ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಇಂದು

ಶಿರಸಿ ಶೈಕ್ಷಣಿಕ ಜಿಲ್ಲೆ
Last Updated 5 ಸೆಪ್ಟೆಂಬರ್ 2013, 7:13 IST
ಅಕ್ಷರ ಗಾತ್ರ

ಶಿರಸಿ: ಶಿರಸಿ ಶೈಕ್ಷಣಿಕ ಜಿಲ್ಲೆ ವ್ಯಾಪ್ತಿಯ ಆರು ಪ್ರಾಥಮಿಕ ಶಾಲೆಯ ಶಿಕ್ಷಕರು ಹಾಗೂ ಐವರು ಪ್ರೌಢಶಾಲೆ ಶಿಕ್ಷಕರಿಗೆ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಕಟಿಸಲಾಗಿದೆ.

ಇಲ್ಲಿನ ವಿದ್ಯಾಧಿರಾಜ ಕಲಾಕ್ಷೇತ್ರದಲ್ಲಿ ಇದೇ 5ರಂದು ನಡೆಯಲಿರುವ ಶಿಕ್ಷಕ ದಿನಾಚರಣೆ ಹಾಗೂ ಗುರು ಗೌರವಾರ್ಪಣೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ನೀಡಲಾಗುವುದು.

ಪ್ರಾಥಮಿಕ ಶಾಲಾ ವಿಭಾಗ ಶಿರಸಿ ಗುಡ್ನಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕಿ ಸುಧಾ ನಾಗೇಶ ನಾಯ್ಕ, ಸಿದ್ದಾಪುರ ತಾಲ್ಲೂಕಿನ ಹೂಡ್ಲಮನೆ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ವಿ.ಟಿ.ಹೆಗಡೆ, ಯಲ್ಲಾಪುರ ಚಿನ್ನಾಪುರ ಸ.ಹಿ.ಪ್ರಾ. ಶಾಲೆಯ ಸಹ ಶಿಕ್ಷಕಿ ಸುಚೇತಾ ಮಿರಾಶಿ, ಮುಂಡಗೋಡ ಶಾಸಕರ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಡಿ.ಎಸ್.ಪಟಗಾರ, ಹಳಿಯಾಳ ಪ್ರದಾನಟ್ಟಿ ಸ.ಕಿ.ಪ್ರಾ. ಶಾಲೆಯ ಸಹ ಶಿಕ್ಷಕ ವಿ.ಪಿ.ಕೊರ್ರೆಕರ, ಜೊಯಿಡಾ ಸ.ಹಿ.ಪ್ರಾ. ಶಾಲೆಯ ಸಹ ಶಿಕ್ಷಕ ಮಹಾದೇವ ಹಳದನಕರ.

ಪ್ರೌಢಶಾಲಾ ವಿಭಾಗ: ಶಿರಸಿ ಕುಳವೆ-ಬರೂರು ಜನತಾ ವಿದ್ಯಾಲಯದ ಸಹ ಶಿಕ್ಷಕ ವಿನೋದ ಹೆಗಡೆ, ಯಲ್ಲಾಪುರ ಬಿಸಗೋಡ ಸರ್ಕಾರಿ ಪ್ರೌಢಶಾಲೆಯ ಚಿತ್ರಕಲೆ ಶಿಕ್ಷಕ ಸತೀಶ ಹೆಗಡೆ, ಮುಂಡಗೋಡ ಚಿಗಳ್ಳಿ ಸರ್ಕಾರಿ ಪ್ರೌಢಶಾಲೆಯ ಚಿತ್ರಕಲೆ ಶಿಕ್ಷಕ ಮಹಾಂತೇಶ ಹುಬ್ಬಳ್ಳಿ, ಹಳಿಯಾಳ ಚಿಬ್ಬಲಕೇರಿ ಸರ್ಕಾರಿ ಪ್ರೌಢಶಾಲೆ ಸಹ ಶಿಕ್ಷಕ ವೆಂಕಟೇಶ ನಾಗಪ್ಪ ನಾಯಕ, ಜೊಯಿಡಾ ಉಳವಿ ಚೆನ್ನಬಸವೇಶ್ವರ ಪ್ರೌಢಶಾಲೆಯ ಸಹ ಶಿಕ್ಷಕ ಗಂಗಾಧರ ಚನ್ನಪ್ಪ ಬೂದಿಹಾಳ.

ಸಮಾರಂಭ: ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಬೆಳಿಗ್ಗೆ 9.30 ಗಂಟೆಗೆ ಕಾರ್ಯಕ್ರಮ ಉದ್ಘಾಟಿಸುವರು. ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಅಧ್ಯಕ್ಷತೆ ವಹಿಸುವರು. ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಕೃಷ್ಣ ಗೌಡ, ಸಂಸದ ಅನಂತಕುಮಾರ, ಶಾಸಕ ಶಿವರಾಮ ಹೆಬ್ಬಾರ, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಗುರುಪಾದ ಹೆಗಡೆ, ಉಪಾಧ್ಯಕ್ಷ ಸಂತೋಷ ಗೌಡರ, ಜಿಲ್ಲಾ ಪಂಚಾಯ್ತಿ ಸದಸ್ಯರು ಭಾಗವಹಿಸುವರು. ನಿವೃತ್ತ ಪ್ರಾಚಾರ್ಯ ಎಸ್.ಐ.ಭಟ್ಟ ವಿಶೇಷ ಉಪನ್ಯಾಸ ನೀಡುವರು.

ಯಲ್ಲಾಪುರ ವರದಿ
ತಾಲ್ಲೂಕಿನ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ಪ್ರಕಟಿಸಲಾಗಿದ್ದು, ಪ್ರಾಥಮಿಕ ಶಾಲಾ ವಿಭಾಗದಲ್ಲಿ ಕಾಳಮ್ಮನಗರ ಶಾಲೆಯ ಮಂಗಲಾ.ಸಿ.ಬಂಟ, ಕನೇನಹಳ್ಳಿ ಶಾಲೆಯ ನಳಿನಿ ಹೆಗಡೆ,ಕೊಡಸೆ ಶಾಲೆಯ ನಾಗಪ್ಪ ಪಟಗಾರ,ಪ್ರೌಢಶಾಲೆಯ ವಿಭಾಗದಲ್ಲಿ ಎಂ.ಆರ್.ನಾಯಕ ಮಲವಳ್ಳಿ, ವೈಟಿ.ಎಸ್.ಎಸ್.ಎಸ್ ಉಪಪ್ರಾಂಶುಪಾಲೆ ಸಾವಿತ್ರಿ ಕುಲಕರ್ಣಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಪಾಂಡುರಂಗ ಪ್ರಶಸ್ತಿಗೆ ಆಯ್ಕೆ
ಶಿರಸಿ:
ಇಲ್ಲಿನ ಅರುಣೋದಯ ಸಂಸ್ಥೆ ನೀಡುವ ಜಿಲ್ಲಾ ಮಟ್ಟದ `ಪಾಂಡುರಂಗ' ಪ್ರಶಸ್ತಿಗೆ ದಾಂಡೇಲಿಯ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಗಂಗಪ್ಪ ಯಮನಪ್ಪ ತಳವಾರ ಹಾಗೂ ಕಾರವಾರ ಹಬ್ಬುವಾಡದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕಿ ಯಮುನಾ ಬಿ.ಪಟಗಾರ ಆಯ್ಕೆ ಯಾಗಿದ್ದಾರೆ.

ಇದೇ 5ರಂದು ನಡೆಯುವ ಶಿಕ್ಷಕ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ನೀಡಲಾಗುವುದು ಎಂದು ಅರುಣೋದಯ ಟ್ರಸ್ಟಿನ ಸತೀಶ ನಾಯ್ಕ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT