ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ಸವಗಳು ಭಾವೈಕ್ಯತೆ ಬೆಳೆಸಲಿ

Last Updated 21 ಜನವರಿ 2012, 9:00 IST
ಅಕ್ಷರ ಗಾತ್ರ

ಭಾಲ್ಕಿ: ಈಗ ಎಲ್ಲಡೆ ದೇವರ ಜಾತ್ರೆಗಳ ಪರ್ವಕಾಲ. ಈ ಧಾರ್ಮಿಕ ಉತ್ಸವಗಳು ಸಮಾಜದಲ್ಲಿ ಭಾವೈಕ್ಯತೆ, ಸಹಕಾರ ಮತ್ತು ಸಹಬಾಳ್ವೆಗೆ ನಾದಿಯಾಗಬೇಕು ಎಂದು ಶಾಸಕ ಈಶ್ವರ ಖಂಡ್ರೆ ಪ್ರತಿಪಾದಿಸಿದರು.
ಪಟ್ಟಣದ ಭಾಲ್ಕೇಶ್ವರ ಮಂದಿರದ ಆವರಣದಲ್ಲಿ ಶುಕ್ರವಾರ  ಶ್ರೀ ವೀರಶಭದ್ರೇಶ್ವರ ಜಾತ್ರಾ ಮಹೋತ್ಸವ ನಿಮಿತ್ತ ನಡೆದ ಧರ್ಮ ಸಭೆಯಲ್ಲಿ ಮಾತನಾಡಿದರು.

ದೇವರು, ಧರ್ಮ ಮತ್ತು ಪೂಜಾ ಕೈಂಕರ್ಯಗಳು ಮನುಷ್ಯನ ಆತ್ಮೋದ್ದಾರಕ್ಕಾಗಿ ಇರುವ ಕಾರ್ಯಗಳಾಗಿವೆ. ಧರ್ಮಗುರುಗಳ ಮಾರ್ಗದರ್ಶನದಲ್ಲಿ ನಡೆ ನುಡಿ ಶುದ್ಧವಾಗಿಸಿಕೊಂಡು ನಡೆದರೆ ಎಲ್ಲರಿಗೂ ಮಾನಸಿಕ ಶಾಂತಿ, ಸಮೃದ್ಧಿ ದೊರೆಯಬಲ್ಲದು ಎಂದು ಈಶ್ವರ ಖಂಡ್ರೆ ನುಡಿದರು.

ಕೇದಾರ ಜಗದ್ಗುರು ಭೀಮಾಶಂಕರ ಶಿವಾಚಾರ್ಯರಿಂದ ಸಾಮೂಹಿಕ ಲಿಂಗಪೂಜೆ ಕಾರ್ಯಕ್ರಮ ಜರುಗಿತು. ಮೆಹಕರ್ ವಿರೂಪಾಕ್ಷೇಶ್ವರ ಮಠದ ರಾಜೇಶ್ವರ ಸ್ವಾಮೀಜಿ, ಶಿವಣಿಯ ಹಾವಗಿಲಿಂಗ ಸ್ವಾಮೀಜಿ, ಜಾತ್ರಾ ಉತ್ಸವ ಸಮಿತಿ ಅಧ್ಯಕ್ಷ ರಾಚಪ್ಪ ಪಾಟೀಲ, ಕಾರ್ಯದರ್ಶಿ ಬಸವರಾಜ ವಂಕೆ, ಉಪಾಧ್ಯಕ್ಷ ವಿಶ್ವನಾಥ ಕನಶಟ್ಟೆ, ರಮೇಶ ಲೋಖಂಡೆ, ದೇಶಮುಖಪ್ಪ ಪನಶಟ್ಟೆ, ಜಿಪಂ ಮಾಜಿ ಸದಸ್ಯ ಡಿ.ಕೆ. ಸಿದ್ರಾಮ, ಪುರಸಭೆ ಸದಸ್ಯ ದತ್ತಾತ್ರೇಯ ತೂಗಾಂವಕರ್, ಪುರಸಭೆ ಅಧ್ಯಕ್ಷ ಚಂದ್ರಕಾಂತ ಪಾಟೀಲ, ಬಾಬುರಾವ ಬಿರಾದಾರ, ರಮೇಶ ಲದ್ದೆ ಮುಂತಾದವರು ವೇದಿಕೆಯಲ್ಲಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT