ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ಯಮ ರಂಗದಲ್ಲಿ ಒಡಕು?

Last Updated 28 ನವೆಂಬರ್ 2011, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ದೇಶದ ಬಹುಬ್ರಾಂಡ್ ಚಿಲ್ಲರೆ ವಹಿವಾಟು ಕ್ಷೇತ್ರದಲ್ಲಿ ಶೇ 51ರಷ್ಟು ವಿದೇಶಿ ನೇರ ಬಂಡವಾಳ ಹೂಡಿಕೆಗೆ (ಎಫ್‌ಡಿಐ) ಅವಕಾಶ ಕಲ್ಪಿಸುವುದನ್ನು ಬೆಂಬಲಿಸುವ ಕುರಿತು ಉದ್ಯಮ ರಂಗ ಎರಡು ಹೋಳಾಗಿ ವಿಭಜನೆ ಆಗಲಿದೆ ಎನ್ನುವ ಆತಂಕ ವ್ಯಕ್ತವಾಗುತ್ತಿದೆ.

`ಎಫ್‌ಡಿಐ~ ಹೂಡಿಕೆಗೆ ಸಂಬಂಧಿಸಿದಂತೆ  ಭಾರತೀಯ ವಾಣಿಜ್ಯೋದ್ಯಮ ಮಹಾಸಂಘಗಳ ಒಕ್ಕೂಟ `ಫಿಕ್ಕಿ~ ಸರ್ಕಾರಕ್ಕೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದೆ. ಭಾರತೀಯ ಕೈಗಾರಿಕಾ ಒಕ್ಕೂಟ (ಸಿಐಐ), ರೀಟೇಲ್ ಕ್ಷೇತ್ರದಲ್ಲಿ ಕನಿಷ್ಠ ಬಂಡವಾಳ ಹೂಡಿಕೆಗೆ ಇರುವ  ಆದ್ಯತೆಗಳನ್ನು ಗಮನದಲ್ಲಿಟ್ಟುಕೊಂಡು ಹಂತ ಹಂತವಾಗಿ `ಎಫ್‌ಡಿಐ~ ಜಾರಿಗೊಳಿಸಬೇಕು ಎಂದು ಸಲಹೆ ನೀಡಿದೆ.

ರಾಜಕೀಯ ಪ್ರೇರಿತ ಆರೋಪ: ಬಹುರಾಷ್ಟ್ರೀಯ ಕಂಪೆನಿಗಳಿಗೆ ದೇಶದ ಚಿಲ್ಲರೆ ವಹಿವಾಟು ಕ್ಷೇತ್ರದಲ್ಲಿ ಅವಕಾಶ ಕಲ್ಪಿಸುವುದರಿಂದ ಇಲ್ಲಿನ ಸಾಂಪ್ರದಾಯಿಕ ಕಿರಾಣಿ ಅಂಗಡಿಗಳು ಬಾಗಿಲು ಹಾಕಬೇಕಾಗುತ್ತದೆ. ಹಾಗೂ ರೀಟೇಲ್ ಕ್ಷೇತ್ರವನ್ನು ನಂಬಿಕೊಂಡಿರುವ 40 ದಶಲಕ್ಷದಷ್ಟು  ಜನರು ಕೆಲಸ ಕಳೆದುಕೊಳ್ಳಬೇಕಾಗುತ್ತದೆ ಎನ್ನುವ ಆರೋಪ ಕೇವಲ ರಾಜಕೀಯ ಪ್ರೇರಿತ ಎಂದು ರಾಜೀವ್ ಹೇಳಿದ್ದಾರೆ.

`ವಿದೇಶಿ ಮಳಿಗೆಗಳಿಂದ ಗರಿಷ್ಠ ಗುಣಮಟ್ಟದ ಹೆಚ್ಚಿನ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ. ಇಂತಹ ದೊಡ್ಡ ಮಳಿಗೆಗಳಿಗೆ ಸ್ಪರ್ಧೆ ಒಡ್ಡಲು ಚಿಕ್ಕ ಮಳಿಗೆಗಳೂ ತಮ್ಮ ವಹಿವಾಟು ಮತ್ತು ಉದ್ಯೋಗಾವಕಾಶ ವಿಸ್ತರಿಸಲಿವೆ ಎಂದರು.
`ಎಸ್‌ಎಂಇ~ ಖರೀದಿ; ಸರ್ಕಾರ ಸ್ಪಷ್ಟನೆ
ಬಹು ಬ್ರಾಂಡ್ ಚಿಲ್ಲರೆ ವಹಿವಾಟಿನಲ್ಲಿ  ವಿದೇಶಿ ನೇರ ಬಂಡವಾಳ ಹೂಡಿಕೆಯ (ಎಫ್‌ಡಿಐ) ಹೊಸ ನೀತಿ ಅನ್ವಯ,  ಶೇ 30ರಷ್ಟು ಉತ್ಪನ್ನಗಳನ್ನು ಕಿರು ಮತ್ತು ಸಣ್ಣ ಉದ್ದಿಮೆಗಳಿಂದ ಖರೀದಿಸುವ ನಿರ್ಬಂಧಕ್ಕೆ ಸಂಬಂಧಿಸಿದ ಗೊಂದಲವನ್ನು ಕೇಂದ್ರ ಸರ್ಕಾರ ದೂರ ಮಾಡಿದೆ.

`ಎಫ್‌ಡಿಐ~ಗೆ ಸಂಬಂಧಿಸಿದಂತೆ ಕಳೆದ ವಾರದ ಅಧಿಕೃತ ಆದೇಶದಲ್ಲಿ ಜಾಗತಿಕ ಚಿಲ್ಲರೆ ವಹಿವಾಟು ಸಂಸ್ಥೆಗಳು ವಿಶ್ವದ ಯಾವುದೇ ಭಾಗದಲ್ಲಿನ  `ಎಂಎಸ್‌ಇ~ಗಳಿಂದ ಸರಕು ಖರೀದಿಸಬಹುದಾಗಿದೆ ಎಂಬ ಉಲ್ಲೇಖ ಇತ್ತು.

`ಇಲ್ಲ ಅದನ್ನು ತಪ್ಪಾಗಿ ಉಲ್ಲೇಖಿಸಲಾಗಿತ್ತು. ದೇಶದ `ಎಂಎಸ್‌ಇ~ಗಳಿಂದಲೇ ಖರೀದಿಸುವುದನ್ನು ಕಡ್ಡಾಯಗೊಳಿಸಲಾಗಿದೆ~ ಎಂದು ವಾಣಿಜ್ಯ ಸಚಿವ ಆನಂದ ಶರ್ಮಾ ಸ್ಪಷ್ಟಪಡಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT