ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಪನಗರವಾಗಿ ಕನಕಪುರ ಸೇರ್ಪಡೆ

Last Updated 21 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಕನಕಪುರ: ಕೇಂದ್ರ ಸರ್ಕಾರದ ಸಮಗ್ರ ನಗರಾಭಿವೃದ್ಧಿಯ ಜವಹರಲಾಲ್ ನೆಹರು ಅರ್ಬನ್ ರಿನಿವಲ್ ಮಿಷನ್ “ನರಂ” ಯೋಜನೆಯಡಿ ರಾಷ್ಟ್ರದ ಐದು ನಗರಗಳ ಪಟ್ಟಿಯಲ್ಲಿ ರಾಜ್ಯದ ಕನಕಪುರ ಪಣ್ಣಣವೂ ಸ್ಯಾಟಲೈಟ್ ಟೌನಾಗಿ ಸೇರ್ಪಡೆಯಾಗಿದೆ ಎಂದು ಶಾಸಕ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.  

 ಸುದ್ದಿಗಾರರೊಂದಿಗೆ ಮಾತನಾಡಿದ ಅವರು  ಬೆಂಗಳೂರು ಮಹಾನಗರಕ್ಕೆ ಮೆಟ್ರೋ ರೈಲು ಸೇವಾ ಕೇಂದ್ರ ಚಾಲನೆ ನೀಡಿಲು ಆಗಮಿಸಿದ್ದ ಕೇಂದ್ರ ಸರ್ಕಾರದ ನಗರಾಭಿವೃದ್ಧಿ ಸಚಿವ ಕಮಲ್ ನಾಥ್ ರವರು ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ.

ನರಂ ಯೋಜನೆಯ ಮಹತ್ತರ ವಿಷಯದಲ್ಲಿ ಸಮಗ್ರ ಕಾವೇರಿ ಕುಡಿಯುವ ನೀರು ಪೂರೈಸಿದಂತೆ ಇನ್ನಿತರ ಅಭಿವೃದ್ದಿ ಯೋಜನೆಗಳನ್ನು ಕೈಗೊಂಡಾಗ ಕನಕಪುರ ಪಟ್ಟಣ ಮಾದರಿ ನಗರವಾಗುವುದು, ಇಂಥದೊಂದು ಯೋಜನೆ ಮಂಜೂರಾಗಿರುವುದರಿಂದ ಉಪನಗರಕ್ಕೆ  ಎಪ್ಪತ್ತರಿಂದ ತೊಂಭತ್ತು ಕೋಟಿ ಅನುದಾನ ಬಿಡುಗಡೆಯಾಗಲಿದೆ, ಇದರಲ್ಲಿ ಕೇಂದ್ರ ಸರ್ಕಾರ ಶೇಕಡ 70 ರಷ್ಟು ಹಣ ನೀಡುತ್ತದೆ.

ರಾಜ್ಯ ಸರ್ಕಾರ ಶೇ. 20 ರಷ್ಟು ಉಳಿದ 10 ಭಾಗವನ್ನು ಸ್ಥಳೀಯ ಸಂಸ್ಥೆಗಳು ಭರಿಸಿ ನಗರವನ್ನು ಅಭಿವೃದ್ಧಿಗೊಳಿಸಬೇಕು.

ಕನಕಪುರ ಭೂಪಟದಲ್ಲಿ ಅಭಿವೃದ್ಧಿಗೆ ದಾರಿ ನೀಡುವ ಮೂಲಕ ಸಹಕರಿಸಿದ ಕೇಂದ್ರ ಸರ್ಕಾರ ಹಾಗೂ ನಗರಾಭಿವೃದ್ಧಿ ಸಚಿವ ಕಮಲ್‌ನಾಥ್‌ರವರಿಗೆ ಡಿ.ಕೆ.ಶಿವಕುಮಾರ್  ಕೃತಜ್ಞತೆ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT