ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತಮ ಮೌಲ್ಯ–ಬ್ರಹ್ಮಶ್ರೀ ಕೊಡುಗೆ ಅಪಾರ

ವಿಶ್ವನಾಥ ಕ್ಷೇತ್ರ: ನಾರಾಯಣ ಗುರುಗಳ ಜನ್ಮದಿನೋತ್ಸವದಲ್ಲಿ ದಿನೇಶ್ ಅಮೀನ್‌ ಮಟ್ಟು ಅಭಿಪ್ರಾಯ
Last Updated 16 ಸೆಪ್ಟೆಂಬರ್ 2015, 8:43 IST
ಅಕ್ಷರ ಗಾತ್ರ

ಶಿರ್ವ: ಬ್ರಹ್ಮಶ್ರೀ ನಾರಾಯಣ ಗುರು ಗಳನ್ನು ಸಮಾಜೋದ್ಧಾರಕರೆನ್ನುವ ನಾವು ಅವರನ್ನು ಇಂದು ಕೇವಲ ಆಧ್ಯಾ ತ್ಮಿಕ ಗುರುಗಳನ್ನಾಗಿ ಮಾತ್ರ ಬಳಸಿ ಕೊಳ್ಳುತ್ತಿದ್ದೇವೆ. ಧಾರ್ಮಿಕತೆಗಿಂತ ಸಮಾಜದಲ್ಲಿ ಉತ್ತಮ ಮೌಲ್ಯಗಳನ್ನು ನಾವು ಕಾಪಾಡಿಕೊಳ್ಳಲು ಅವರು ನೀಡಿ ರುವ ಕೊಡುಗೆ ಅಪಾರವಾಗಿದೆ ಎಂದು ಮುಖ್ಯಮಂತ್ರಿಯವರ ಮಾಧ್ಯಮ ಸಲಹೆಗಾರ ದಿನೇಶ್ ಅಮೀನ್ ಮಟ್ಟು ಹೇಳಿದರು.

ಕಟಪಾಡಿ ಶ್ರೀ ವಿಶ್ವನಾಥ ಕ್ಷೇತ್ರದಲ್ಲಿ ಜಿಲ್ಲಾ ಬಿಲ್ಲವರ ಪರಿಷತ್ತಿನ ನೇತೃತ್ವದಲ್ಲಿ ವಿವಿಧ ಸಂಘ-ಸಂಸ್ಥೆ, ಗರೋಡಿ-ಮಂದಿ ರಗಳ ಸಹಕಾರದೊಂದಿಗೆ ಭಾನುವಾರ ನಡೆದ ಬ್ರಹ್ಮಶ್ರೀ ನಾರಾಯಣಗುರುಗಳ 161ನೇ ಜನ್ಮದಿನೋತ್ಸವದ ಸಂದೇಶ ಜಾಥಾದ ಸಮಾರೋಪ ಸಮಾರಂಭ ದಲ್ಲಿ ಅವರು ದಿಕ್ಸೂಚಿ ಭಾಷಣ ಮಾಡಿದರು.

ಸಮಾಜೋದ್ಧಾರಕರಾಗಿ ಮೂಡಿ ಬಂದಿದ್ದ ಬ್ರಹ್ಮಶ್ರೀ ನಾರಾಯಣಗುರುಗಳ ತತ್ವ ಮತ್ತು ಸಂದೇಶಗಳನ್ನು ನಮ್ಮ ಜೀವನದಲ್ಲೂ ಅಳವಡಿಕೊಳ್ಳಬೇಕಾ ಗಿದೆ. ಇತರರಿಗೆ ಸಲಹೆ ನೀಡುವ ಮೊದಲು ನಾವು ನಮ್ಮಲ್ಲಿ ಆತ್ಮಾವ ಲೋಕನ ಮಾಡಿಕೊಳ್ಳುವುದು ಇಂದಿನ ಅನಿವಾರ್ಯತೆಯಾಗಿದೆ. ಕಾರಣ ಇತರರಿಗೆ ಹೇಳುವ ಬದಲು ನಾವು ಎಷ್ಟರ ಮಟ್ಟಿಗೆ ಇದನ್ನು ಪಾಲಿಸುತ್ತಿದ್ದೇವೆ ಎನ್ನುವುದನ್ನು ಇದರಿಂದ ತಿಳಿದು ಕೊಳ್ಳಲು ಸಾಧ್ಯ ಎಂದು ಅವರು ನುಡಿದರು.

ಉಡುಪಿ ಜಿಲ್ಲಾ ಬಿಲ್ಲವರ ಪರಿಷತ್ತಿನ ಅಧ್ಯಕ್ಷ ಶೇಖರ ಕರ್ಕೇರ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಚಲನಚಿತ್ರ ನಟ ಮತ್ತು ನಿರ್ಮಾಪಕ ರಾಜಶೇಖರ್ ಕೋಟ್ಯಾನ್ ಹಾಗೂ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷೆ ಜಾನಕಿ ಬ್ರಹ್ಮಾವರ್ ಅವರನ್ನು ಸನ್ಮಾನಿ ಸಲಾಯಿತು. ಸಮಾಜದ ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ಈ ಸಂದರ್ಭ ದಲ್ಲಿ ವಿತರಿಸಲಾಯಿತು.

ಕಟಪಾಡಿ ಶ್ರೀ ವಿಶ್ವನಾಥ ಕ್ಷೇತ್ರದ ಅಧ್ಯಕ್ಷ ಅಶೋಕ್ ಎಂ. ಸುವರ್ಣ, ಪ್ರಧಾನ ಕಾರ್ಯದರ್ಶಿ ಹರಿಶ್ಚಂದ್ರ ಅಮೀನ್, ಪರ್ಕಳ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘದ ಅಧ್ಯಕ್ಷ ಶೇಖರ್ ಪೂಜಾರಿ, ಯುವ ವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷ ಸಂತೋಷ್ ಕುಮಾರ್, ಬಿಲ್ಲವ ಪರಿಷತ್ ಮಹಿಳಾ ಘಟಕದ ಅಧ್ಯಕ್ಷೆ ಶೋಭಾ ಅಮೀನ್ ಮುಖ್ಯ ಅತಿಥಿಗಳಾಗಿದ್ದರು. ಉಡುಪಿ ಜಿಲ್ಲಾ ಬಿಲ್ಲವರ ಪರಿಷತ್ತಿನ ಅಧ್ಯಕ್ಷ ಶೇಖರ್ ಕರ್ಕೇರ ಸ್ವಾಗತಿಸಿದರು. ಕಾರ್ಯದರ್ಶಿ ಪ್ರಭಾಕರ ವಂದಿಸಿದರು. ಸಂಘಟಕರಾದ ನವೀನ್ ಅಮೀನ್, ಗುಣವತಿ ರಮೇಶ್  ನಿರೂಪಿಸಿದರು.

‘ವೈದಿಕತೆ ನಿರಾಕರಿಸಿದ  ಗುರು’
ನಾರಾಯಣ ಗುರುಗಳ ಸಂದೇಶ ವನ್ನು ಸರಿಯಾಗಿ ಅರ್ಥ ಮಾಡಿ ಕೊಳ್ಳದೆ ಅವರನ್ನು ಪವಾಡ ಪುರುಷನ ಮಟ್ಟಕ್ಕೆ ಏರಿಸುವ ಕಾರ್ಯದಲ್ಲಿ ತೊಡಗಿದರೆ ಅದು ನಾವು ಅವರಿಗೆ ಮಾಡಿದ ಅನ್ಯಾಯವಾಗುತ್ತದೆ. ಆರೋಗ್ಯವಂತ ಸಮಾಜ ಕಟ್ಟುವಲ್ಲಿ ಆಧ್ಯಾತ್ಮಿಕತೆ, ಜಾತ್ಯಾತೀತತೆ ಮತ್ತು ಔದ್ಯಮಶೀಲತೆ ಅವಶ್ಯ ಎಂಬ ಭಾವನೆ ಅವರದ್ದಾಗಿತ್ತು.  ವೈದಿಕತೆಯನ್ನು ನಿರಾಕರಿಸಿದ ನಾರಾಯಣ ಗುರುಗಳ ಸಂದೇಶವನ್ನು ಮರೆತು ಬಿಲ್ಲವರು ವೈದಿಕ ಶಾಹಿಗಳ ಕೈಗೊಂಬೆ ಯಾಗುತ್ತಿರುವುದು ವಿಷಾದನೀಯ. ದೇವಾಲಯಗಳನ್ನು ಕಟ್ಟುವ ಬದಲು ಉನ್ನತ ಶಿಕ್ಷಣ ಸಂಸ್ಥೆ ಮತ್ತು ವೈದ್ಯ ಕೀಯ ಆಸ್ಪತ್ರೆಗಳನ್ನು ಕಟ್ಟುವತ್ತ ಬಿಲ್ಲವ ಸಮಾಜ ಆಸಕ್ತಿ ತೋರಬೇ ಕಾದ ಅಗತ್ಯವಿದೆ ಎಂದು ದಿನೇಶ್ ಅಮಿನ್ ಮಟ್ಟು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT