ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ಯೋಗ ಸೃಷ್ಟಿ ಮಸೂದೆ: ಅಮೆರಿಕ ಸೆನೆಟ್ ತಿರಸ್ಕಾರ

Last Updated 12 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ವಾಷಿಂಗ್ಟನ್ (ಎಎಫ್‌ಪಿ): ಅಧ್ಯಕ್ಷ ಬರಾಕ್ ಒಬಾಮ ಅವರ ಮಹತ್ವಾಕಾಂಕ್ಷೆಯ ಉದ್ಯೋಗ ಸೃಷ್ಟಿಸುವ ಮಸೂದೆಯನ್ನು ಅಮೆರಿಕ ಸೆನೆಟ್ ತಿರಸ್ಕರಿಸಿದೆ.

ಸಂಕಷ್ಟದಲ್ಲಿರುವ ದೇಶದ ಆರ್ಥಿಕ ಸ್ಥಿತಿಯನ್ನು ಸುಧಾರಿಸುವ ನಿಟ್ಟಿನಲ್ಲಿ ಒಬಾಮ ಬಹು ಆಸ್ಥೆ ವಹಿಸಿ ಈ ಮಸೂದೆಯನ್ನು ಸಿದ್ಧಪಡಿಸಿದ್ದರು. ಹಾಗೆಯೇ ಮುಂದಿನ ವರ್ಷ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯ ದೃಷ್ಟಿಯಿಂದಲೂ ಈ ಮಸೂದೆ ಬಗ್ಗೆ ಅವರಿಗೆ ದೊಡ್ಡ ನಿರೀಕ್ಷೆ ಇತ್ತು.

 44700 ಕೋಟಿ ಡಾಲರ್ ವೆಚ್ಚದ ಬೃಹತ್ ಯೋಜನೆಯ ಈ ಮಸೂದೆಯು ಸೆನೆಟ್‌ನಲ್ಲಿ 50-49 ಮತಗಳ ಅಂತರದಲ್ಲಿ ಬಿದ್ದುಹೋಗಿದೆ. ಈ ಮಸೂದೆಗೆ ಅಂಗೀಕಾರ ದೊರಕಬೇಕಿದ್ದರೆ ಇನ್ನೂ 60 ಸಂಸದರು ಅದರ ಪರವಾಗಿ ಮತ ಹಾಕಬೇಕಿತ್ತು. ಆದರೆ ವಿರೋಧ ಪಕ್ಷವಾದ ರಿಪಬ್ಲಿಕನ್ ಸದಸ್ಯರು ಮಸೂದೆಯನ್ನು ಕಟುವಾಗಿ ವಿರೋಧಿಸಿದರು. ಇದರಿಂದ ಎರಡನೇ ಅವಧಿಗೆ ಅಧ್ಯಕ್ಷರಾಗಲು ಬಯಸಿರುವ ಒಬಾಮ ಅವರ ಹಂಬಲಕ್ಕೆ ತಣ್ಣೀರು ಎರಚಿದಂತಾಗಿದೆ.

`ಮಸೂದೆ ಮೇಲೆ ಮತದಾನ ನಡೆಯುವ ಮಾತ್ರಕ್ಕೆ ಈ ಪ್ರಯತ್ನ ಕೊನೆಗೊಂಡಂತೆ ಅಲ್ಲ~ ಎಂಬ ಒಬಾಮ ಅವರ ಹೇಳಿಕೆಯನ್ನು ಸೆನೆಟ್‌ನಲ್ಲಿ ಈ ಮಸೂದೆ ಮೇಲೆ ಮತದಾನ ನಡೆಯುವುದಕ್ಕೂ ಮುನ್ನ ಬಿಡುಗಡೆ ಮಾಡಲಾಗಿತ್ತು. ಆದರೆ ಇದಕ್ಕೆ ಅಂಗೀಕಾರ ದೊರೆಯದ ಕಾರಣ ಈ ಮಸೂದೆಯನ್ನು ಮತ್ತೆ ಬಲಿಷ್ಠ ರೀತಿಯಲ್ಲಿ ಸೆನೆಟ್ ಮುಂದೆ ತರುವುದಾಗಿ ಒಬಾಮ ಘೋಷಿಸಿದ್ದಾರೆ. ಈ ಮೂಲಕ ವಿರೋಧ ಪಕ್ಷಕ್ಕೆ ರಾಜಕೀಯವಾಗಿ ಸವಾಲು ಹಾಕಿದ್ದಾರೆ.

`ಉದ್ಯೋಗವಿಲ್ಲದೆ ಅನೇಕರು ಪರಿತಪಿಸುತ್ತಿದ್ದಾರೆ. ಮಧ್ಯಮ ವರ್ಗದ ಹಲವು ಕುಟುಂಬಗಳು ತೊಂದರೆಗೆ ಸಿಲುಕಿವೆ. ಯಾವುದೇ ಸಮಸ್ಯೆಗೆ `ಇಲ್ಲ~ ಎಂಬುದೇ ಉತ್ತರವಲ್ಲ ಮತ್ತು ಜನರು `ಇಲ್ಲ~ ಎಂಬ ಉತ್ತರವನ್ನು ಒಪ್ಪುವುದೂ ಇಲ್ಲ. ಈ ಮಸೂದೆಗೆ ಅಗತ್ಯವಾದ ಆರ್ಥಿಕ ಸಂಪನ್ಮೂಲ ಸಂಗ್ರಹಿಸಲು ಶ್ರೀಮಂತರಿಂದ ಹೆಚ್ಚಿನ ಕರ ವಸೂಲು ಮಾಡಿ ಉದ್ಯೋಗ ಸೃಷ್ಟಿಸಿ ಪರಿತಪಿಸುತ್ತಿರುವ ಮಧ್ಯಮ ವರ್ಗಗಳಿಗೆ ಅನುಕೂಲ ಕಲ್ಪಿಸುವ ಉದ್ದೇಶವಿತ್ತು. ಆದರೆ ಪ್ರತಿಪಕ್ಷದ ಸದಸ್ಯರು ಇದನ್ನು ವಿರೋಧಿಸಿ ಮಸೂದೆಯ ಉದ್ದೇಶಕ್ಕೆ ತೊಡರುಗಾಲು ಹಾಕಿದ್ದಾರೆ~ ಎಂದು ಒಬಾಮ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT