ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ವಲಯ ಸಾಧಾರಣ ಮೊತ್ತ

Last Updated 2 ಫೆಬ್ರುವರಿ 2011, 17:40 IST
ಅಕ್ಷರ ಗಾತ್ರ

ವಿಶಾಖ ಪಟ್ಟಣ: ಪಾರಸ್ ಡೋಗ್ರಾ ಔಟಾಗದೇ ಗಳಿಸಿದ ಭರ್ಜರಿ ಶತಕದ  (147) ರನ್‌ಗಳ ನೆರವಿ ನಿಂದ ಉತ್ತರ ವಲಯ ತಂಡದ ವರು ಇಲ್ಲಿ ನಡೆಯುತ್ತಿರುವ ದಕ್ಷಿಣ ವಲಯ ವಿರುದ್ಧದ ದುಲೀಫ್ ಟ್ರೋಫಿ  ಫೈನಲ್ ಪಂದ್ಯದ ಮೊದಲ ದಿನದಾಟದ ಅಂತ್ಯಕ್ಕೆ 90 ಓವರ್‌ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 266 ರನ್ ಗಳಿಸಿದ್ದಾರೆ.

ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಉತ್ತರ ವಲ ಯ ಆರಂಭಿಕ ಆಘಾತಕ್ಕೆ ಒಳಗಾ ಗಿತ್ತು. ತಂಡದ ಒಟ್ಟು ಮೊತ್ತ 50 ಆಗುವುದರ ಒಳಗೆ ಪ್ರಮುಖ ನಾಲ್ಕು ಬ್ಯಾಟ್ಸ್‌ಮನ್‌ಗಳು ಪೆವಿಲಿಯನ್ ಹಾದಿ ತುಳಿದ್ದರು.

ನಂತರ ಬಂದ ಪಾರಸ್ ಡೋಗ್ರಾ 201 ಎಸೆತೆಗಳಲ್ಲಿ 16 ಬೌಂಡರಿ ಹಾಗೂ ಐದು ಸಿಕ್ಸರ್ ಒಳಗೊಂ ಡಂತೆ ಗಳಿಸಿದ ಒಟ್ಟು 147 ರನ್‌ಗಳು ತಂಡವನ್ನು ಆಪತ್ತಿನಿಂದ ಪಾರು ಮಾಡಿತು.

ಡೋಗ್ರಾಗೆ ಜೊತೆಯಾದ ಯಶ್‌ಪಾಲ್ ಸಿಂಗ್ ಹಾಗೂ ಉದಯ್ ಕೌಲ್ ಕ್ರಮವಾಗಿ 32 ಹಾಗೂ 38 ರನ್ ಗಳಿಸಿದರು.  ಎಳು ರನ್ ಕಲೆ ಹಾಕಿರುವ ಜೋಗಿಂದರ್ ಶರ್ಮಾ ಕ್ರೀಸ್‌ನಲ್ಲಿದ್ದಾರೆ. ದಕ್ಷಿಣ ವಲಯದ ಆರ್. ವಿನಯ್ ಕುಮಾರ್ ಹಾಗೂ ಎಸ್. ಅರವಿಂದ್ ತಲಾ ಎರಡು ವಿಕೆಟ್ ಪಡೆದು ಕೊಂಚ ಪ್ರಭಾವಿ ಎನಿಸಿದರು. ಅಭಿಮನ್ಯು ಮಿಥುನ್, ಅಭಿನವ್ ಮುಕುಂದ್ ಒಂದು ವಿಕೆಟ್ ಪಡೆದು ಗಮನ ಸೆಳೆದರು.

ಸಂಕ್ಷಿಪ್ತ ಸ್ಕೋರ್: ಉತ್ತರ ವಲಯ 90 ಓವರ್‌ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 266. (ಪಾರಸ್ ಡೋಗ್ರಾ 147, ಯಶ್‌ಪಾಲ್ ಸಿಂಗ್ 32, ಉದಯ್ ಕೌಲ್ 38, ಆರ್. ವಿನಯ್ ಕುಮಾರ್ 28ಕ್ಕೆ2, ಎಸ್. ಅರವಿಂದ 40ಕ್ಕೆ2).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT