ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ಯೋಗ ಗಿಟ್ಟಿಸುವಲ್ಲಿ ಗ್ರಾಮೀಣರು ವಿಫಲ

Last Updated 10 ಫೆಬ್ರುವರಿ 2012, 9:10 IST
ಅಕ್ಷರ ಗಾತ್ರ

ಶಿಡ್ಲಘಟ್ಟ: ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಉದ್ಯೋಗ ಗಿಟ್ಟಿಸುವಲ್ಲಿ ವಿಫಲರಾಗುತ್ತಿದ್ದಾರೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಶ್ರಮಿಸುವಂತೆ ಕೇಂದ್ರ ರೈಲ್ವೆಖಾತೆ ರಾಜ್ಯ ಸಚಿವ ಕೆ.ಎಚ್.ಮುನಿಯಪ್ಪ ಸಲಹೆ ನೀಡಿದರು.

 ಪಟ್ಟಣದ ಡಾಲ್ಫಿನ್ ವಿದ್ಯಾಸಂಸ್ಥೆ ಆವರಣದಲ್ಲಿ ಸೋಮವಾರ ಐರೇಜ್ ಹಾಗೂ ಆಶಾದೀಪ್ ಸಂಸ್ಥೆ ವತಿಯಿಂದ ನಡೆದ ಜೀವಾನಾಧಾರ ಕೇಂದ್ರಕ್ಕೆ ಚಾಲನೆ ನೀಡಿ ಮಾತನಾಡಿದರು.

`ಚಿಕ್ಕಬಳ್ಳಾಪುರದ ನಿರುದ್ಯೋಗಿ ಗಳನ್ನು ವಿದ್ಯಾರ್ಹತೆ ಹಾಗೂ ಆಸಕ್ತಿ ಅನುಗುಣವಾಗಿ ತರ ಬೇತಿಗೊಳಿಸಿ ಉದ್ಯೋಗ ಪಡೆಯಲು ಅಣಿಗೊಳಿ ಸುವಲ್ಲಿ ಕೇಂದ್ರ ಮಹತ್ತರ ಪಾತ್ರ ವಹಿಸಲಿದೆ~ ಎಂದು ಹೇಳಿದರು.

ಶಾಸಕ ವಿ.ಮುನಿಯಪ್ಪ ಮಾತನಾಡಿ, ಉನ್ನತ ವ್ಯಾಸಂಗ ಪಡೆಯುತ್ತಿರುವವರ ಸಂಖ್ಯೆ ನಮ್ಮಲ್ಲಿ ಕ್ಷೀಣಿಸುತ್ತಿದೆ. ಆರ್ಥಿಕ, ಸಾಮಾಜಿಕ ಸಮಸ್ಯೆಗಳಿಂದ ಅರ್ಧಕ್ಕೆ ವಿದ್ಯಾಭ್ಯಾಸ ಮೊಟಕುಗೊಳಿಸುವವರ ಸಂಖ್ಯೆ ಹೆಚ್ಚುತ್ತಿರುವುದು ಆತಂಕಕಾರಿ ವಿಷಯವಾಗಿದೆ ಎಂದರು.

ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ.ಎನ್.ಮಂಜುಳಾ, ತಹಶೀಲ್ದಾರ್ ಎಲ್.ಭೀಮಾ ನಾಯ್ಕ, ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಾಹಣಾಧಿಕಾರಿ ಡಾ.ಸುಬ್ರಾ ನಾಯಕ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಬಿ.ಎನ್.ವೇಣು ಗೋಪಾಲ್, ಜಿಲ್ಲಾ ಪಂಚಾ ಯಿತಿ ಸದಸ್ಯರಾದ ನಾರಾಯಣಸ್ವಾಮಿ, ಸತೀಶ್, ಡಾಲ್ಫಿನ್ ವಿದ್ಯಾ ಸಂಸ್ಥೆ ಅಧ್ಯಕ್ಷ ಎ.ನಾಗರಾಜ್, ಕಾರ್ಯದರ್ಶಿ ವಿ.ಕೃಷ್ಣಪ್ಪ, ಆಶಾದೀಪ ಸಂಸ್ಥೆ ರೂಪಾ ಶಶಿಧರ್, ಮಣಿಪಾಲ್‌ಲ್ಗೋಬ್ಲಲ್ ಎಜುಕೇಷನ್ ಸರ್ವೀಸ್ ಶಿವ ರಾಮಕೃಷ್ಣನ್, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಬಾಲ ಚಂದ್ರ, ಸಲಹೆಗಾರ ರಾಮಮೂರ್ತಿ, ಜೀವನಾಧಾರ ಕೇಂದ್ರದ   ಡಾ. ಜಗದೀಶ್, ವಿನುತಾ ಹಾಗೂ ಆನಂದ್ ಮೊದಲಾದವರು ಕಾರ್ಯಕ್ರಮದಲ್ಲಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT