ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಪ ಕಾನ್ಸಲ್‌ ಜತೆ ಅನುಚಿತ ವರ್ತನೆ: ಸ್ಪೀಕರ್‌ ಪ್ರತಿಭಟನೆ

Last Updated 16 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಭಾರತದ ಉಪ ಕಾನ್ಸಲ್‌ ಜನರಲ್‌  ಜತೆ ಅನುಚಿತ­ವಾಗಿ ವರ್ತಿಸಿದ್ದರ ಪ್ರತಿಭ­ಟನಾ ಸೂಚಕ­ವಾಗಿ ಲೋಕಸಭೆ ಸ್ಪೀಕರ್‌ ಮೀರಾ ಕುಮಾರ್ ಅವರು ಅಮೆರಿಕ ಸಂಸದರ ನಿಯೋಗ­ದೊಂದಿಗಿನ ಸಭೆಯನ್ನು ಸೋಮವಾರ ರದ್ದುಪಡಿಸಿದ್ದಾರೆ.

ವೀಸಾ ವಂಚನೆ ಆರೋಪಕ್ಕೆ ಸಂಬಂಧಿ­ಸಿದಂತೆ ಅಮೆರಿಕದಲ್ಲಿನ ಭಾರತದ ಉಪ ಕಾನ್ಸಲ್‌ ಜನರಲ್‌ ದೇವಯಾನಿ ಖೋಬ್ರಾಗಡೆ ಅವ­ರನ್ನು ಬಂಧಿಸಿ ಕೈಕೊಳ ತೊಡಿಸಿ ಸಾರ್ವಜನಿಕವಾಗಿ ಅಪಮಾನ ಮಾಡಲಾಗಿತ್ತು.

‘ದೇವಯಾನಿ ಅವರನ್ನು ಅಮೆರಿಕ ಕೆಟ್ಟದಾಗಿ ನಡೆಸಿಕೊಂಡಿದ್ದು, ಆ ದೇಶದ ಸಂಸದರ ಜೊತೆ ಸಭೆ ನಡೆಸುವುದು ಸೂಕ್ತವಲ್ಲ ಎಂದು ರಾಜಕೀಯಕ್ಕೆ ಬರು­ವುದಕ್ಕೂ ಮುನ್ನ ಸ್ವತಃ ಐಎಫ್‌ಎಸ್‌ ಅಧಿಕಾರಿಯಾಗಿದ್ದ ಮೀರಾ ಕುಮಾರ್‌ ಭಾವಿಸಿ ಈ ನಿರ್ಧಾರ ತೆಗೆದುಕೊಂಡಿ­ದ್ದಾರೆ’ ಎಂದು ಮೂಲಗಳು ತಿಳಿಸಿವೆ.

ಇದೇ ಕಾರಣಕ್ಕಾಗಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಶಿವಶಂಕರ್‌ ಮೆನನ್‌ ಕೂಡ ಈಚೆಗೆ ಅಮೆರಿಕ ಸಂಸ­ದರ ಜೊತೆಗಿನ ಸಭೆ ರದ್ದು­ಪಡಿ­­ಸಿ­­ದ್ದರು. ಅಲ್ಲದೇ ಭಾರತದಲ್ಲಿನ ಅಮೆರಿಕ ರಾಯ­ಭಾರಿ ನ್ಯಾನ್ಸಿ ಪೊವೆಲ್‌ ಅವರ ಬಳಿಯೂ ಭಾರತ ಪ್ರತಿಭಟನೆ ದಾಖಲಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT