ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ಯೋಗ ಖಾತರಿ ಯೋಜನೆ;ಕಳೆದ ಸಾಲಿನಲ್ಲಿ ಕಡಿಮೆ ಹಣ ವೆಚ್ಚ

Last Updated 16 ಜನವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ದುಡಿಯುವ ಕೈಗಳಿಗೆ ಕನಿಷ್ಠ ನೂರು ದಿನಗಳ ಕಾಲ ಉದ್ಯೋಗ ಕಲ್ಪಿಸುವ ಮಹಾತ್ವಾಕಾಂಕ್ಷೆಯ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ಎಂಎನ್‌ಆರ್‌ಇಜಿ)ಯಡಿ ರಾಜ್ಯ ಸರ್ಕಾರ 2009-10ನೇ ಸಾಲಿಗೆ ಹೋಲಿಸಿದರೆ 2010-11 ರಲ್ಲಿ ಕಡಿಮೆ ಹಣ ವ್ಯಯಿಸಿರುವುದು ಬೆಳಕಿಗೆ ಬಂದಿದೆ.

ಪ್ರತಿಯೊಂದು ವಿಧಾನಸಭಾ ಕ್ಷೇತ್ರದಲ್ಲಿ ಈ ಯೋಜನೆಯಡಿ 2009-10ರಲ್ಲಿ ಸರಾಸರಿ ರೂ. 13 ಕೋಟಿ ವೆಚ್ಚ ಮಾಡಲಾಗಿತ್ತು. ಆದರೆ, 2010-11 ರಲ್ಲಿ ಸರಾಸರಿ ರೂ. 9 ಕೋಟಿ ವೆಚ್ಚ ಮಾಡಲಾಗಿದೆ ಎಂದು ಇಂಡಿಯಾ ಗವರ್ನ್ಸ್ ರೀಸರ್ಚ್ ಸಂಸ್ಥೆಯು ಬಿಡುಗಡೆ ಮಾಡಿರುವ ಅಂಕಿ-ಅಂಶಗಳು ದೃಢಪಡಿಸಿವೆ.

ಪಕ್ಷೇತರ ಶಾಸಕರ ಕ್ಷೇತ್ರಗಳಲ್ಲಿ 2010-11ರಲ್ಲಿ ರೂ. 17 ಕೋಟಿ ವ್ಯಯ ಮಾಡಲಾಗಿದೆ. ಇದು ರಾಜ್ಯದ ಸರಾಸರಿಗಿಂತ ಶೇ 89 ರಷ್ಟು ಹೆಚ್ಚಾಗಿದೆ.

ಕಾನೂನಿನ ಪ್ರಕಾರ ನಿರ್ಮಾಣ ಸಾಮಗ್ರಿಗಳ ವೆಚ್ಚ ಒಟ್ಟು ಯೋಜನೆಯ ಶೇ 40 ವೆಚ್ಚವನ್ನು ಮೀರುವಂತಿಲ್ಲ.  2009-10 ರಲ್ಲಿ 56 ಕ್ಷೇತ್ರಗಳು ಈ ವೆಚ್ಚದ ಮಿತಿಯನ್ನು ದಾಟಿದ್ದವು. ಆದರೆ, 2010-11 ರಲ್ಲಿ 85 ಕ್ಷೇತ್ರಗಳು ಈ ಮಿತಿಯನ್ನು ದಾಟಿವೆ.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕುಟುಂಬಗಳ ಸರಾಸರಿ ವೇತನ 2010-11ರಲ್ಲಿ 108 ಕ್ಷೇತ್ರಗಳಲ್ಲಿ ಇತರ ಕುಟುಂಬಗಳ ಸರಾಸರಿ ವೇತನಕ್ಕಿಂತ ಕಡಿಮೆಯಾಗಿತ್ತು. ಇದನ್ನು 2009-10 ರ ಕ್ಷೇತ್ರಗಳಿಗೆ ಹೋಲಿಸಿದರೆ ಹೆಚ್ಚಾಗಿದೆ ಎಂದು ಇಂಡಿಯಾ ಗವರ್ನ್ಸ್ ರಿಸರ್ಚ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕಿ ವೀಣಾ ರಾಮಣ್ಣ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT