ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ಯೋಗ ಮೇಳ: ಐದು ಸಾವಿರ ಆಕಾಂಕ್ಷಿಗಳ ನಿರೀಕ್ಷೆ

Last Updated 29 ಮೇ 2012, 5:30 IST
ಅಕ್ಷರ ಗಾತ್ರ

ಹಾವೇರಿ: ರಾಜ್ಯ ಮಟ್ಟದ 34ನೇ ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯೋಗ ಮೇಳ ಮೇ 29 ಮತ್ತು 30ರಂದು ನಗರದ ಸಿ.ಬಿ. ಕೊಳ್ಳಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ನಡೆಯಲಿದ್ದು, ಅದಕ್ಕಾಗಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ಸಕಲ ಸಿದ್ಧತೆ ಮಾಡಿಕೊಂಡಿವೆ.

ಉದ್ಯೋಗ ಮತ್ತು ತರಬೇತಿ ಇಲಾಖೆ ಹಾಗೂ ರಾಜ್ಯವೃತ್ತಿ ತರಬೇತಿ ಮತ್ತು ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ ಹಾಗೂ ಜಿಲ್ಲಾಡಳಿತದ ಸಹ ಯೋಗದಲ್ಲಿ ನಡೆಯುವ ಎರಡು ದಿನ ಗಳ ಮೇಳದಲ್ಲಿ ರಾಜ್ಯದ 75ಕ್ಕೂ ಅಧಿಕ ಖಾಸಗಿ ಕಂಪೆನಿಗಳು ಭಾಗವಹಿಸಲಿದ್ದು, ಸುಮಾರು 2000ಕ್ಕೂ ಅಧಿಕ ಸಿಬ್ಬಂದಿ ಮತ್ತು ತಂತ್ರಜ್ಞರ ನೇಮಕಾತಿ ಮಾಡಿ ಕೊಳ್ಳಲಿವೆ. ಮೇಳದಲ್ಲಿ ನಡೆಯುವ ಅಭ್ಯರ್ಥಿಗಳ ಸಂದರ್ಶನ, ನೇಮಕಾತಿಗೆ 18 ಕೊಠಡಿಗಳ ವ್ಯವಸ್ಥೆ ಮಾಡಲಾಗಿದೆ.

ಮೇಳವು ಪ್ರತಿ ದಿನ ಬೆಳಿಗ್ಗೆ 8.30 ರಿಂದ ಸಂಜೆ 4 ಗಂಟೆ ವರೆಗೆ ನಡೆಯ ಲಿದ್ದು, ಎರಡು ದಿನಗಳ ಮೇಳದಲ್ಲಿ ಜಿಲ್ಲೆ, ನೆರೆ ಜಿಲ್ಲೆ ಹಾಗೂ ರಾಜ್ಯದ ವಿವಿಧೆಡೆಗಳಿಂದ ಸುಮಾರು 4ರಿಂದ 5 ಸಾವಿರ ಉದ್ಯೋಗಾಕಾಂಕ್ಷಿಗಳು ಭಾಗ ವಹಿಸುವ ನಿರೀಕ್ಷೆಯಿದೆ ಎಂದು ಜಿಲ್ಲಾಧಿಕಾರಿ ಎಚ್.ಜಿ.ಶ್ರೀವರ ತಿಳಿಸಿದ್ದಾರೆ.

ಉದ್ಯೋಗ ಆಕಾಂಕ್ಷಿಗಳಿಗೆ ಮೊದಲು ಅವರು ಆಯ್ಕೆ ಮಾಡುವ ಉದ್ಯೋಗ ಕುರಿತು ಸೂಕ್ತ ಮಾರ್ಗದರ್ಶನ ಮಾಡಲು ಕೊಳ್ಳಿ ಕಾಲೇಜಿನ ಒಂದು ಕೊಠಡಿಯಲ್ಲಿ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗಿದೆ. ಉದ್ಯೋಗಾಕಾಂಕ್ಷಿಗಳ ನೆರವಿಗಾಗಿ ಮೇಳದಲ್ಲಿ ವಿವಿಧ ಇಲಾಖೆ ಅಧಿಕಾರಿಗಳು, ನೌಕರರು, ಸಿಬ್ಬಂದಿ, ಪೊಲೀಸ್ ಹಾಗೂ ಎನ್‌ಎಸ್‌ಎಸ್ ಸ್ವಯಂ ಸೇವಕರ ಸಹಕಾರ ಪಡೆಯ ಲಾ ಗಿದೆ. ಮೇಳಕ್ಕೆ ಬರುವ ಉದ್ಯೋಗಾಂಕ್ಷಿ ಗಳಿಗಾಗಿ ಜೈನ್ ಅಸೋಸಿಯೇಶನ್ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿದೆ.

ಉದ್ಯೋಗ ಮೇಳದಲ್ಲಿ ಮೇ 29 ರಂದು ಶಾಲೆ ತೊರೆದವರು, ಎಸ್ಸೆಸ್ಸೆಲ್ಸಿ, ಪಿಯುಸಿ, ಐ.ಟಿ.ಐ, ಡಿಪ್ಲೋಮಾ ಹಾಗೂ ಜೆ.ಓ.ಸಿ. ಅಭ್ಯರ್ಥಿಗಳು ಭಾಗ ವಹಿಸಬಹುದು. ಇವರಿಗೆ ಎರಡನೇ ದಿನವೂ ಆಯ್ಕೆಗೆ ಆವಕಾಶವಿದೆ.

ಮೇ 30 ರಂದು ಪದವೀಧರರು, ತಾಂತ್ರಿಕ ಪದವೀಧರರು ಮತ್ತು ಸ್ನಾತಕೋತ್ತರ ಪದವೀಧರರು ಪಾಲ್ಗೊಳ್ಳಬಹುದಾಗಿದೆ. ಮೇಳದಲ್ಲಿ ಭಾಗವಹಿಸಲು ಸಾಧ್ಯ ವಾಗದ ಅಭ್ಯರ್ಥಿಗಳು ಸಹಾಯವಾಣಿ ದೂರವಾಣಿ ಸಂಖ್ಯೆ 080- 23441212/234417117 ಮೂಲಕ  ಕೌಶಲ್ಯ ತರಬೇತಿಗೆ ಹೆಸರು ನೋಂದಾಯಿಸಿಕೊಳ್ಳಲು ಅವಕಾಶ ನೀಡಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.

ಇವು ನಿಮ್ಮಂದಿಗಿರಲಿ: ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯೋಗ ಮೇಳಕ್ಕೆ ಬರುವ ಅಭ್ಯರ್ಥಿಗಳು ತಮ್ಮ ವ್ಯಕ್ತಿ ಪರಿ ಚಯದ ಕನಿಷ್ಟ 10 ಪ್ರತಿಗಳನ್ನು ತರ ಬೇಕು. ಅಗತ್ಯ ವಿದ್ಯಾರ್ಹತೆ ಪ್ರಮಾಣ ಪತ್ರ ಮತ್ತು ವಿಳಾಸದ ದೃಢೀಕರಣಕ್ಕೆ ಪಡಿತರ ಚೀಟಿ ಅಥವಾ ವಾಹನ ಚಾಲನಾ ಪರವಾನಗಿ ಇಲ್ಲವೇ ಮತ ದಾರರ ಗುರುತಿನ ಚೀಟಿಯ ಝರಾಕ್ಸ್ ಪ್ರತಿಗಳನ್ನು ತರಬೇಕು.

ಕೌಶಲ್ಯ ಮಾಲ್ಯಮಾಪನ ಪರೀಕ್ಷೆಗಾಗಿ ರೈಟಿಂಗ್ ಪ್ಯಾಡ್ ಮತ್ತು ಪೆನ್ನು ಹೊಂದಿರಬೇಕು. ಕೌಶಲ್ಯ ತರಬೇತಿ ಜಿಲ್ಲೆಯ ವಿಧೆಡೆ ನಡೆಯಲಿದ್ದು, ಪ್ರಾಯೋಜಿತ ತರಬೇತಿಯಲ್ಲಿ ಆಸಕ್ತಿ ಯುಳ್ಳವರು ಕ್ಷೇತ್ರವಾರು ನೋಂದಣಿ ಮಾಡಿಕೊಳ್ಳಬೇಕು. ಕೌಶಲ್ಯ ಮೌಲ್ಯ ಮಾಪನದ ತರಬೇತಿಯ ನಂತರ ಅಭ್ಯರ್ಥಿಗಳು ನೇರವಾಗಿ ಉದ್ದಿಮೆ ದಾರರನ್ನು ಸಂದರ್ಶಿಸಿ ಉದ್ಯೋಗಾ ವಕಾಶ ಪಡೆಯಲು ಅವಕಾಶ ಕಲ್ಪಿಸಲಾಗಿದೆ.

ಉದ್ದಿಮೆದಾರರು ತಮಗೆ ಅಗತ್ಯವಿರುವ ಉದ್ಯೋಗಿ   ಗಳನ್ನು ಸ್ಥಳದಲ್ಲಿಯೇ ನೇರವಾಗಿ ಆಯ್ಕೆ ಮಾಡಿ ಕೊಳ್ಳಲಿದ್ದಾರೆ. ಆಯ್ಕೆಯಾದ ಅಭ್ಯರ್ಥಿ ಗಳಿಗೆ ಕಂಪನಿಗಳು ಸ್ಥಳದಲ್ಲಿ ಉದ್ಯೋಗ ಪತ್ರ ನೀಡಲಿವೆ.

ಭಾಗವಹಿಸುವ ಕಂಪೆನಿಗಳು: ನಗರ ದಲ್ಲಿ ನಡೆಯಲಿರುವ ಉದ್ಯೋಗ ಮೇಳ ದಲ್ಲಿ ಕಿರ್ಲೋಸ್ಕರ್ ಇಲೆಕ್ಟ್ರಿಕ್ ಕಂಪೆನಿ, ಆದಿತ್ಯ ಬಿರ್ಲಾ ರಿಟೈಲ್, ಸೊಡೆಕ್ಸೊ ಫುಡ್ ಫೆಸಿಲಿಟೀಸ್, ಟಿ.ಡಿ. ಪಾವರ್ ಸಿಸ್ಟಮ್ಸ, ಎಚ್.ಡಿ.ಎಫ್.ಸಿ.ಬ್ಯಾಂಕ್, ರಕ್ಷಾ ಸೆಕ್ಯೂರಿಟಿ, ಅರವಿಂದ ಲಿಮಿಟೆಡ್, ನವತಾ ರೋಡ್ ಟ್ರಾನ್ಸ್‌ಪೋರ್ಟ್, ಮೆಡ್‌ಪ್ಲಸ್ ಹೆಲ್ತ್ ಸರ್ವಿಸಸ್, ಯುರೇಕಾ ಫೋಬ್ಸ್, ಫಸ್ಟ್‌ಸೋಸ್, ಬೆಲ್ಲದ ಆ್ಯಂಡ್ ಕಂಪೆನಿ, ನವಭಾರತ  ಫರ್ಟಿಲೈಸರ್ಸ್‌, ಸಿಂಥೈಟ್ ಇಂಡಸ್ಟೀಸ್ ಸೇರಿದಂತೆ 75ಕ್ಕೂ ಅಧಿಕ  ಕಂಪೆನಿಗಳು ಭಾಗವಹಿಸಲಿವೆ.

ಇಂದು ಉದ್ಘಾಟನೆ: ನಗರದ ಕೊಳ್ಳಿ ಪಾಲಿಟೆಕ್ನಿಕ್ ಕಾಲೇಜು ಆವರಣದಲ್ಲಿ ಮೇ 29 ರಂದು ಬೆಳಿಗ್ಗೆ 9 ಗಂಟೆಗೆ  ನಡೆ ಯಲಿರುವ ಉದ್ಯೋಗ ಮೇಳವನ್ನು ಜಿ.ಪಂ. ಅಧ್ಯಕ್ಷೆ ಸಾವಿತ್ರಿ ತಳವಾರ ಉದ್ಘಾಟಿಸುವರು.
ಜಿಲ್ಲಾಧಿಕಾರಿ ಎಚ್.ಜಿ .ಶ್ರೀವರ ಹಾಗೂ ಉದ್ಯೋಗ ಮತ್ತು ತರಬೇತಿ ಇಲಾಖೆ ಕರ್ನಾಟಕ ವೃತ್ತಿ ತರಬೇತಿ ಮತ್ತು ಕೌಶಲ್ಯ ಅಭಿವೃದ್ಧಿ ನಿಗಮದ ಹಿರಿಯ ಅಧಿಕಾರಿಗಳು ಪಾಲ್ಗೊಳ್ಳ ಲಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT