ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ಯೋಗಾವಕಾಶ ಅಲ್ಲಲ್ಲಿ

Last Updated 2 ಡಿಸೆಂಬರ್ 2012, 20:54 IST
ಅಕ್ಷರ ಗಾತ್ರ

ಸೆಂಟ್ರಲ್ ರೈಲ್ವೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಕರ್ನಾಟಕ ಲೋಕಸೇವಾ ಆಯೋಗ, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯ

ಸೆಂಟ್ರಲ್ ರೈಲ್ವೆ
2572 `ಡಿ' ಗುಂಪಿನ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನು 7-1-2013ರವರೆಗೆ ವಿಸ್ತರಿಸಲಾಗಿದೆ. 
ಹುದ್ದೆ ವಿವರ: ಟ್ರ್ಯಾಕ್‌ಮನ್ ಹಮಾಲ್, ಖಾಲಾಸಿಸ್, ಸಫಾಯಿ     ವಾಲಾಸ್, ಅಸಿಸ್ಟೆಂಟ್ ಪಾಯಿಂಟ್ಸ್‌ಮನ್ ಇತ್ಯಾದಿ
ವೇತನ ಶ್ರೇಣಿ: ರೂ 5,200- 20,200.

ವಯೋಮಿತಿ: ಕನಿಷ್ಠ 18. ಗರಿಷ್ಠ 33. ಎಸ್.ಸಿ, ಎಸ್.ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ.
ವಿದ್ಯಾರ್ಹತೆ: 10ನೇ ತರಗತಿ ಉತ್ತೀರ್ಣ ಅಥವಾ ಐಟಿಐ
ಅರ್ಜಿ ಶುಲ್ಕ: ರೂ 40

ಆಯ್ಕೆ ವಿಧಾನ: ಲಿಖಿತ ಪರೀಕ್ಷೆ
ವಿಳಾಸ: ದಿ ಸೀನಿಯರ್ ಪರ್ಸನಲ್ ಆಫೀಸರ್ (ರೆಕ್ರೂಟ್‌ಮೆಂಟ್), ರೈಲ್ವೆ ರೆಕ್ರೂಟ್‌ಮೆಂಟ್ ಸೆಲ್, ಸೆಂಟ್ರಲ್ ರೈಲ್ವೆ, ಚೀಫ್ ಪ್ರೊಜೆಕ್ಟ್ ಮ್ಯಾನೇಜರ್ ಆಫೀಸ್ ಬಿಲ್ಡಿಂಗ್, ಮೊದಲ ಮಹಡಿ, ಪಿ.ಡಿ.ಮೆಲ್ಲೊ ರಸ್ತೆ, ವಾಡಿ ಬಂದರ್, ಮುಂಬೈ- 400 010
ಮಾಹಿತಿಗೆ  http://www.rrccr.com


ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ

1750 ಹುದ್ದೆಗಳನ್ನು ಭರ್ತಿ ಮಾಡಲು ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ಅರ್ಜಿ ಆಹ್ವಾನಿಸಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 7-12-2012. 

ಹುದ್ದೆ ಹೆಸರು: ದ್ವಿತೀಯ ದರ್ಜೆ ಲೆಕ್ಕ ಸಹಾಯಕರು
ಹುದ್ದೆ ವಿವರ: ಬೆಂಗಳೂರು- 34 ಹುದ್ದೆ, ಬೆಂಗಳೂರು ಗ್ರಾಮಾಂತರ- 36, ಬಾಗಲಕೋಟೆ- 49, ಬೆಳಗಾವಿ- 145, ಬಳ್ಳಾರಿ- 56, ಬೀದರ್- 48, ವಿಜಾಪುರ- 71, ಚಿಕ್ಕಮಗಳೂರು- 63, ಚಿತ್ರದುರ್ಗ- 70, ಚಾಮರಾಜನಗರ- 48, ದಕ್ಷಿಣ ಕನ್ನಡ- 59, ದಾವಣಗೆರೆ- 49, ಧಾರವಾಡ- 27, ಗದಗ- 33, ಗುಲ್ಬರ್ಗ- 69, ಹಾಸನ- 60,  ಹಾವೇರಿ- 58, ಕೊಡಗು- 26, ಕೋಲಾರ- 40, ಕೊಪ್ಪಳ- 41, ಮೈಸೂರು-104, ಮಂಡ್ಯ- 88, ರಾಯಚೂರು- 60, ಶಿವಮೊಗ್ಗ- 73, ತುಮಕೂರು-120, ಉತ್ತರ ಕನ್ನಡ- 57, ಉಡುಪಿ- 48, ರಾಮನಗರ- 51, ಚಿಕ್ಕಬಳ್ಳಾಪುರ- 36, ಯಾದಗಿರಿ- 31
ವೇತನ ಶ್ರೇಣಿ: ರೂ 11,600- 21,000
ವಯೋಮಿತಿ: ಕನಿಷ್ಠ 18. ಗರಿಷ್ಠ 35. ಎಸ್.ಸಿ, ಎಸ್.ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ.

ವಿದ್ಯಾರ್ಹತೆ: ಪಿಯುಸಿ ಅಥವಾ 10+2 ಪರೀಕ್ಷೆಯಲ್ಲಿ ತೇರ್ಗಡೆಯಾಗಿರಬೇಕು.
ಅರ್ಜಿ ಶುಲ್ಕ: ರೂ 300. ಎಸ್.ಸಿ/ ಎಸ್.ಟಿ: ರೂ 25
* ಸಿಂಡಿಕೇಟ್ ಬ್ಯಾಂಕ್‌ನಲ್ಲಿ ಶುಲ್ಕ ಸಂದಾಯ ಮಾಡಲು ಕೊನೆಯ ದಿನಾಂಕ: 8-12-2012
ಆಯ್ಕೆ ವಿಧಾನ: ಲಿಖಿತ ಪರೀಕ್ಷೆ ಹಾಗೂ ಸಂದರ್ಶನ
ಮಾಹಿತಿಗೆ www.kpsc.kar.nic.in

ಕರ್ನಾಟಕ ಲೋಕಸೇವಾ ಆಯೋಗ
ಕೆಪಿಎಸ್‌ಸಿಯು ಗುಂಪು `ಎ' ಮತ್ತು ಗುಂಪು `ಬಿ' ತಾಂತ್ರಿಕ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 26-12-2012. 

ಹುದ್ದೆ ವಿವರ: ಗುಂಪು ಎ ಮತ್ತು ಗುಂಪು ಬಿ ತಾಂತ್ರಿಕ ಹುದ್ದೆಗಳು
ಗುಂಪು ಎ: 1) ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಸಹಾಯಕ ನಿರ್ದೇಶಕರು-18 ಹುದ್ದೆ, 2) ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಅಸಿಸ್ಟೆಂಟ್ ಸರ್ಜನ್ಸ್- 42+3 (ಬ್ಯಾಕ್ ಲಾಗ್), 3) ಸಾರಿಗೆ ಇಲಾಖೆಯಲ್ಲಿನ ಪ್ರಾದೇಶಿಕ ಸಾರಿಗೆ   ಅಧಿಕಾರಿಗಳು- 9 ಹುದ್ದೆ.

ಗುಂಪು ಬಿ: 4) ಲೋಕೋಪಯೋಗಿ ಇಲಾಖೆಯಲ್ಲಿನ ಸಹಾಯಕ ಅಭಿಯಂತರರು (ಸಿವಿಲ್)-100 ಹುದ್ದೆ, 5) ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯಲ್ಲಿನ ಸಹಾಯಕ ಎಂಜಿನಿಯರ್ (ಸಿವಿಲ್)-7 ಹುದ್ದೆ,  6) ಕೃಷಿ ಮಾರಾಟ ಇಲಾಖೆಯಲ್ಲಿನ ಸಹಾಯಕ ಅಭಿಯಂತರರು- 4 (ಬ್ಯಾಕ್ ಲಾಗ್), 7) ಜಲ ಸಂಪನ್ಮೂಲ ಇಲಾಖೆಯಲ್ಲಿನ ಸಹಾಯಕ ಅಭಿಯಂತರರು (ಸಿವಿಲ್)- 180 ಹುದ್ದೆ, 8) ಜಲ ಸಂಪನ್ಮೂಲ ಇಲಾಖೆಯಲ್ಲಿನ ಸಹಾಯಕ ಅಭಿಯಂತರರು               (ಮೆಕ್ಯಾನಿಕಲ್)- 20 ಹುದ್ದೆ, 9) ಕರ್ನಾಟಕ ರಾಜ್ಯ ಪತ್ರಾಗಾರ ನಿರ್ದೇಶನಾಲಯದಲ್ಲಿನ ಸಹಾಯಕ ಪತ್ರಪಾಲಕರು-5 ಹುದ್ದೆ, 10) ವಾಸ್ತುಶಿಲ್ಪಿ ಇಲಾಖೆಯಲ್ಲಿನ ಸಹಾಯಕ ವಾಸ್ತುಶಿಲ್ಪಿ- 4 ಹುದ್ದೆ, 11) ತೋಟಗಾರಿಕೆ ಇಲಾಖೆಯಲ್ಲಿನ ಸಹಾಯಕ ತೋಟಗಾರಿಕೆ ಅಧಿಕಾರಿಗಳು (ಬ್ಯಾಕ್ ಲಾಗ್)- 104 ಹುದ್ದೆ. ವಿಶೇಷ ಹ್ದ್ದುದೆಗಳು ಗುಂಪು ಎ, ಬಿ (ಬ್ಯಾಕ್‌ಲಾಗ್): 7 ಹುದ್ದೆ.

ಅರ್ಜಿ ಶುಲ್ಕ: ರೂ 300. ಎಸ್‌ಸಿ/ಎಸ್‌ಟಿ: ರೂ 25
* ಸಿಂಡಿಕೇಟ್ ಬ್ಯಾಂಕ್‌ನಲ್ಲಿ ಶುಲ್ಕ ಸಂದಾಯ ಮಾಡಲು ಕೊನೆಯ ದಿನಾಂಕ: 27-12-2012
ಮಾಹಿತಿಗೆ www.kpsc.kar.nic.in

ಸ್ಟೇಟ್ ಬ್ಯಾಂಕ್ ಆಫ್ ಮೈಸೂರು
ಎಸ್‌ಬಿಎಂನಲ್ಲಿ ಕ್ಲರ್ಕ್ ಹುದ್ದೆಗಳನ್ನು (ಕ್ರೀಡಾಪಟುಗಳಿಗೆ) ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 31-12-2012. 
ಹುದ್ದೆ ವಿವರ: ಕ್ಲರ್ಕ್ (ಕ್ರಿಕೆಟ್ ಹಾಗೂ ಕಬಡ್ಡಿ ಪುರುಷ ಕ್ರೀಡಾಪಟುಗಳಿಗೆ ಮಾತ್ರ)
ವಯೋಮಿತಿ: ಕನಿಷ್ಠ 18 ವರ್ಷ, ಗರಿಷ್ಠ 26 ವರ್ಷ. 

ವಿದ್ಯಾರ್ಹತೆ: 12ನೇ ತರಗತಿ ಉತ್ತೀರ್ಣ (10+2). ಕ್ರಿಕೆಟ್ ಹಾಗೂ ಕಬಡ್ಡಿಯಲ್ಲಿ ರಾಜ್ಯ ಅಥವಾ ರಾಷ್ಟ್ರವನ್ನು ಪ್ರತಿನಿಧಿಸಿರಬೇಕು.
ವಿಳಾಸ: ಚೀಫ್ ಮ್ಯಾನೇಜರ್ (ಪರ್ಸನಲ್), ಪರ್ಸನಲ್ ಡಿಪಾರ್ಟ್‌ಮೆಂಟ್, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಹೆಡ್ ಆಫೀಸ್, ಬೆಂಗಳೂರು-560254
ಮಾಹಿತಿಗೆ http://statebankofmysore.co.in

ಜವಾಹರಲಾಲ್ ನೆಹರೂ ವಿ.ವಿ
ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ (ಜೆಎನ್‌ಯು) 162 ಬೋಧಕ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 17-12-2012. 

ಹುದ್ದೆ ವಿವರ: 1) ಪ್ರೊಫೆಸರ್: 62 ಹುದ್ದೆ, ವೇತನ ಶ್ರೇಣಿ: ರೂ 37,400- 67,000. 2) ಅಸೊಸಿಯೇಟ್ ಪ್ರೊಫೆಸರ್: 92 ಹುದ್ದೆ, ವೇತನ ಶ್ರೇಣಿ: ರೂ 37,400- 67,000. 3) ಅಸಿಸ್ಟೆಂಟ್ ಪ್ರೊಫೆಸರ್- 8 ಹುದ್ದೆ, ವೇತನ ಶ್ರೇಣಿ: ರೂ 15,600- 39,100.

ಅರ್ಜಿ ಶುಲ್ಕ: ರೂ 500
ವಿಳಾಸ: ವೈಸ್ ಚಾನ್ಸಲರ್, ಜೆಎನ್‌ಯು, ನವದೆಹಲಿ-110067
ವಿದ್ಯಾರ್ಹತೆ ಹಾಗೂ ಇತರ ಮಾಹಿತಿಗೆ http://www.jnu.ac.in-

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT