ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ಯಮ ಅಸಮಾಧಾನ

Last Updated 20 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಮುಂಬೈ(ಪಿಟಿಐ): ಬಡ್ಡಿ  ದರ ಏರಿಕೆ ಮಾಡುವ ಮೂಲಕ ‘ಆರ್‌­ಬಿಐ’ನ ಮಾಜಿ ಗವರ್ನರ್‌ ಸುಬ್ಬರಾವ್‌ ಅನು­­ಸರಿ ಸಿದ್ದ ಬಿಗಿ ಹಣಕಾಸು ನೀತಿ­ಯನ್ನೇ ರಾಜನ್‌ ಮುಂದುವರಿ­ಸಿದ್ದಾರೆ ಎಂದು ಉದ್ಯಮ ವಲಯ ತೀವ್ರ ಅಸಮಾಧಾನ ವ್ಯಕ್ತಪ­ಡಿಸಿದೆ.

‘ಈ ಅನಿರೀಕ್ಷಿತ ಆಘಾತ ಕೈಗಾರಿಕೆ ಬೆಳವಣಿಗೆ ಮೇಲೆ ತೀವ್ರ ಪರಿ­ಣಾಮ ಬೀರ­ಲಿದೆ. ಈಗಾಗಲೇ ಉದ್ಯಮ ವಲಯ ಸಾಲದ ಕೊರತೆ ಎದುರಿಸುತ್ತಿದೆ. ಈಗ ಗಾಯದ ಮೇಲೆ ಬರೆ ಎಳೆದಂತಾಗಿದೆ’ ಎಂದು ‘ಸಿಐಐ’ ನಿರ್ದೇಶಕ ಚಂದ್ರಜಿತ್‌ ಬ್ಯಾನರ್ಜಿ ಅಭಿ ಪ್ರಾಯ­ಪಟ್ಟಿದ್ದಾರೆ.

‘ಗರಿಷ್ಠ ಮಟ್ಟದಲ್ಲಿರುವ ಬಡ್ಡಿ ದರವೇ ದೇಶದ ‘ಜಿಡಿಪಿ’ ಪ್ರಗತಿಗೆ ತೊಡಕಾಗಿದೆ. ‘ಆರ್‌ಬಿಐ’ ಮತ್ತೆ ಬಡ್ಡಿ ದರ ಏರಿಕೆ ಮಾಡಿ ಉದ್ಯಮದ ನಿರೀಕ್ಷೆ ಹುಸಿ­ಗೊಳಿಸಿದೆ’ ಎಂದು ‘ಫಿಕ್ಕಿ’ ಅಧ್ಯಕ್ಷೆ ನೈನಾ­ಲಾಲ್‌ ಕಿದ್ವಾಯಿ ಪ್ರತಿಕ್ರಿಯಿಸಿದ್ದಾರೆ.

‘ದೇಶದ ಹಣಕಾಸು ಮಾರುಕಟ್ಟೆ ರಾಜನ್‌ ಅವರಿಂದ ಭಾರಿ ನಿರೀಕ್ಷೆ ಇಟ್ಟು­ಕೊಂಡಿತ್ತು. ಆದರೆ, ಈ ಎಲ್ಲ ನಿರೀಕ್ಷೆ­ಗಳಿಗೆ ಆಘಾತ ಉಂಟು ಮಾಡುವ ರೀತಿ­ಯಲ್ಲಿ ಅವರು ವರ್ತಿಸಿದ್ದಾರೆ’ಎಂದು ಭಾರತೀಯ ವಾಣಿಜ್ಯೋದ್ಯಮ ಮಹಾ­ಸಂಘದ (ಅಸೋಚಾಂ) ಅಧ್ಯಕ್ಷ ರಾಣಾ ಕಪೂರ್‌ ಅಭಿಪ್ರಾಯಪಟ್ಟಿದ್ದಾರೆ.

‘ಆರ್‌ಬಿಐ ಉದ್ಯಮ ವಲಯದ ಪ್ರಗತಿಯನ್ನು ಗಣನೆಗೆ ತೆಗೆದುಕೊಳ್ಳದೆ ಬಡ್ಡಿ ದರ ಏರಿಕೆ ಮಾಡಿದೆ. ರಿಯಲ್‌ ಎಸ್ಟೇಟ್‌ ವಲಯದ ಮೇಲೆ ನಕಾರಾತ್ಮಕ ಪರಿಣಾಮ ಬೀರಲಿದೆ’ ಎಂದು ‘ಭಾರತೀಯ ರಿಯಲ್‌ ಎಸ್ಟೇಟ್‌ ನಿರ್ಮಾ­ಣಗಾರರ ಒಕ್ಕೂಟ’ (ಕ್ರೆಡಾಯ್‌) ಅಭಿಪ್ರಾಯಪಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT