ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಸಲಹೆ

Last Updated 22 ಸೆಪ್ಟೆಂಬರ್ 2011, 4:30 IST
ಅಕ್ಷರ ಗಾತ್ರ

ಹಳೇಬೀಡು: ಯುವಜನತೆಯ ದುಷ್ಟಭಾವನೆಗಳು ಸಮಾಜದ ಅಶಾಂತಿಗೆ ಕಾರಣ ಎಂದು ಚಿಕ್ಕಮಗಳೂರು ಪೊಲೀಸ್ ಇನ್ಸ್‌ಪೆಕ್ಟರ್ ಬಸವರಾಜು ತಿಳಿಸಿದರು.

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಮಾಜಶಾಶ್ತ್ರ ವೇದಿಕೆ ಆಶ್ರಯದಲ್ಲಿ ಈಚೆಗೆ ನಡೆದ `ಅಪರಾಧ ತಡೆಯುವಲ್ಲಿ ಯುವ ಜನತೆ ಪಾತ್ರ~ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು. ಕೌಟುಂಬಿಕ ವಿಘಟನೆ, ಬೆಳೆವ ವಾತಾವರಣ, ಸ್ನೇಹಿತರು, ನೆರೆಹೊರೆ ಸರಿ ಇಲ್ಲದಿದ್ದರೆ ಯುವಶಕ್ತಿ ದಾರಿ ತಪ್ಪುತ್ತದೆ. ವಿದ್ಯಾರ್ಥಿ ಜೀವನದಲ್ಲಿಯೇ ಉತ್ತಮ ವ್ಯಕ್ತಿತ್ವ ರೂಢಿಸಿಕೊಂಡರೆ ಸತ್ಪ್ರಜೆಗಳಾಗಬಹುದು ಎಂದರು.

ಸ್ಥಳೀಯ ಪಿಎಸ್‌ಐ ಪಿ.ಪಿ.ಸೊಮೇಗೌಡ ಮಾತನಾಡಿ, ಅಪರಾಧ ತಡೆಯಲು ತಾಳ್ಮೆ ಮುಖ್ಯವಾದ ಆಯುಧ. ತಂದೆ ತಾಯಿಗಳು ಉತ್ತಮ ವಾತವರಣದಲ್ಲಿ ಮಕ್ಕಳನ್ನು ಬೆಳೆಸಿದರೆ ಅವರು ದೇಶ ಕಟ್ಟುವ ಪ್ರಜೆಗಳಾಗುತ್ತಾರೆ ಎಂದರು.

ಪ್ರಭಾರಿ ಪ್ರಾಚಾರ್ಯ ಎಸ್.ನಾರಾಯಣ್ ಅಧ್ಯಕ್ಷತೆವಹಿಸಿದ್ದರು. ಸಮಾಜ ಶಾಸ್ತ್ರ ವಿಭಾಗ ಮುಖ್ಯಸ್ಥ ಡಾ.ದೇವರಯ್ಯ ಮಾತನಾಡಿದರು.ಉಪನ್ಯಾಸಕರಾದ ಕೆ.ಎಸ್.ದಿನೇಶ್, ವಿಜಯ್ ಕುಮಾರ್, ಈಶ್ವರಪ್ಪ, ದೊಡ್ಡೇಗೌಡ, ಪುಷ್ಪಲತಾ, ವನಿತಾ, ಎಚ್.ಎಂ.ಬಸವರಾಜು, ಅಧೀಕ್ಷಕ ಸತ್ಯಮೂರ್ತಿ, ಸಹಾಯಕ ಕಿರಣ್ ಇತರರು ಇದ್ದರು. ರೂಪಾ ನಿರೂಪಿಸಿ, ಶೋಭಾ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT