ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ಯೋಗ ನೀಡದ ಅಭಿವೃದಿ ್ಧ ಬೇಡ

Last Updated 6 ಫೆಬ್ರುವರಿ 2012, 5:50 IST
ಅಕ್ಷರ ಗಾತ್ರ

ಹುಬ್ಬಳ್ಳಿ: `ದೇಶದ ಅಭಿವೃದ್ಧಿಗೂ ಬಡತನ ನಿವಾರಣೆಗೂ ಯಾವುದೇ ಸಂಬಂಧವೇ ಇಲ್ಲದಂತಾ ಗಿದ್ದು, ಉದ್ಯೋಗ ನೀಡದ ಪ್ರಗತಿಯನ್ನಷ್ಟೇ ನಾವು ಸಾಧಿಸಿದ್ದೇವೆ. ಇದರಿಂದ ಪ್ರಯೋಜನವಾದರೂ ಏನು~ ಎಂದು ಅಖಿಲ ಭಾರತ ಬ್ಯಾಂಕ್ ನೌಕರರ ಸಂಘ (ಎಐಬಿಇಎ)ದ ಪ್ರಧಾನ ಕಾರ್ಯದರ್ಶಿ ಸಿ.ಎಚ್. ವೆಂಕಟಾಚಲಂ ಪ್ರಶ್ನಿಸಿದರು.

ಹುಬ್ಬಳ್ಳಿ-ಧಾರವಾಡ ಬ್ಯಾಂಕ್ ನೌಕರರ ಸಂಘದ ಆರನೇ ವಾರ್ಷಿಕ ಸಮಾವೇಶವನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.

`ಒಂದೆಡೆ ಅಮೆರಿಕದ ಆರ್ಥಿಕ ವ್ಯವಸ್ಥೆ ಕುಸಿಯುತ್ತಿದೆ ಎಂದು ಅಲ್ಲಿಯ ಸರ್ಕಾರವೇ ಹೇಳುತ್ತದೆ. ಇನ್ನೊಂದೆಡೆ ನಮ್ಮದು ಸದೃಢ ಅರ್ಥವ್ಯವಸ್ಥೆ ಎಂದು ಭಾರತದ ಹಣಕಾಸು ಸಚಿವರು ಬೀಗುತ್ತಾರೆ. ಆದರೆ, ಡಾಲರ್ ಮೌಲ್ಯ ಹೆಚ್ಚಿದರೆ, ರೂಪಾಯಿ ಮೌಲ್ಯ ಕುಸಿಯುತ್ತಿದೆ. ಇಲ್ಲಿಯೂ ಒಂದಕ್ಕೊಂದು ಸಂಬಂಧವೇ ಇಲ್ಲವಾಗಿದೆ~ ಎಂದು ಅವರು ವಿಷಾದಿಸಿದರು.

`ದೇಶದಲ್ಲಿ ಭ್ರಷ್ಟಾಚಾರ ಮಿತಿಮೀರಿದ್ದು, ಅದರ ಫಲವಾಗಿ ನಿತ್ಯವೂ ಹಗರಣಗಳು ಹೊರಬೀಳುತ್ತಿವೆ. ಇಂತಹ ಸನ್ನಿವೇಶದಲ್ಲಿ ಬ್ಯಾಂಕ್‌ಗಳನ್ನು ರಕ್ಷಿಸಿಕೊಳ್ಳುವ ಜವಾಬ್ದಾರಿಯೂ ನೌಕರರ ಮೇಲಿದೆ. ಮೇಲಿಂದ ಮೇಲೆ ಮುಷ್ಕರ ನಡೆಸಿದರೆ ಬ್ಯಾಂಕ್‌ಗೆ, ದೇಶಕ್ಕೆ ಹಾ ಗೂ ವೈಯಕ್ತಿಕವಾಗಿ ಕಾರ್ಮಿಕನಿಗೂ ಅಪಾರ ಹಾನಿ. ಇಂತಹ ಸನ್ನಿವೇಶ ಎದುರಾಗದಂತೆ ಆಡಳಿತ ಮಂಡಳಿ ಎಚ್ಚರವಹಿಸಬೇಕು~ ಎಂದು ಸಲಹೆ ನೀಡಿದರು.

`ಉದ್ಯೋಗ ಸೃಷ್ಟಿಯಲ್ಲಿ ಕೇವಲ ಶೇ 5ರಷ್ಟು ಪ್ರಗತಿ ಸಾಧಿಸಲಾಗಿದೆ ಎಂಬ ಮಾಹಿತಿ ಕಾರ್ಮಿಕ ಇಲಾಖೆಯಿಂದ ಸಿಗುತ್ತದೆ. ಆದ್ದರಿಂದಲೇ ಇಂದಿನ ದಿನಗಳಲ್ಲಿ ಎಂ.ಟೆಕ್ ಆದವರೂ ಬ್ಯಾಂಕ್ ಉದ್ಯೋಗ ಅರಿಸಿ ಬರುತ್ತಾರೆ. ಆಯಾ ಕ್ಷೇತ್ರದಲ್ಲಿ ಪರಿಣಿತಿ ಸಾಧಿಸಿದವರಿಗೆ ಆಯಾ ಕ್ಷೇತ್ರದಲ್ಲೇ ಕೆಲಸ ಸಿಗಬೇಕು~ ಎಂದು ಅವರು ಪ್ರತಿಪಾದಿಸಿದರು.

`ಹೊಸ ಉದ್ಯೋಗ ಸೃಷ್ಟಿಯಾಗುವ ಬದಲು ಕಳೆದ ಕೆಲ ವರ್ಷಗಳಲ್ಲಿ 45 ಲಕ್ಷ ಜನ ಕೆಲಸ ಕಳೆದು ಕೊಂಡಿದ್ದಾರೆ. ನಮ್ಮ ನಡಿಗೆ ಹಿಮ್ಮುಖವಾಗಿ ಸಾಗಿದೆ. ಅಸಂಘಟಿತ ವಲಯದ 40 ಕೋಟಿ ಕಾರ್ಮಿಕರಿಗೆ ಯಾವ ಸೌಲಭ್ಯವೂ ಇಲ್ಲ. ದೇಶ ರೂಢಿಸಿಕೊಂಡ ಆರ್ಥಿಕ ನೀತಿಗಳು ಸಾಮಾಜಿಕ ವ್ಯವಸ್ಥೆ ಮೇಲೆ ದೊಡ್ಡ ಏಟು ನೀಡಿವೆ.
 
ಜನಸಾಮಾನ್ಯರ ಹಿತರಕ್ಷಣೆಗೆ ಸಾರ್ವಜನಿಕ ವಲಯದ ಪಾತ್ರ ಬಹಳ ದೊಡ್ಡದು. ಖಾಸಗೀಕರಣದ ವಿರುದ್ಧ ನಾವು ಸಂಘಟಿತವಾಗಿ ಹೋರಾಡಬೇಕಿದೆ~ ಎಂದು ಅವರು ವಿವರಿಸಿದರು.

`ಬ್ಯಾಂಕ್‌ಗಳಿಗೆ ಲಾಭವೇ ಅಂತಿಮ ಗುರಿಯಾಗ ಬಾರದು. ಸಾಮಾಜಿಕ ಬ್ಯಾಂಕ್‌ಗಳ ವಾಣಿಜ್ಯೀಕರಣ ನಿಲ್ಲಬೇಕು~ ಎಂದ ಅವರು, `1.32 ಲಕ್ಷ ಹಳ್ಳಿಗಳಿಗೆ ಬ್ಯಾಂಕಿಂಗ್ ವ್ಯವಸ್ಥೆ ಕಾಲಿಟ್ಟಿದೆ ಎಂದು ಅರ್ಥ ಸಚಿವರು ಹೇಳುತ್ತಾರೆ.
 
ಹಳ್ಳಿಗಳಿಗೆ ಬ್ಯಾಂಕಿಂಗ್ ವ್ಯವಸ್ಥೆ ಹೋಗಿ ದೆಯೇ ವಿನಃ ಬ್ಯಾಂಕ್ ಹೋಗಿಲ್ಲ. ಪ್ರತಿ ಹಳ್ಳಿಯಲ್ಲಿ ಬ್ಯಾಂಕ್ ಸ್ಥಾಪನೆಯಾದರೆ ಉದ್ಯೋಗ ಸೃಷ್ಟಿಯಾಗು ವುದಲ್ಲದೆ ಜನರಿಗೂ ಸೌಲಭ್ಯ ಸಿಕ್ಕಂತಾಗುತ್ತದೆ~ ಎಂದು ಅವರು ಅಭಿಪ್ರಾಯಪಟ್ಟರು.

`ಸರ್ಕಾರದ ವಿರುದ್ಧ ನಮ್ಮ ಹೋರಾಟವೇ ಹೊರತು ಗ್ರಾಹಕರ ವಿರುದ್ಧ ಅಲ್ಲ. ಗ್ರಾಹಕರಿಗೆ ಉತ್ತಮ ಸೇವೆ ನೀಡುವ ಮೂಲಕ ಬ್ಯಾಂಕ್‌ಗಳನ್ನು ಬಲಪಡಿಸಬೇಕು~ ಎಂದು ಅವರು ಕರೆ ನೀಡಿದರು. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸರ್ಕಾರದ ನೀತಿಗಳಿಂದ ಆಗುತ್ತಿರುವ ಪರಿಣಾಮ, ಕಾನೂನು ಅನುಷ್ಠಾನದಲ್ಲಿ ನಡೆದಿರುವ ವೈಫಲ್ಯ, ಇದರಿಂದ ಕಾರ್ಮಿಕರು ಹಿಡಿಯಬೇಕಾದ ಹಾದಿ ವಿಷಯವಾಗಿ ಅವರು ಒಂದು ಗಂಟೆಗೂ ಅಧಿಕ ಹೊತ್ತು ಮಾತನಾಡಿದರು.

ಎಐಬಿಇಎ ಜಂಟಿ ಕಾರ್ಯದರ್ಶಿ ಪಿ.ಆರ್. ಕಾರಂತ್, ಕರ್ನಾಟಕ ಪ್ರದೇಶ ಬ್ಯಾಂಕ್ ನೌಕರರ ಒಕ್ಕೂಟ (ಕೆಪಿಬಿಇಎಫ್)ದ ಅಧ್ಯಕ್ಷ ಎನ್.ವೇಣುಗೋಪಾಲ್, ಪ್ರಧಾನ ಕಾರ್ಯದರ್ಶಿ ಎಚ್.ವಿ.ರೈ, ಹುಬ್ಬಳ್ಳಿ- ಧಾರವಾಡ ಬ್ಯಾಂಕ್ ನೌಕರರ ಸಂಘದ ಅಧ್ಯಕ್ಷ ಮಿಲಿಂದ್ ಕಟ್ಟಿ, ಪ್ರಧಾನ ಕಾರ್ಯದರ್ಶಿ ಸ್ಟೀಫನ್ ಜಯಚಂದ್ರ ಮತ್ತು ಅಶೋಕ ಸಾಂಬ್ರಾಣಿ ವೇದಿಕೆ ಮೇಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT