ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ದಿಮೆದಾರರ ಮನವಿ ಪರಿಶೀಲನೆ: ಸಿಎಂ

Last Updated 21 ಮೇ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: `ಕೈಗಾರಿಕೆಗಳ ವಿಸ್ತರಣಾ ಯೋಜನೆಗೆ ಕೆಲವು ರಿಯಾಯಿತಿಗಳನ್ನು ನೀಡುವಂತೆ ಉದ್ದಿಮೆದಾರರು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ. ಈ ಕುರಿತು ಪರಿಶೀಲಿಸಲಾಗುತ್ತಿದೆ~ ಎಂದು ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಸೋಮವಾರ ಇಲ್ಲಿ ತಿಳಿಸಿದರು.

ಮಂಗಳೂರಿನ ಎಂಆರ್‌ಪಿಎಲ್, ನಂಜನಗೂಡಿನ ನೆಸ್ಲೆ ಇಂಡಿಯಾ, ಧಾರವಾಡದ ಟಾಟಾ ಮೋಟಾರ್ಸ್‌, ಹೀರೊ ಮೋಟೊಕಾರ್ಪ್ ಸೇರಿದಂತೆ ಐದು ಕಂಪೆನಿಗಳು ತಮ್ಮ ಕೈಗಾರಿಕೆಗಳ ವಿಸ್ತರಣಾ ಯೋಜನೆಗೆ ರಿಯಾಯಿತಿ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಿವೆ.

ಈ ಕುರಿತು ಚರ್ಚಿಸಲು ಮುಖ್ಯಮಂತ್ರಿ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ ನಡೆಯಿತು. ಕೈಗಾರಿಕೆಗಳ ವಿಸ್ತರಣೆಗೆ ಯಾವ ರಿಯಾಯಿತಿಗಳನ್ನು ನೀಡಬಹುದು ಎಂಬುದರ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ.
ಆದರೆ, ಯಾವುದೇ ಅಂತಿಮ ನಿರ್ಧಾರ ಕೈಗೊಂಡಿಲ್ಲ ಎಂದು ಮುಖ್ಯಮಂತ್ರಿ ಸದಾನಂದ ಗೌಡ ಸುದ್ದಿಗಾರರಿಗೆ ವಿವರಿಸಿದರು.

`ಕೈಗಾರಿಕೆಗಳಿಗೆ ರಿಯಾಯಿತಿ ನೀಡುವುದರಿಂದ ಹೆಚ್ಚು ಹೂಡಿಕೆ ನಿರೀಕ್ಷಿಸಬಹುದು.ಉದ್ಯೋಗ ಸೃಷ್ಟಿಯೂ ಆಗುತ್ತದೆ. ತುಸು ರಿಯಾಯಿತಿ ನೀಡುವುದರಿಂದ ಸರ್ಕಾರದ ಬೊಕ್ಕಸಕ್ಕೆ ದೊಡ್ಡ ನಷ್ಟ ಆಗುವುದಿಲ್ಲ. ಮತ್ತೊಮ್ಮೆ ಸಭೆ ಸೇರಿ ರಿಯಾಯಿತಿ ಕುರಿತು ಸೂಕ್ತ ತೀರ್ಮಾನ ತೆಗೆದುಕೊಳ್ಳಲಾಗುವುದು~ ಎಂದು ಅವರು ಹೇಳಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT