ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತಮ ಗುಣಗಳನ್ನು ಮೈಗೂಡಿಸಿಕೊಳ್ಳಲು ಕರೆ

Last Updated 3 ಜೂನ್ 2011, 6:40 IST
ಅಕ್ಷರ ಗಾತ್ರ

ಎಚ್.ಡಿ. ಕೋಟೆ:  ಗಾಳಿ, ನೀರು ಮತ್ತು ಸೂರ್ಯನ ಬೆಳಕಿಗೆ ನಿಗದಿತ ವೇಗವಿರುತ್ತದೆ. ಆದರೆ ಮನುಷ್ಯನ ಮನಸ್ಸಿನ ಚಲನೆಗೆ ಯಾವುದೇ ನಿಗದಿತ ವೇಗವಿಲ್ಲ ಎಂದು ಸುತ್ತೂರು ಮಠದ  ಶಿವರಾತ್ರಿದೇಶಿಕೇಂದ್ರಸ್ವಾಮೀಜಿ ಹೇಳಿದರು.

ಪಟ್ಟಣದ ಶಿವರಾತ್ರೀಶ್ವರ ಮಂಗಳ ಮಂಟಪದಲ್ಲಿ 13ನೇ ವರ್ಷದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಗುರುವಾರ ಮಾತನಾಡಿದ ಅವರು ಪಂಚಭೂತಗಳಿಗೆ ಇಲ್ಲದ ಶಕ್ತಿಯನ್ನು ದೇವರು ಮನುಷ್ಯನಿಗೆ ನೀಡಿದ್ದು, ಕ್ಷಣ ಮಾತ್ರದಲ್ಲಿ ಮನಸ್ಸು ಯಾವುದೇ ಸ್ಥಳಕ್ಕೆ ಹೋಗಿಬರುವಂತಹ ಶಕ್ತಿಯನ್ನು ಹೊಂದಿದೆ. ಆದ್ದರಿಂದ ಮನಸ್ಸನ್ನು ಸದೃಢವಾಗಿ ಇಟ್ಟುಕೊಳ್ಳಲು ಧ್ಯಾನ ಮತ್ತು ಯೋಗಗಳನ್ನು ಮಾಡುವುಬೇಕು ಎಂದರು.

ಬಸವಣ್ಣನವರ ಆದರ್ಶಗಳನ್ನು ಪಾಲಿಸುವ ಮೊದಲು ನಮ್ಮಲ್ಲಿರುವ ಒಂದೊಂದೆ ಕೆಟ್ಟ ಗುಣಗಳನ್ನು ತ್ಯಜಿಸಿ ಉತ್ತಮವಾದ ಗುಣಗಳನ್ನು  ಅಳವಡಿಕೊಳ್ಳಬೇಕು. ನಮ್ಮ ನಮ್ಮ ತನುವ ಸಂತೈಸಿಕೊಳ್ಳಬೇಕು. ಅವರವರ ಭಾವಕ್ಕೆ ತಕ್ಕಂತೆ ಲೋಕವು ಕಾಣುತ್ತದೆ. ಆದ್ದರಿಂದ ನಾವು ನೋಡುವ ರೀತಿ ಬದಲಾದರೆ ಬಸವಣ್ಣನವರ ಆದರ್ಶಗಳನ್ನು ಪಾಲಿಸಿದಂತಾಗುತ್ತದೆ ಎಂದು ಹೇಳಿದರು.

ಕರ್ನಾಟಕ ರಾಜ್ಯ ಡಾ.ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷ ಎ.ಆರ್. ಕೃಷ್ಣಮೂರ್ತಿ ಮಾತನಾಡಿ ಬಸಬಣ್ಣನವರ ವಚನಗಳು ಆಚರಣೆಗೆ ಬರಬೇಕು, ಆವರ ಅನುಭವ ಮಂಟಪ ಇಂದಿಗೂ ಪ್ರಶಸ್ತವಾಗಿದೆ. ಇಂತಹ ಅನುಭವ ಮಂಟಪವನ್ನು ರಾಷ್ಟ್ರಮಟ್ಟದಲ್ಲಿ ಸ್ಥಾಪಿಸಬೇಕು. ಇದರಿಂದ ಸಮಾಜದಲ್ಲಿರುವ ಅಸಮಾನತೆ ಮತ್ತು ಅಷ್ಪೃಶ್ಯತೆಯನ್ನು ದೂರಮಾಡಲು ಸಾಧ್ಯ. ಇಂತಹ ಬಸವ ತತ್ವವನ್ನು ಯುವ ಜನತೆ ಅರಿತು    ಆಚರಣೆಗೆ ತರಬೇಕು ಎಂದು ಹೇಳಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಟಿ. ಬಸವರಾಜು ಬಸವಣ್ಣ ಕುರಿತು ಉಪನ್ಯಾಸ ನೀಡಿದರು, ಶಾಸಕ ಚಿಕ್ಕಣ್ಣ ಮತ್ತು ತೆಂಡೆಕೆರೆ ಶಿವಾಚಾರ್ಯಸ್ವಾಮೀಜಿ ಮಾತನಾಡಿದರು.

ಕಾರ್ಯಕ್ರಮಕ್ಕೂ ಮುನ್ನ ಪಟ್ಟಣದ ಪದವಿ ಪೂರ್ವ ಕಾಲೇಜಿನ ಆವರಣದಿಂದ ಬಸವಣ್ಣನವರ ಭಾವಚಿತ್ರದೊಂದಿಗೆ ನಂದಿ ಧ್ವಜ ಕುಣಿತ, ಡೊಳ್ಳು ಕುಣಿತ, ಮಹಿಳಾ ತಂಡದ ವೀರಗಾಸೆ, ನಗಾರಿ, ಭಜನಾ ಮೇಳಗಳು ಪ್ರಮುಖ ರಸ್ತೆಯಲ್ಲಿ ಸಾಗಿ ಸಭಾ ಮಂಟಪವನ್ನು ಸೇರಿದವು.

ಕಾರ್ಯಕ್ರಮದಲ್ಲಿ ಎಸ್.ಎಸ್.ಎಲ್.ಸಿ.ಯಲ್ಲಿ ಅತಿಹೆಚ್ಚು ಅಂಕ ಪಡೆದ ವಿದ್ಯಾರ್ಥಿಳಿಗೆ ಹಾಗೂ ಎಂ.ಡಿ.ಸಿ.ಸಿ. ಬ್ಯಾಂಕಿನ ವ್ಯವಸ್ಥಾಪಕರಾದ ಸಿ. ಬಸವೇಗೌಡರಿಗೆ ಮತ್ತು ಉದ್ಯಮಿ ಯು.ಎಸ್. ಶೇಖರ್ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲ್ಲೂಕು ಘಟಕದ ಅಧ್ಯಕ್ಷ ಮೊತ್ತಬಸವರಾಜಪ್ಪ ವಹಿಸಿದ್ದರು. ತಾಲ್ಲೂಕಿನ ವಿವಿಧ ಮಠಾಧೀಶರು, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಗೋಪಾಲಸ್ವಾಮಿ, ಪ.ಪಂ. ಅಧ್ಯಕ್ಷ ರಫೀಕ್, ಜಿ.ಪಂ. ಸದಸ್ಯರಾದ ಎಚ್.ಸಿ. ಮಂಜುನಾಥ್, ಭಾಗ್ಯ ಮತ್ತು ಮಾಜಿ ಸದಸ್ಯರಾದ  ರುದ್ರಪ್ಪ, ಚಿಕ್ಕವೀರನಾಯಕ, ತಾ.ಪಂ. ಉಪಾಧ್ಯಕ್ಷ ಸುಬ್ಬೇಗೌಡ, ಸದಸ್ಯ ಸಾನಂದಕುಮಾರ್, ಸೋಮಾಚಾರ್, ತಾಲ್ಲೂಕು ಬಿಜೆಪಿ ಅಧ್ಯಕ್ಷ ಚ್.ಪಿ.ಶಿವರಾಜಪ್ಪ, ಮುಖಂಡರಾದ ಜೆ.ಪಿ.ಚಂದ್ರಶೇಖರ್, ಎಚ್.ಸಿ.ಶಿವಣ್ಣ,ಮಾದರಾಜು, ವೈ.ಟಿ. ಮಹೇಶ್,ಸಿ.ಕೆ.ಗಿರೀಶ್, ಗುರುಸ್ವಾಮಿ, ಮಹದೇಸ್ವಾಮಿ, ಬಿ.ಎಂ. ಶಂಕರಲಿಂಗೇಗೌಡ, ಜವರಯ್ಯ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT