ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ಯೋಗ ಖಾತರಿ ವಿಲೀನ

Last Updated 21 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಬೆಂಗಳೂರು: ಉದ್ಯೋಗ ಖಾತರಿ ಜತೆ 9 ಇಲಾಖೆಗಳ ಯೋಜನೆಗಳನ್ನು ಒಗ್ಗೂ­ಡಿಸಿ ಅನುಷ್ಠಾನ­ಗೊಳಿಸಲು ನಿರ್ಧರಿಸ­ಲಾಗಿದೆ.

ಅರಣ್ಯ, ತೋಟಗಾರಿಕೆ, ಸಣ್ಣ ನೀರಾ­ವರಿ, ಕೃಷಿ, ಜಲಾನಯನ ಅಭಿವೃದ್ಧಿ, ರೇಷ್ಮೆ, ಪಶುಸಂಗೋ­ಪನೆ, ಮೀನು­ಗಾ­ರಿಕೆ, ಪಂಚಾಯತ್‌ರಾಜ್‌ ಎಂಜಿನಿ­ಯ­ರಿಂಗ್‌ ಇಲಾಖೆಗಳು ತಮ್ಮ ಕಾಮ­ಗಾರಿ­­ಗಳನ್ನು ನೇರವಾಗಿ ಅಥವಾ ಪರೋ­ಕ್ಷವಾಗಿ ಒಗ್ಗೂಡಿಸುವಿಕೆ ಮೂಲಕ ಅನುಷ್ಠಾನ­ಗೊಳಿಸಬಹುದಾಗಿದೆ.

ಶನಿವಾರ ವಿಕಾಸ ಸೌಧದಲ್ಲಿ ನಡೆದ ಮಹಾತ್ಮಾ­ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೊಗ ಖಾತರಿ ಯೋಜನೆ­­ಯೊಂದಿಗೆ ಇತರೆ ಕಾರ್ಯ­ಕ್ರಮಗಳನ್ನು ಒಗ್ಗೂಡಿ­ಸುವಿಕೆಯ ಕುರಿತ ರಾಜ್ಯಮಟ್ಟದ ಕಾರ್ಯಾ­ಗಾರದಲ್ಲಿ ಈ ಬಗ್ಗೆ ಗ್ರಾಮೀಣಾ­ಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆ ಪ್ರಧಾನ ಕಾರ್ಯದರ್ಶಿ ಟಿ.ಎಂ. ವಿಜಯ­ಭಾಸ್ಕರ್‌ ವಿವರ ನೀಡಿದರು.

ಅಂಗನವಾಡಿ ಕಟ್ಟಡಗಳನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಜತೆ ಸೇರಿ ನಿರ್ಮಿಸಲಾಗು­ವುದು. ಪ್ರತಿ ಅಂಗನವಾಡಿ ಕಟ್ಟಡಕ್ಕೆ ಇಲಾಖೆಯ ಘಟಕ ವೆಚ್ಚದ ಅಡಿ ₨11.95 ಲಕ್ಷಗಳನ್ನು ನೀಡಬೇಕು. ಉಳಿದ ₨ 4 ಲಕ್ಷಗಳನ್ನು ಉದ್ಯೋಗ ಖಾತರಿ ಯೋಜನೆ ಅಡಿ ಭರಿಸಲಾ­ಗು­ವುದು. ಇದೇ ರೀತಿ ಪ್ರತಿ ಗ್ರಾಮ ಪಂಚಾಯ್ತಿ­ಗೆ ಎರಡು ಕೆರೆ­ಯಂತೆ ರಾಜ್ಯ­ದಲ್ಲಿ  12 ಸಾವಿರ ಕೆರೆ­ಗಳ­ನ್ನು ಅಭಿವೃದ್ಧಿ­­ಪಡಿಸ­ಲಾಗುವುದು. ಪ್ರತಿ ಗ್ರಾಮ ಪಂಚಾಯ್ತಿಗೆ ಎರಡು ಆಟದ ಮೈದಾನದಂತೆ ರಾಜ್ಯದಲ್ಲಿ 12 ಸಾವಿರ ಆಟದ ಮೈದಾನಗಳನ್ನು ನಿರ್ಮಿ­ಸಲು ಸಹ ಉದ್ದೇಶಿ­ಸಲಾಗಿದೆ. ಕೃಷಿ ಇಲಾಖೆ ಜತೆ ಕೈಜೋಡಿಸಿ 1  ಲಕ್ಷ ಹೊಂಡಗಳನ್ನು ನಿರ್ಮಿಸ­ಲಾಗುವುದು ಎಂದು ತಿಳಿಸಿದರು.

ಕಾರ್ಯಾಗಾರ ಉದ್ಘಾಟಿಸಿದ ಗ್ರಾಮೀಣಾ­­­­ಭಿವೃದ್ಧಿ ಮತ್ತು ಪಂಚಾ­ಯತ್‌­­ರಾಜ್‌ ಸಚಿವ ಎಚ್‌.ಕೆ. ಪಾಟೀಲ್‌, ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ­­­ಯೊಂದಿಗೆ ಇತರ ಇಲಾಖೆ­ಯ ಯೋಜನೆಗಳನ್ನು ಒಗ್ಗೂಡಿಸುವಿಕೆ ಮೂಲಕ ಬರಮುಕ್ತ ಗ್ರಾಮ­ಗಳ­ನ್ನಾಗಿ ಪರಿ­ವರ್ತಿಸಲು ಅಧಿಕಾರಿಗಳು ಪಣ­ತೊಡಬೇಕು ಎಂದು  ಸಲಹೆ ನೀಡಿದರು.

ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮತ್ತು ಅಭಿವೃದ್ಧಿ ಆಯುಕ್ತ ಜಿ.ವಿ. ಕೃಷ್ಣರಾವ್‌ ಮಾತ­­ನಾಡಿ, ಹಣಕಾಸು ವರ್ಷದ ಮೂರನೇ ತ್ರೈಮಾಸಿಕ ಮುಗಿಯುತ್ತ ಬಂದಿದ್ದರೂ ಯಾ­ವು­ದೇ ಇಲಾಖೆಯಲ್ಲಿ ಶೇಕಡಾ 75ರಷ್ಟು ಅನು­­ದಾನ ಖರ್ಚು ಮಾಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ನಿರ್ದೇಶಕ ಮುನೀಶ್‌ ಮೌದ್ಗಿಲ್‌ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT