ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತಮ ಬದುಕಿಗೆ ಮಾರ್ಗದರ್ಶನ ಅಗತ್ಯ

Last Updated 3 ಜನವರಿ 2012, 19:30 IST
ಅಕ್ಷರ ಗಾತ್ರ

ದಾವಣಗೆರೆ: ಮನುಷ್ಯನ ಬದುಕನ್ನು ಒಳ್ಳೆಯ ರೀತಿಯಲ್ಲಿ ರೂಪಿಸಿಕೊಳ್ಳಲು ಮಾರ್ಗದರ್ಶನ ಅಗತ್ಯ ಎಂದು ಹುಬ್ಬಳ್ಳಿಯ ನಿವೃತ್ತ ಪ್ರಾಂಶುಪಾಲರಾದ ಮಹಾನಂದಾ ಹುನ್ನೂರು ಹೇಳಿದರು.

ನಗರದ ಬಸವಕೇಂದ್ರ ಮುರುಘರಾಜೇಂದ್ರ ವಿರಕ್ತಮಠ, ಮುರುಘರಾಜೇಂದ್ರ ಶಿವಯೋಗಾಶ್ರಮ ಟ್ರಸ್ಟ್ ವತಿಯಿಂದ ಮಂಗಳವಾರ ನಡೆದ ಶರಣ ಸಂಗಮ ಕಾರ್ಯಕ್ರಮದಲ್ಲಿ ~ಜೀವನ ಹಾಗೂ ಮಾರ್ಗದರ್ಶನ~ ವಿಷಯದ ಕುರಿತು ಅವರು ಮಾತನಾಡಿದರು.

ತಾಯಿಯ ಗರ್ಭದಲ್ಲಿರುವಾಗಲೇ ಮಗುವಿಗೆ ಮಾರ್ಗದರ್ಶನ ದೊರೆಯುತ್ತದೆ. ಇದು ವೈಜ್ಞಾನಿಕವಾಗಿಯೂ ಸಾಬೀತಾಗಿದೆ. ತಾಯಿ ಸಂತೋಷವಾಗಿದ್ದಷ್ಟೂ ಮಗುವಿನ ಆರೋಗ್ಯದ ಮೇಲೆ ಒಳ್ಳೆಯ ಪರಿಣಾಮ ಬೀರುತ್ತದೆ. ಮಕ್ಕಳಿಗೆ ಶಿಕ್ಷಕರ ಮಾರ್ಗದರ್ಶನ, ಮನೆಯವರ ಪ್ರೀತಿ ದೊರೆತರೆ ಅವರು ಸೂಕ್ಷ್ಮಮತಿಗಳಾಗುತ್ತಾರೆ ಎಂದು ಅಭಿಪ್ರಾಯಪಟ್ಟರು.

ಮನುಷ್ಯನಿಗೆ ಅತ್ಯಂತ ಸೂಕ್ಷ್ಮವಾದ ಪಂಚೇಂದ್ರಿಯಗಳಿವೆ. ಅವುಗಳನ್ನು ಮನಸ್ಸಿನ ನಿಯಂತ್ರಣಕ್ಕೆ ಒಳಪಡಿಸುವ ವಿಶೇಷ ಶಕ್ತಿ ಅವನಿಗಿದೆ. ಅವನ ಬದುಕು ಪ್ರಾಣಿಗಳಂತಲ್ಲ. ಆದ್ದರಿಂದ ಹುಟ್ಟು ಸಾವಿನ ಮಧ್ಯೆ ಇರುವ ಬದುಕನ್ನು ವಿಶೇಷವಾಗಿ ರೂಪಿಸಿಕೊಳ್ಳಬೇಕು ಎಂದು ನುಡಿದರು.

ಮನುಷ್ಯನ ಬದುಕಿಗೆ ಪ್ರಕೃತಿ, ಪರಿಸರ, ರಾಜಕೀಯ, ಧಾರ್ಮಿಕ ವಿದ್ಯಮಾನಗಳು ಮಾರ್ಗದರ್ಶನ ನೀಡುತ್ತವೆ. ಒಳ್ಳೆಯ ಪುಸ್ತಕಗಳ ಓದು, ನಾಟಕಗಳೂ ಕೂಡಾ ಪರಿಣಾಮ ಬೀರಿದ ಉದಾಹರಣೆಗಳು ಇವೆ ಎಂದು ನುಡಿದರು.

ವಚನಗಳು ಮಾನವೀಯ ಬದುಕನ್ನು ರೂಪಿಸುವ ನೀತಿ ಸಂಹಿತೆಯಾಗಿದೆ. ಅಂತೆಯೇ ಬಸವಣ್ಣನವರು ಸಾರಿದ ಮಾನವೀಯ ತತ್ವಗಳನ್ನು ಅಳವಡಿಸಿಕೊಳ್ಳಬೇಕು ಎಂದರು.

ವಿರಕ್ತಮಠದ ಬಸವಪ್ರಭು ಸ್ವಾಮೀಜಿ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪ ನಿರ್ದೇಶಕ ಡಾ.ಕೆ. ರಾಮೇಶ್ವರಪ್ಪ, ಬೆಸ್ಕಾಂ ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್ ಕೆ.ಸಿ. ಕುಮಾರಸ್ವಾಮಿ ಉಪಸ್ಥಿತರಿದ್ದರು. ರೇವಣಸಿದ್ದಪ್ಪ ಮತ್ತು ತಂಡದವರಿಂದ ವಚನಗಾಯನ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT