ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಕರ್ನಾಟಕ: ಕೊರೆಯುವ ಚಳಿ

Last Updated 8 ಜನವರಿ 2011, 5:55 IST
ಅಕ್ಷರ ಗಾತ್ರ

ವಿಜಾಪುರ/ ಗುಲ್ಬರ್ಗ: ಉತ್ತರ ಕರ್ನಾಟಕದಲ್ಲಿ ಚಳಿ ಜಾಸ್ತಿಯಾಗಿದೆ. ವಿಜಾಪುರದಲ್ಲಿ ಕನಿಷ್ಠ ಉಷ್ಣಾಂಶ 8 ಡಿಗ್ರಿ ಸೆಲ್ಸಿಯಸ್‌ಗಿಂತಲೂ ಕಡಿಮೆಯಾಗಿದ್ದು ಜನ ಗಡಗಡ ನಡುಗುವಂತಾಗಿದೆ.

ಶುಕ್ರವಾರದ ಉಷ್ಣಾಂಶ ಕನಿಷ್ಠ 7.8 ಡಿಗ್ರಿ ಸೆಲ್ಸಿಯಸ್ ಹಾಗೂ ಗರಿಷ್ಠ 27.4 ದಾಖಲಾಗಿದೆ. ಗುರುವಾರ ಕನಿಷ್ಠ ಉಷ್ಣಾಂಶ 10.2ರಷ್ಟು ದಾಖಲಾಗಿತ್ತು. ಗರಿಷ್ಠ ಉಷ್ಣಾಂಶದಲ್ಲಿ ಯಾವುದೇ ಬದಲಾವಣೆಯಾಗದಿದ್ದರೂ ಕನಿಷ್ಠ ಉಷ್ಣಾಂಶ ಒಂದೇ ದಿನ 3 ಡಿಗ್ರಿಯಷ್ಟು ಕುಸಿದಿದೆ.

ಶತಮಾನದಲ್ಲಿಯೇ ಮೊದಲ ಬಾರಿ 2010ರ ಡಿಸೆಂಬರ್ 19 ರಂದು ಕನಿಷ್ಠ ಉಷ್ಣಾಂಶ 6 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು. ಆ ನಂತರ ಜನವರಿ 2ರ ವರೆಗೂ ಕನಿಷ್ಠ ಉಷ್ಣಾಂಶ 10 ಡಿಗ್ರಿ ಸೆಲ್ಸಿಯಸ್‌ಕ್ಕಿಂತ ಕಡಿಮೆ ಇತ್ತು. ಇಷ್ಟೊಂದು ಸುದೀರ್ಘ ಅವಧಿ ಚಳಿ ಮುಂದುವರಿದಿರುವುದು ಇತ್ತೀಚಿನ ವರ್ಷಗಳಲ್ಲಿ ಇದೆ ಮೊದಲ ಬಾರಿ.
ಗುಲ್ಬರ್ಗ ವರದಿ:  ಎರಡು ದಿನಗಳಿಂದ ತಾಪಮಾನ ಗಣನೀಯವಾಗಿ ಉಳಿದಿದ್ದು, ಶೀತಗಾಳಿ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ.

15ರಿಂದ 16 ಡಿಗ್ರಿಯಿಂದ ಗುರುವಾರ 10.7 ಡಿಗ್ರಿಗೆ ಉಷ್ಣಾಂಶ ಶುಕ್ರವಾರ ಮತ್ತಷ್ಟು ಕುಸಿತ ಕಂಡು 9 ಡಿಗ್ರಿ ಸೆಲ್ಷಿಯಸ್ ದಾಖಲಾಗಿದೆ. ಕಳೆದ ಡಿಸೆಂಬರ್ 22ರಂದು 7.2 ಡಿಗ್ರಿ ದಾಖಲಾದದ್ದು ಈ ಸಾಲಿನ ಕನಿಷ್ಠ ಉಷ್ಣಾಂಶವಾಗಿತ್ತು. ನಡು ಮಧ್ಯಾಹ್ನವೂ ಚಳಿಯಿಂದ ನಡುಕ ಉಂಟಾಗುತ್ತಿದೆ. 1945ರ ಡಿಸೆಂಬರ್ 18ರಂದು ಗುಲ್ಬರ್ಗದ ಈ ವರೆಗಿನ ಕನಿಷ್ಠ ತಾಪಮಾನ 5.6 ಡಿಗ್ರಿ ದಾಖಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT