ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಪ್ರದೇಶದಲ್ಲಿ ಟೀವಿಗಳು ಸ್ತಬ್ಧ

Last Updated 1 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಲಖನೌ (ಐಎಎನ್‌ಎಸ್): ಸೆಟ್ ಟಾಪ್ ಬಾಕ್ಸ್‌ಗಳನ್ನು ಅಳವಡಿಸಿಕೊಳ್ಳಲು ಸರ್ಕಾರ ವಿಧಿಸಿರುವ ಗಡುವು ಮುಗಿದ ಬೆನ್ನಲ್ಲೇ ಉತ್ತರ ಪ್ರದೇಶದ ಏಳು ಪ್ರಮುಖ ನಗರಗಳಲ್ಲಿ ಸುಮಾರು 7.5 ಲಕ್ಷಕ್ಕೂ ಹೆಚ್ಚು ಟಿವಿಗಳು ಸೋಮವಾರ ಸ್ತಬ್ಧಗೊಂಡಿವೆ.

ರಾಜಧಾನಿ ಲಖನೌದಲ್ಲಿ ಎರಡು ಲಕ್ಷಕ್ಕೂ ಹೆಚ್ಚು  ಟೀವಿಗಳು ಸ್ತಬ್ಧಗೊಂಡಿವೆ. ಉಳಿದ 5.46 ಲಕ್ಷಗಳಷ್ಟು ಟೀವಿಗಳು ಉತ್ತರ ಪ್ರದೇಶದ ಇತರ 6 ನಗರಗಳಾದ  ಕಾನ್ಪುರ (1.5ಲಕ್ಷ), ಆಗ್ರಾ(1.5ಲಕ್ಷ), ವಾರಣಾಸಿ(70 ಸಾವಿರ), ಆದಿಲಾಬಾದ್(62 ಸಾವಿರ), ಗಾಜಿಯಾಬಾದ್(60 ಸಾವಿರ) ಮತ್ತು ಮೀರತ್(54 ಸಾವಿರ)ಗಳಲ್ಲಿ ಸ್ತಬ್ಧ ಗೊಂಡಿವೆ. ಇದು ಕೇಂದ್ರ ಸರ್ಕಾರದ ನೀತಿಯಾಗಿದ್ದು, ಟೀವಿಯನ್ನು `ಡಿಜಿಟಲೀಕರಣ'ಗೊಳಿಸುವುದು ಇದರ ಉದ್ದೇಶ. ಇದರಲ್ಲಿ ತಮ್ಮದೇನು ಪಾತ್ರವಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

ಮಾರ್ಚ್ 31ರ ಗಡುವನ್ನು  ಆರು ತಿಂಗಳ ಕಾಲ ವಿಸ್ತರಿಸುವಂತೆ ಕೋರಿ  ಮಾಹಿತಿ ಹಾಗೂ ಪ್ರಸಾರ ಖಾತೆ ಸಚಿವ ಮನಿಷ್ ತಿವಾರಿ ಅವರಿಗೆ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು ಕಳೆದ ವಾರ ಪತ್ರ ಬರೆದಿದ್ದರು.
ಆದರೆ ಪತ್ರಕ್ಕೆ ತಿವಾರಿ ಪ್ರತಿಕ್ರಿಯಿಸಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT