಲಿಂಗಪ್ಪ, ಪಿ.ಕಮಾಟ್ರ , ಶಂಕರನಾಯ್ಕ, ಎನ್.ಎಂ.ವಾಗೀಶ ಉಪಸ್ಥಿತರಿದ್ದರು.

ಸಂಗೀತ ಶಿಕ್ಷಕಿ ಸರೋಜ ಮತ್ತು ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಸಂಘದ ಕಾರ್ಯದರ್ಶಿ ಎಸ್.ಕೊಟ್ರೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಹಕಾರ್ಯದರ್ಶಿ ಕೆ.ಎಚ್.ಎಂ. ಶಶಿಧರ್ ಸ್ವಾಗತಿಸಿದರು. ಖಜಾಂಚಿ ಎಸ್.ನಾಗರಾಜ್ ವಂದಿಸಿದರು. ಜಿಲ್ಲಾ ಸಹ ಕಾರ್ಯದರ್ಶಿ ಪಿ.ಶಿವರಾಜ್ ನಿರೂಪಿಸಿದರು. ತಾಲ್ಲೂಕಿನ ಪ್ರೌಢಶಾಲಾ ಸಹಶಿಕ್ಷಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT