ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ–ಸಮೀಕ್ಷೆ

Last Updated 18 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ನವದೆಹಲಿ (ಬಿಜೆಪಿ): ಈ ವರ್ಷಾಂತಕ್ಕೆ  ಉತ್ತರ ಭಾರ­ತದ ನಾಲ್ಕು ರಾಜ್ಯ­ಗಳಲ್ಲಿ ನಡೆ ಯ­ಲಿ­ರುವ ವಿಧಾ­ನಸಭಾ ಚುನಾ­ವಣೆಯಲ್ಲಿ ಬಿಜೆಪಿಯು ಕಾಂಗ್ರೆಸ್ ಅನ್ನು ಹಿಂದಿಕ್ಕಿ ಮೇಲುಗೈ ಸಾಧಿಸಲಿದೆ ಎಂದು ‘ಟೈಮ್ಸ್ ನೌ’ ಮತ್ತು ‘ಹೆಡ್ ಲೈನ್ಸ್ ಟುಡೇ’ ನ್ಯೂಸ್‍ ಚಾನೆಲ್‍ ಗಳು ಬುಧ­ವಾರ ರಾತ್ರಿ ಪ್ರಸಾರ ಮಾಡಿದ ಸಮೀಕ್ಷೆ­ಗಳು ತಿಳಿಸಿವೆ.

ಬಿಜೆಪಿ ಪ್ರಧಾನಿ ಅಭ್ಯರ್ಥಿಯಾಗಿ ನರೇಂದ್ರ ಮೋದಿ ಅವರನ್ನು ಬಿಂಬಿಸಿರು­ವುದು  ಲಾಭ ತಂದಿದೆ.  ಮನಮೋಹನ್‍ ಸಿಂಗ್‍ ಮತ್ತು ರಾಹುಲ್‍ ಗಾಂಧಿ ಅವರಿಗಿಂತ ಮೋದಿ ಹೆಚ್ಚು ಜನ­ಪ್ರಿಯರಾಗಿ ಹೊರ­ಹೊಮ್ಮಿದ್ದಾರೆ.

ಮಧ್ಯಪ್ರದೇಶದಲ್ಲಿ ಶಿವರಾಜ್‌ ಸಿಂಗ್‌  ಚೌಹಾಣ್‍, ರಾಜಸ್ತಾನ­ದಲ್ಲಿ ವಸುಂಧರಾ ರಾಜೆ ಸಿಂಧಿಯಾ, ಛತ್ತೀಸಗಡದಲ್ಲಿ ರಮಣ್‍ ಸಿಂಗ್‍ ಅಧಿಕ ಜನಬೆಂಬಲ ಹೊಂದಿದ್ದಾರೆ. ಆದರೆ ದೆಹಲಿಯಲ್ಲಿ ಶೀಲಾ ದೀಕ್ಷಿತ್‍ ಅಧಿಕಾರ ಕಳೆದುಕೊಳ್ಳುವ ಭೀತಿಯಲ್ಲಿದ್ದು, ಅತಂತ್ರ ವಿಧಾನಸಭೆ ಸೃಷ್ಟಿಯಾಗಿ ಅರ­ವಿಂದ ಕೇಜ್ರಿ ವಾಲ್‍ ನೇತೃತ್ವದ ಆಮ್‍ ಆದ್ಮಿ ಪಾರ್ಟಿ (ಎಎಪಿ) ನಿರ್ಣಾ­ಯಕ ಪಾತ್ರ ವಹಿಸಲಿದೆ.

ಟೈಮ್ಸ್ ನೌ ಪ್ರಕಾರ, ಒಟ್ಟು 230 ಸ್ಥಾನ ಗಳ ಮಧ್ಯ­ಪ್ರದೇಶದಲ್ಲಿ ಬಿಜೆಪಿ- 130, ಕಾಂಗ್ರೆಸ್‍ 84, ಬಿಎಸ್‍ಪಿ 5, ಇತರೆ 11 ಲಭಿಸ ಲಿವೆ. 200 ಸ್ಥಾನ­ಗಳ ರಾಜ­ಸ್ತಾನದಲ್ಲಿ ಬಿಜೆಪಿ 118, ಕಾಂಗ್ರೆಸ್‍ 64, ಬಿಎಸ್ಪಿ 3, ಇತರೆ 15 ಗಳಿಸಲಿವೆ. 90 ಸ್ಥಾನಗಳ ಛತ್ತೀಸಗಡ­ದಲ್ಲಿ ಬಿಜೆಪಿ 47, ಕಾಂಗ್ರೆಸ್‍ 40, ಬಿಎಸ್‍ಪಿ 2, ಇತರೆ 1 ಪಡೆಯಲಿವೆ. 70 ಸ್ಥಾನಗಳ ದೆಹಲಿ­ಯಲ್ಲಿ ಬಿಜೆಪಿ 30, ಕಾಂಗ್ರೆಸ್‍ 29, ಎಎಪಿ 7, ಇತರೆ 4 ಹೊಂದ­ಲಿವೆ ಎಂದು ಸಮೀಕ್ಷೆ ತಿಳಿಸಿದೆ.

ಹೆಡ್‍ ಲೈನ್ಸ್ ಟುಡೇ ಪ್ರಕಾರ, ಮಧ್ಯ­ಪ್ರದೇಶ­ದಲ್ಲಿ ಬಿಜೆಪಿ 130, ಕಾಂಗ್ರೆಸ್‍  84, ದೆಹಲಿಯಲ್ಲಿ ಬಿಜೆಪಿ 28 ಮತ್ತು ಕಾಂಗ್ರೆಸ್‍ 28, ಎಎಪಿ 9 ಸ್ಥಾನ, ರಾಜ­ಸ್ತಾ­ನದಲ್ಲಿ ಬಿಜೆಪಿ 97 ಮತ್ತು ಕಾಂಗ್ರೆಸ್‍ 79, ಛತ್ತೀಸಗಡದಲ್ಲಿ ಬಿಜೆಪಿ 47 ಮತ್ತು ಕಾಂಗ್ರೆಸ್‍ 40 ಸ್ಥಾನ ಗಳಿಸಲಿವೆ ಎಂದು ಸಮೀಕ್ಷೆ ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT