ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ಯೋಗಾವಕಾಶ...ಅಲ್ಲಲ್ಲಿ

Last Updated 4 ಆಗಸ್ಟ್ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ, ಏರೊನಾಟಿಕಲ್ ಡೆವಲಪ್‌ಮೆಂಟ್ ಏಜೆನ್ಸಿ, ಇಂಡೊ ಟಿಬೆಟನ್ ಬಾರ್ಡರ್ ಪೊಲೀಸ್ ಫೋರ್ಸ್, ಸೇನಾಪಡೆ, ಪಶ್ಚಿಮ ರೈಲ್ವೆ

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ
ಬಿ.ಎಂ.ಟಿ.ಸಿ.ಯಲ್ಲಿ 500 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 17-8-2013.
ಹುದ್ದೆ ವಿವರ: 1) ನಿರ್ವಾಹಕರು (ದರ್ಜೆ-3): 333 ಹುದ್ದೆ.
ವಿದ್ಯಾಭ್ಯಾಸ: ಪಿಯುಸಿ ಅಥವಾ ತತ್ಸಮಾನ ಹಾಗೂ ನಿರ್ವಾಹಕ ಪರವಾನಗಿ

2) ನಿರ್ವಾಹಕರು (ದರ್ಜೆ-3): 167 ಹುದ್ದೆ.
ವಿದ್ಯಾರ್ಹತೆ: ಜೆ.ಒ.ಸಿ ಹಾಗೂ ನಿರ್ವಾಹಕ ಪರವಾನಗಿ
ವೇತನ ಶ್ರೇಣಿ: ರೂ 10,340- 14,400 (ತರಬೇತಿ ಅವಧಿಯಲ್ಲಿ ಭತ್ಯೆ ರೂ 6,000+500)
ವಯೋಮಿತಿ: ಕನಿಷ್ಠ 18 ವರ್ಷ, ಗರಿಷ್ಠ 35 ವರ್ಷ. ಎಸ್.ಸಿ., ಎಸ್.ಟಿ. ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ.

* ದೇಹದಾರ್ಢ್ಯತೆ: ಪುರುಷರು: 160 ಸೆ.ಮೀ. ಎತ್ತರ, ಮಹಿಳೆಯರು: 150 ಸೆ.ಮೀ. ಎತ್ತರ.
ಅರ್ಜಿ ಶುಲ್ಕ: ರೂ 300 (ಅರ್ಜಿ ಶುಲ್ಕವನ್ನು ಎಸ್.ಬಿ.ಎಂ. ಬ್ರಾಂಚ್‌ಗಳಲ್ಲಿ 21-8-2013ರೊಳಗೆ ಪಾವತಿಸಬೇಕು)
ಹೆಚ್ಚಿನ ಮಾಹಿತಿಗೆ http://www.bmtccareers.com/

ಏರೊನಾಟಿಕಲ್ ಡೆವಲಪ್‌ಮೆಂಟ್ ಏಜೆನ್ಸಿ
ಎ.ಡಿ.ಎ.ಯಲ್ಲಿ 43 ಹುದ್ದೆಗಳನ್ನು (ಗುತ್ತಿಗೆ ಆಧಾರದ ಮೇಲೆ) ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 31-8-2013.
ಹುದ್ದೆ ವಿವರ: 1) ಪ್ರಾಜೆಕ್ಟ್ ಎಂಜಿನಿಯರ್-1: ಹುದ್ದೆ-25. ವೇತನ: ರೂ 50,000
2) ಪ್ರಾಜೆಕ್ಟ್ ಎಂಜಿನಿಯರ್-11: ಹುದ್ದೆ: 13. ವೇತನ: ರೂ 60,000
3) ಪ್ರಾಜೆಕ್ಟ್ ಎಂಜಿನಿಯರ್-111: ಹುದ್ದೆ: 5. ವೇತನ: ರೂ 70,000
ವಿದ್ಯಾರ್ಹತೆ: ಮೊದಲ ದರ್ಜೆಯಲ್ಲಿ ಎಂಜಿನಿಯರಿಂಗ್‌ನಲ್ಲಿ ಪದವಿ (ಎಂಇ/ ಎಂ.ಟೆಕ್/ ಎ.ಎಸ್- ಎಂಜಿನಿಯರಿಂಗ್) (ಎಂಜಿನಿಯರಿಂಗ್‌ನಲ್ಲಿ ಪಿಎಚ್.ಡಿ.)
ವಯೋಮಿತಿ: 65 ವರ್ಷ ದಾಟಿರಬಾರದು.
ಹೆಚ್ಚಿನ ಮಾಹಿತಿಗೆ ಠhttp://www.ada.gov.in

ಇಂಡೊ ಟಿಬೆಟನ್ ಬಾರ್ಡರ್ ಪೊಲೀಸ್ ಫೋರ್ಸ್
ಐ.ಟಿ.ಬಿ.ಪಿ.ಯಲ್ಲಿ 53 ಹುದ್ದೆಗಳಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 30-8-2013.
ಹುದ್ದೆ ವಿವರ: 1) ಸಬ್ ಇನ್‌ಸ್ಪೆಕ್ಟರ್ (ಸ್ಟಾಫ್ ನರ್ಸ್)-12 ಹುದ್ದೆ, ವೇತನ ಶ್ರೇಣಿ: ರೂ 9,300- 34,800. ವಯೋಮಿತಿ: ಕನಿಷ್ಠ 21 ವರ್ಷ, ಗರಿಷ್ಠ 30 ವರ್ಷ. 2) ಅಸಿಸ್ಟೆಂಟ್ ಸಬ್ ಇನ್‌ಸ್ಪೆಕ್ಟರ್ (ಫಾರ್ಮಸಿಸ್ಟ್)- 18 ಹುದ್ದೆ, 3) ಅಸಿಸ್ಟೆಂಟ್ ಸಬ್ ಇನ್‌ಸ್ಪೆಕ್ಟರ್ (ಲ್ಯಾಬ್ ಟೆಕ್ನೀಷಿಯನ್ಸ್)- 8 ಹುದ್ದೆ, 4) ಅಸಿಸ್ಟೆಂಟ್ ಸಬ್ ಇನ್‌ಸ್ಪೆಕ್ಟರ್ (ರೇಡಿಯೊಗ್ರಾಫರ್)- 4 ಹುದ್ದೆ, ವಯೋಮಿತಿ: ಕನಿಷ್ಠ 20 ವರ್ಷ, ಗರಿಷ್ಠ 28 ವರ್ಷ. 5) ಹೆಡ್ ಕಾನ್‌ಸ್ಟೆಬಲ್ (ಮಿಡ್‌ವೈಫ್)- 11 ಹುದ್ದೆ. ವೇತನ ಶ್ರೇಣಿ: ರೂ 5,200- 20,200. ವಯೋಮಿತಿ: ಕನಿಷ್ಠ 18 ವರ್ಷ, ಗರಿಷ್ಠ 25 ವರ್ಷ. ಅರ್ಜಿ ಶುಲ್ಕ: ರೂ 50

ವಿಳಾಸ: ಡೆಪ್ಯುಟಿ ಇನ್‌ಸ್ಪೆಕ್ಟರ್ ಜನರಲ್ (ಮೆಡಿಕಲ್), ಕಾಂಪೊಸಿಟ್ ಹಾಸ್ಪಿಟಲ್, ಚಂಡೀಗಡ, ಐಟಿಬಿಪಿಎಫ್, ಎಂಎಚ್‌ಎ/ ಭಾರತ ಸರ್ಕಾರ, ಸೀಮಾ ನಗರ ಪೋಸ್ಟ್ (ವಿಮಾನ ನಿಲ್ದಾಣ ಸಮೀಪ)- 160 003.

5ನೇ ಹುದ್ದೆಗೆ ವಿಳಾಸ: ಕಮಾಂಡೆಂಟ್ ಬೇಸ್ ಹಾಸ್ಪಿಟಲ್, ಐಟಿಬಿಪಿಎಫ್, ನವದೆಹಲಿ, ಎಂಎಚ್‌ಎ/ ಭಾರತ ಸರ್ಕಾರ, ಮದನ್‌ಗಿರ್ ಟಿಗ್ರಿ ಕ್ಯಾಂಪ್, ನವದೆಹಲಿ- 110 062. ಇತರ ಮಾಹಿತಿಗೆ http://itbpolice.nic.in

ಸೇನಾಪಡೆ
ಸೇನಾಪಡೆಯಲ್ಲಿ 60 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 28-10-2013.
ಹುದ್ದೆ ವಿವರ: ಪರ್ಮನೆಂಟ್ ಕಮಿಷನ್ (24ನೇ ಯೂನಿವರ್ಸಿಟಿ ಎಂಟ್ರಿ ಸ್ಕೀಮ್)
ವೇತನ ಶ್ರೇಣಿ: ರೂ 15,600- 39,100
ವಿದ್ಯಾಭ್ಯಾಸ: ಎಂಜಿನಿಯರಿಂಗ್ ಪದವಿ
ವಯೋಮಿತಿ: ಕನಿಷ್ಠ 18 ವರ್ಷ, ಗರಿಷ್ಠ 25 ವರ್ಷ.
ವಿಳಾಸ: ಹೆಡ್‌ಕ್ವಾರ್ಟರ್ ಸದರ್ನ್ ಕಮಾಂಡ್ (ಎ ಬ್ರಾಂಚ್), ಪುಣೆ (ಮಹಾರಾಷ್ಟ್ರ)-411 001. ಹೆಚ್ಚಿನ ಮಾಹಿತಿಗೆ www.indianarmy.nic.in

ಸೇನಾಪಡೆ-2
ಸೇನಾಪಡೆಯಲ್ಲಿ 71 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 16-8-2013.

ಹುದ್ದೆ ವಿವರ: 1) 42ನೇ ಎಸ್.ಎಸ್.ಸಿ. (ಟೆಕ್ನಿಕಲ್) ಪುರುಷರಿಗೆ- 50 ಹುದ್ದೆ. 2) 13ನೇ ಎಸ್.ಎಸ್.ಸಿ. (ಟೆಕ್ನಿಕಲ್) ವಿಮೆನ್: 19 ಹುದ್ದೆ.
ವಯೋಮಿತಿ: ಕನಿಷ್ಠ 20 ವರ್ಷ, ಗರಿಷ್ಠ 27 ವರ್ಷ. 3) ರಕ್ಷಣಾ ಸಿಬ್ಬಂದಿಯ ವಿಧವೆಯರು: 2 ಹುದ್ದೆ. ವಯೋಮಿತಿ: ಕನಿಷ್ಠ 19-20/20- 31 ವರ್ಷ. ವೇತನ ಶ್ರೇಣಿ: ರೂ 15,600- 39,100. ಹೆಚ್ಚಿನ ಮಾಹಿತಿಗೆ www.indianarmy.nic.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT