ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ಯೋಗಾವಕಾಶ ಅಲ್ಲಲ್ಲಿ...

Last Updated 20 ಫೆಬ್ರುವರಿ 2011, 19:30 IST
ಅಕ್ಷರ ಗಾತ್ರ

ಅಲಹಾಬಾದ್ ಬ್ಯಾಂಕ್
ಅಲಹಾಬಾದ್ ಬ್ಯಾಂಕ್‌ನಲ್ಲಿ 1100 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 15-03-2011. ಪರೀಕ್ಷಾ ದಿನಾಂಕ: 08-05-2011.
ಹುದ್ದೆ ಹೆಸರು: ಸಿಂಗಲ್ ವಿಂಡೊ ಆಪರೇಟರ್ ‘ಎ’
ಒಟ್ಟು ಹುದ್ದೆ: 1100
ವೇತನ ಶ್ರೇಣಿ: ರೂ. 7200-19300/-
ವಯೋಮಿತಿ: ಕನಿಷ್ಠ 18 ವರ್ಷ, ಗರಿಷ್ಠ 28 ವರ್ಷ. ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಓಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ.
ವಿದ್ಯಾರ್ಹತೆ: ಶೇಕಡಾ 55 ಅಂಕಗಳೊಂದಿಗೆ ಹೈಯರಿ ಸೆಕೆಂಡರಿ ಎಕ್ಸಾಮಿನೇಷನ್‌ನಲ್ಲಿ ಉತ್ತೀರ್ಣ ಅಥವಾ 10+2 (10+2+3 ಮಾದರಿ) ಅಥವಾ ತತ್ಸಮಾನ. ಅಥವಾ ಪದವಿ.
ಅರ್ಜಿ ಶುಲ್ಕ: ರೂ. 300/-
 ಆಯ್ಕೆ ವಿಧಾನ: ಲಿಖಿತ ಪರೀಕ್ಷೆ ಹಾಗೂ ಸಂದರ್ಶನ
* ಕರ್ನಾಟಕದಲ್ಲೂ ಹುದ್ದೆಗಳಿವೆ.
* ಬೆಂಗಳೂರಿನಲ್ಲೂ ಪರೀಕ್ಷೆ ನಡೆಯಲಿದೆ.
ವಿಳಾಸ: ದಿ ಜೋನಲ್ ಮ್ಯಾನೇಜರ್, ಅಲಹಾಬಾದ್ ಬ್ಯಾಂಕ್ ಜೋನಲ್ ಆಫೀಸ್: ಬೆಂಗಳೂರು, ಎನ್-603, ಮಣಿಪಾಲ್ ಸೆಂಟರ್, ನಾರ್ಥ್ ಬ್ಲಾಕ್ (ಫ್ರಂಟ್ ವಿಂಗ್) 47 ಡಿಕೆನ್ಸನ್ ರಸ್ತೆ, ಬೆಂಗಳೂರು-560042
ಮಾಹಿತಿಗೆ www.allahabadbank.in ವೆಬ್‌ಸೈಟ್ ಸಂಪರ್ಕಿಸಿ.

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ)ನಲ್ಲಿ 13 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 14-03-2011.
ಹುದ್ದೆ ಹೆಸರು: ಅಸಿಸ್ಟೆಂಟ್ ಮ್ಯಾನೇಜರ್ (ಸೆಕ್ಯೂರಿಟಿ) ಗ್ರೇಡ್ ‘ಎ’; ಒಟ್ಟು ಹುದ್ದೆ: 13
ವೇತನ ಶ್ರೇಣಿ: ರೂ. 17000-33200/-
ವಯೋಮಿತಿ: ಕನಿಷ್ಠ 25 ವರ್ಷ, ಗರಿಷ್ಠ 45 ವರ್ಷ. ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಓಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ.
ಆಯ್ಕೆ ವಿಧಾನ: ಸಂದರ್ಶನ
ಪೋಸ್ಟ್ ಮೂಲಕವೂ ಅರ್ಜಿ ಸಲ್ಲಿಸಬಹುದು. ಅದಕ್ಕೆ ಕಡೆಯ ದಿನಾಂಕ: 21-04-2011
ವಿಳಾಸ: ಜನರಲ್ ಮ್ಯಾನೇಜರ್, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸರ್ವೀಸಸ್ ಬೋರ್ಡ್, ಮುಂಬೈ ಸೆಂಟ್ರಲ್ ರೈಲ್ವೆ ಸ್ಟೇಷನ್ ಎದುರು, ಬೈಕುಲ್ಲಾ, ಮುಂಬೈ-400008
ಹೆಚ್ಚಿನ ಮಾಹಿತಿಗೆ www.rbi.org.in ವೆಬ್‌ಸೈಟ್ ಸಂಪರ್ಕಿಸಿ.

ನ್ಯಾಷನಲ್ ಥರ್ಮಲ್ ಪವರ್ ಲಿಮಿಟೆಡ್
ನ್ಯಾಷನಲ್ ಥರ್ಮಲ್ ಪವರ್ ಲಿಮಿಟೆಡ್ (ಎನ್‌ಟಿಪಿಸಿ)ನಲ್ಲಿ 520 ಎಕ್ಸಿಕ್ಯೂಟೀವ್ ಟ್ರೈನಿ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 07-03-2011. ಲಿಖಿತ ಪರೀಕ್ಷೆ: 17-04-2011
1) ಹುದ್ದೆ: ಎಲೆಕ್ಟ್ರಿಕಲ್, ಒಟ್ಟು ಹುದ್ದೆ: 145
2) ಹುದ್ದೆ: ಮೆಕಾನಿಕಲ್, ಒಟ್ಟು ಹುದ್ದೆ: 175
3) ಹುದ್ದೆ: ಸಿವಿಲ್, ಒಟ್ಟು ಹುದ್ದೆ: 60
4) ಹುದ್ದೆ: ಕಂಟ್ರೋಲ್ ಅಂಡ್ ಇನ್‌ಸ್ಟ್ರುಮೆಂಟೇಷನ್, ಒಟ್ಟು ಹುದ್ದೆ: 100
5) ಹುದ್ದೆ: ಫೈನಾನ್ಸ್, ಒಟ್ಟು ಹುದ್ದೆ: 40
ವೇತನ ಶ್ರೇಣಿ: ರೂ. 24900-50500/- (ಎನ್‌ಟಿಪಿಸಿ)
ವಯೋಮಿತಿ: ಮೊದಲ ನಾಲ್ಕು ಹುದ್ದೆಗಳಿಗೆ 27 ವರ್ಷ ದಾಟಿರಬಾರದು. ಫೈನಾನ್ಸ್ ಹುದ್ದೆಗೆ 29 ವರ್ಷ. ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಓಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ.
ವಿದ್ಯಾರ್ಹತೆ: ಶೇಕಡಾ 65 ಅಂಕಗಳೊಂದಿಗೆ ಎಂಜಿನಿಯರಿಂಗ್ ಅಥವಾ ಟೆಕ್ನಾಲಜಿ/ಎಎಂಇನಲ್ಲಿ ಪದವಿ. ಫೈನಾನ್ಸ್ ಹುದ್ದೆಗೆ ಪದವಿಯೊಂದಿಗೆ ಸಿಎ/ಐಸಿಡಬ್ಲ್ಯುಎ ಆಗಿರಬೇಕು.
ಅರ್ಜಿ ಶುಲ್ಕ: ರೂ. 500/-
ಆಯ್ಕೆ ವಿಧಾನ: ಲಿಖಿತ ಪರೀಕ್ಷೆ ಹಾಗೂ ವೈಯಕ್ತಿಕ ಸಂದರ್ಶನ
ಅರ್ಜಿ ನೋಂದಾಯಿಸಿದ ಬಳಿಕ ಪ್ರಿಂಟ್‌ಔಟ್ ತೆಗೆದು ಕಳುಹಿಸಬೇಕು. ಕಡೆಯ ದಿನಾಂಕ: 12-03-2011
ವಿಳಾಸ: ಎಚ್‌ಆರ್ ಇಟಿ ರಿಕ್ರೂಟ್‌ಮೆಂಟ್ ಗ್ರೂಪ್, ಎನ್‌ಟಿಪಿಸಿ ಲಿಮಿಟೆಡ್, ಪೋಸ್ಟ್ ಬಾಕ್ಸ್ ನಂ. 004, ಹೆಡ್ ಪೋಸ್ಟ್‌ಆಫೀಸ್, ಲೋಧಿ ರಸ್ತೆ, ನವದೆಹಲಿ-110003
ಹೆಚ್ಚಿನ ಮಾಹಿತಿಗೆ http://www.ntpccareers.net/ ವೆಬ್‌ಸೈಟ್ ಸಂಪರ್ಕಿಸಿ.

ಸ್ಟಾಫ್ ಸೆಲೆಕ್ಷನ್ ಕಮಿಷನ್
ಅಸ್ಸಾಂ ರೈಫಲ್ಸ್‌ನಲ್ಲಿ 880 ಹುದ್ದೆಗಳನ್ನು ಭರ್ತಿ ಮಾಡಲು ಸ್ಟಾಫ್ ಸೆಲೆಕ್ಷನ್ ಕಮಿಷನ್ (ಎಸ್‌ಎಸ್‌ಸಿ) ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 04-03-2011. ಪರೀಕ್ಷಾ ದಿನಾಂಕ: 01-05-2011.
ಹುದ್ದೆ ಹೆಸರು: ರೈಫಲ್‌ಮನ್ (ಜನರಲ್ ಡ್ಯೂಟಿ-ಜಿಡಿ) ಪುರುಷರು; ಒಟ್ಟು ಹುದ್ದೆ: 880
ವೇತನ ಶ್ರೇಣಿ: ರೂ. 5200-20200/-
ವಯೋಮಿತಿ: ಕನಿಷ್ಠ 18 ವರ್ಷ, ಗರಿಷ್ಠ 23 ವರ್ಷ. ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಓಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ.
ವಿದ್ಯಾರ್ಹತೆ: 10ನೇ ತರಗತಿ ಉತ್ತೀರ್ಣ. ಅಥವಾ ಮೆಟ್ರಿಕುಲೇಷನ್ ಅಥವಾ ಹೈಸ್ಕೂಲ್.
ಅರ್ಜಿ ಶುಲ್ಕ: ರೂ. 50/-
ಆಯ್ಕೆ ವಿಧಾನ: ದೈಹಿಕ ಅರ್ಹತೆ ಪರೀಕ್ಷೆ, ಲಿಖಿತ ಪರೀಕ್ಷೆ ಹಾಗೂ ವೈದ್ಯಕೀಯ ಪರೀಕ್ಷೆ
* ಬೆಂಗಳೂರಿನಲ್ಲೂ ಪರೀಕ್ಷೆ ನಡೆಯಲಿದೆ.
ಅರ್ಜಿ ಸಲ್ಲಿಸಲು ವಿಳಾಸ: ರೀಜನಲ್ ಡೈರೆಕ್ಟರ್ (ಎನ್‌ಇಆರ್), ಸ್ಟಾಫ್ ಸೆಲೆಕ್ಷನ್ ಕಮಿಷನ್, ರುಕ್ಮಿನಿ ನಗರ, ಪೋಸ್ಟ್: ಅಸ್ಸಾಂ ಸಚಿವಾಲಯ, ಗುವಾಹಟಿ, ಅಸ್ಸಾಂ-781006
ಹೆಚ್ಚಿನ  http://ssc.nic.in ವೆಬ್‌ಸೈಟ್ ಸಂಪರ್ಕಿಸಿ.

ಆಟೋಮಿಕ್ ಎನರ್ಜಿ ರೆಗ್ಯೂಲೇಟರಿ ಬೋರ್ಡ್
ಆಟೋಮಿಕ್ ಎನರ್ಜಿ ರೆಗ್ಯೂಲೇಟರಿ ಬೋರ್ಡ್ (ಎಇಆರ್‌ಬಿ)ನಲ್ಲಿ 16 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 19-03-2011.
ಹುದ್ದೆ ಹೆಸರು: ಸೈಂಟಿಫಿಕ್ ಆಫೀಸರ್ (ಎಸ್‌ಓ)/ಟೆಕ್ನಿಕಲ್ ಆಫೀಸರ್ (ಟಿಓ) ಗ್ರೇಡ್ ಇ/ಡಿ; ಒಟ್ಟು ಹುದ್ದೆ: 15
ಹುದ್ದೆ ಹೆಸರು: ಟೆಕ್ನಿಕಲ್ ಆಫೀಸರ್ (ಟಿಓ) ಗ್ರೇಡ್ ಇ/ಡಿ
ಒಟ್ಟು ಹುದ್ದೆ: 01
ವೇತನ ಶ್ರೇಣಿ: ರೂ. 15600-39100/-
ವಯೋಮಿತಿ: ಎಸ್‌ಓ/ಟಿಓ (ಡಿ): 35 ವರ್ಷ ದಾಟಿರಬಾರದು. ಎಸ್‌ಓ/ಟಿಓ (ಇ): 40 ವರ್ಷ ದಾಟಿರಬಾರದು. ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಓಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ.
ಅರ್ಜಿ ಸಲ್ಲಿಸಲು ವಿಳಾಸ: ಅಡ್ಮಿನಿಸ್ಟ್ರೇಟೀವ್ ಆಫೀಸರ್-111, ಆಟೋಮಿಕ್ ಎನರ್ಜಿ ರೆಗ್ಯೂಲೇಟರಿ ಬೋರ್ಡ್, ನಿಯಮಕ್ ಭವನ್, ಅನುಶಕ್ತಿ ನಗರ್, ಮುಂಬೈ-400094
ಹೆಚ್ಚಿನ ಮಾಹಿತಿಗೆ http://www.aerb.gov.in/ ವೆಬ್‌ಸೈಟ್ ಸಂಪರ್ಕಿಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT