ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ಯೋಗ ಮತ್ತು ತರಬೇತಿ ಇಲಾಖೆ ಜಂಟಿ ನಿರ್ದೇಶಕನ ಬಂಧನ

Last Updated 23 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಬೆಂಗಳೂರು: ಬಡ್ತಿ ಕಡತ ವಿಲೇವಾರಿಗೆ ತನ್ನ ಕಚೇರಿಯ ನೌಕರನಿಂದಲೇ ₨10 ಸಾವಿರ ಲಂಚ ಪಡೆದ ಉದ್ಯೋಗ ಮತ್ತು ತರಬೇತಿ ಇಲಾಖೆಯ ಜಂಟಿ ನಿರ್ದೇಶಕ ಎಚ್‌.ವಿ.ವೆಂಕಟರಾಮು ಅವರನ್ನು ಲೋಕಾಯುಕ್ತ ಪೊಲೀಸರು ಸೋಮವಾರ ಬಂಧಿಸಿದ್ದಾರೆ. ಉದ್ಯೋಗ ಮತ್ತು ತರಬೇತಿ ನಿರ್ದೇ­ಶನಾ­ಲಯದ ಕಚೇರಿಯಲ್ಲಿ ಅಧೀಕ್ಷಕ­ರಾಗಿರುವ ಬಸವರಾಜ್‌ ಕುರುವತ್ತಿ ಅವರಿಗೆ ಬಡ್ತಿ ನೀಡಬೇಕಿತ್ತು.

ಈ ಪ್ರಕ್ರಿಯೆಗೆ ಸಂಬಂಧಿಸಿದ ಕಡತ ವಿಲೇವಾರಿ ಮಾಡುವಂತೆ ಅವರು, ಜಂಟಿ ನಿರ್ದೇಶಕರಿಗೆ ಮನವಿ ಮಾಡಿ­ದ್ದರು. ಕಡತ ವಿಲೇವಾರಿಗೆ ₨ 50 ಸಾವಿರ ನೀಡುವಂತೆ  ಒತ್ತಾಯಿಸಿದ್ದರು. ಮತ್ತೆ ಇಬ್ಬರ ನಡುವೆ ಮಾತುಕತೆ ನಡೆದಿತ್ತು. ಸೋಮವಾರ ₨ 10 ಸಾವಿರ ಮುಂಗಡ ನೀಡುವಂತೆ ಮತ್ತೆ ಒತ್ತಾಯಿಸಿದ್ದರು.

ಈ ಕುರಿತು ಬಸವ­ರಾಜ್‌ ಅವರು ಬೆಂಗಳೂರು ನಗರ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಮೊದಲೇ ನಡೆದ ಮಾತು-­ಕತೆಯಂತೆ ಸೋಮವಾರ ಕಚೇರಿಗೆ ತೆರಳಿದ ಬಸವರಾಜ್‌ ₨ 10 ಸಾವಿರ ಲಂಚವನ್ನು ವೆಂಕಟರಾಮು ಅವರಿಗೆ ನೀಡಿದರು. ತಕ್ಷಣವೇ ದಾಳಿ ಮಾಡಿದ ಲೋಕಾಯುಕ್ತ ಪೊಲೀಸರು ಆರೋಪಿ­ಯನ್ನು ಬಂಧಿಸಿದರು.

ಆರೋಪಿಯ ಗಿರಿನಗರದ ಮನೆಯ ಮೇಲೂ ಲೋಕಾಯುಕ್ತ ಪೊಲೀಸರು ದಾಳಿ ಮಾಡಿ, ಕೆಲ ದಾಖಲೆ­ಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಬೆಂಗಳೂರು ನಗರ ಲೋಕಾಯುಕ್ತ ಡಿವೈಎಸ್‌ಪಿಗಳಾದ ವಿ.ಪಿ.ಎಂ.ಸ್ವಾಮಿ, ಡಿ.ಫಾಲಾಕ್ಷಯ್ಯ, ಇನ್‌ಸ್ಪೆಕ್ಟರ್‌ಗಳಾದ ಎನ್‌.ಜಿ.ಶಿವಶಂಕರ್‌ ಮತ್ತು ಅನಿಲ್‌ ಗ್ರಾಮಪುರೋಹಿತ್‌ ಕಾರ್ಯಾಚರಣೆ­ಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT