ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತಮ ಹವ್ಯಾಸ ರೂಢಿಸಿಕೊಳ್ಳಲು ಸಲಹೆ

Last Updated 22 ಸೆಪ್ಟೆಂಬರ್ 2011, 9:45 IST
ಅಕ್ಷರ ಗಾತ್ರ

ರಾಣೇಬೆನ್ನೂರು:  ಕಲೆಯ ಬಳಕೆ ಕಡಿಮೆಯಾದಾಗ ಕಲೆ ತನ್ನ ಜೀವಂತಿಕೆ ಕಳೆದುಕೊಳ್ಳುತ್ತದೆ, ಮಕ್ಕಳಲ್ಲಿ ಕಲ್ಪನಾ ಶೀಲತೆ, ಶೃಜನ ಶೀಲತೆಯನ್ನು ತರು ವುದು ಚಿತ್ರಕಲೆ, ಕೆಟ್ಟಹವ್ಯಾಸ ಕಲಿತು ಹಾಳಾಗದಂತೆ ಮಕ್ಕಳಲ್ಲಿ ಸ್ಪರ್ಧಾ ಮನೋಭಾವ ಬೆಳೆಸಿ, ಒಳ್ಳೆಯ ಹವ್ಯಾಸ ರೂಢಿಸಿ ಕೊಳ್ಳಲು ನಮ್ಮ ಪರಂಪರೆಯ ಕಲೆ, ಸಾಹಿತ್ಯ, ಸಂಗೀತದ ಶಿಕ್ಷಣದ ಅವಶ್ಯಕತೆ ಯಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಚ್. ಎಂ. ಪ್ರೇಮಾ ಹೇಳಿದರು.

ನಗರದ ಪೂರ್ವ ಬಡಾವಣೆಯ ಶಾಸಕರ ಮಾದರಿ ಶಾಲೆಯಲ್ಲಿ ಏರ್ಪ ಡಿಸಿದ್ದ ಚಿತ್ರಕಲಾ ಶಿಕ್ಷಕರ ಕಾರ್ಯಾ ಗಾರ ಉದ್ಘಾಟಿಸಿ ಅವರು ಮಾತನಾಡಿ ದರು.ದೇಶಿ ಕಲೆ ಉಳಿದಿರುವುದು ಉತ್ತರ ಕರ್ನಾಟಕದಲ್ಲಿ ಮಾತ್ರ, ನತ್ಯ, ಶಾಸ್ತ್ರೀಯ ಸಂಗೀತ, ಕಲೆ, ಸಾಹಿತ್ಯ ಎಲ್ಲ ಕ್ಷೇತ್ರಗಳಲ್ಲಿ ಎದ್ದು ಕಾಣುವವರು ಉತ್ತರ ಕರ್ನಾಟಕದವರೇ ಆಗಿದ್ದಾರೆ ಎಂದು ಅಭಿಪ್ರಾಯಪಟ್ಟರು.

ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಎಸ್. ಆರ್. ತೆವರಿ ಮಾತನಾಡಿ, ಮಕ್ಕಳಿಗೆ ಅಕ್ಷರಭ್ಯಾಸಕ್ಕೂ ಮೊದಲು ರೇಖೆಗಳನ್ನು ಎಳೆಯುವುದು, ರೇಖಾ ಚಿತ್ರ ಬಿಡಿಸುವ ಕಲೆಯನ್ನು ಕಲಿಸುವುದು ಸೂಕ್ತವಾಗಿದೆ ಎಂದರು.

ಶಿಕ್ಷಕ ವತ್ತಿ ಪವಿತ್ರ ವತ್ತಿ ಕೆಲವೇ ಶಿಕ್ಷಕರ ಅವಿವೇಕತನದ ವರ್ತನೆ ಶಿಕ್ಷಕ ಸಮುದಾಯವನ್ನೇ ಬೆರಳು ಮಾಡಿ ತೋರಿಸುವಂತೆ ಮಾಡಿದೆ ನಮ್ಮ ಜವಾಬ್ದಾರಿಯನ್ನು ಅರಿತು ಪ್ರಾಮಾ ಣಿಕವಾಗಿ ಕರ್ತವ್ಯ ನಿರ್ವಹಿಸಿದಲ್ಲಿ ಸಮಾಜ ನಮ್ಮನ್ನು ಗೌರವಿಸುತ್ತದೆ ಆ ನಿಟ್ಟಿನಲ್ಲಿ ಎಲ್ಲಶಿಕ್ಷಕರೂ ಸಾಗುವ ಅವಶ್ಯಕತೆ ಇದೆ ಎಂದರು.

ಹುಬ್ಬಳಿಯ ಯುವ ಮೋರ್ಚಾ ಅಧ್ಯಕ್ಷ ಚಿದಂಬರ ಜೋಶಿ, ಜಿಲ್ಲಾ ಚಿತ್ರಕಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಂ. ಜಿ. ಹಿರೇಮಠ, ಎಂ. ಸಾವಿತ್ರಿಬಾಯಿ, ನಾಮದೇವ ಕಾಗದಗಾರ ತಾಲೂಕಾ ಚಿತ್ರಕಲಾ ಶಿಕ್ಷಕರ ಸಂಘದ ಅಧ್ಯಕ್ಷ ಸಿ. ಆರ್. ನಾಶೀಪುರ ಉಪಸ್ಥಿತರಿದ್ದರು.

ರೋಟರಿ ಶಾಲೆಯ ಚಿತ್ರಕಲಾ ಶಿಕ್ಷಕ ಆರ್. ಡಿ. ಕೋಣೆ ಸ್ವಾಗತಿಸಿದರು, ಕಾರ್ಯದರ್ಶಿ ವೆಂಕಟೇಶ ಲಮಾಣಿ ನಿರೂಪಿಸಿದರು. ಕೆ. ಇ. ಅರ್ಕಾಚಾರಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT