ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಉಪನ್ಯಾಸಕರ ಬೋಧನಾ ಕೌಶಲ ಕುಸಿತ'

ಗುಲ್ಬರ್ಗ ವಿ.ವಿ. ವಿಶೇಷಾಧಿಕಾರಿ ಡಾ.ಬಡಿಗೇರ ಕಳವಳ
Last Updated 3 ಆಗಸ್ಟ್ 2013, 6:40 IST
ಅಕ್ಷರ ಗಾತ್ರ

ಹಾವೇರಿ: `ಉಪನ್ಯಾಸಕರು ತಮಗೆ ಹೆಚ್ಚಾಗಿರುವ ಸಾರಿಗೆ ಸಂಬಳವನ್ನು ವೃತ್ತಿ ನೈಪುನ್ಯತೆ ಬೆಳಸಲು ಬಳಕೆ ಮಾಡಿ ಕೊಳ್ಳದೇ ಐಷಾರಾಮಿ ಜೀವನ ಹಾಗೂ ಬಂಡವಾಳ ಹೂಡಿಕೆಗೆ ಬಳಕೆ ಮಾಡಿಕೊಳ್ಳುವತ್ತ ಗಮನ ಹರಿಸಿರುವುದು ಅವರ ಬೋಧನಾ ಕೌಶಲ ಕುಸಿಯುವಂತೆ ಮಾಡಿದೆ' ಎಂದು ಗುಲ್ಬರ್ಗ ವಿ.ವಿ.ಯ ರಾಯಚೂರ ಸ್ನಾತಕೋತ್ತರ ಕೇಂದ್ರದ ವಿಶೇಷ ಅಧಿಕಾರಿ ಡಾ. ವಿ. ಆರ್.ಬಡಿಗೇರ ಅಭಿಪ್ರಾಯಪಟ್ಟರು.

ನಗರದ ಕೆ. ಎಲ್.ಇ ಸಂಸ್ಥೆಯ ಜಿ.ಎಚ್. ಮಹಾವಿದ್ಯಾಲಯದಲ್ಲಿ ಯು.ಜಿ.ಸಿ ಮತ್ತು ಕ.ವಿ.ವಿ. ಇಂಗ್ಲಿಷ್ ಅಧ್ಯಾಪಕರ ಶೈಕ್ಷಣಿಕ ವೇದಿಕೆ ಆಶ್ರಯದಲ್ಲಿ ಜಿ.ಎಚ್.ಕಾಲೇಜಿನ ಸಭಾಭವನದಲ್ಲಿ ಆಂಗ್ಲ ಭಾಷೆ ಮತ್ತು ಸಂವಹನಾ ಕೌಶಲ್ಯ ಕುರಿತು ನಡೆದ ರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದರು.

ಹಿಂದಿನ ಉಪನ್ಯಾಸಕರು ತಮ್ಮ ಸಂಬಳದಲ್ಲಿ ಅಧ್ಯಯನಕ್ಕಾಗಿಯೇ ಮನೆ ಯಲ್ಲೊಂದು ಪುಟ್ಟ ಗ್ರಂಥಾಲಯ ಮಾಡಿಕೊಳ್ಳುತ್ತಿದ್ದರು. ಆದರೆ, ಈಗಿನ ಉಪನ್ಯಾಸಕರು ಲಕ್ಷಾಂತರ ರೂಪಾಯಿ ಸಂಬಳ ಪಡೆದರೂ ಕಾರು, ಬಂಗ್ಲೆ, ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವತ್ತ ಗಮನ ಹರಿಸಿ ತಮ್ಮ ವೃತ್ತಿಯ ಮೌಲ್ಯವನ್ನು ಕಳೆದುಕೊಳ್ಳು ತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.

ಬಹುತೇಕ ವಿಶ್ವವಿದ್ಯಾಲಯಗಳ ಪ್ರಾಧ್ಯಾಪಕರು ಹಾಗೂ ಉಪಕುಲಪತಿ ಗಳು ಸಹ ಸ್ನಾತಕೋತ್ತರ ವಿದ್ಯಾರ್ಥಿ ಗಳು ಎರಡು ವರ್ಷಗಳ ಕಾಲ ಏನು ಅಧ್ಯಯನ ಮಾಡುತ್ತಾರೆ ಎಂಬುದರ ಬಗ್ಗೆ ಗಮನ ಹರಿಸುತ್ತಿಲ್ಲ. ಪರೀಕ್ಷೆಯಲ್ಲಿ ಅನುತ್ತೀರ್ಣರಾದರೂ ಉತ್ತೀರ್ಣ ಗೊಳಿಸಿ ಪದವಿ ನೀಡಿ ಕಳುಹಿಸುತ್ತಿದ್ದಾರೆ. ಇಂತಹ ಪದವಿಯೊಂದಿಗೆ ಹೊರ ಬರುವ ಅಭ್ಯರ್ಥಿಗಳಿಂದ ಮೌಲ್ಯಯುತ ಬೋಧನೆ ನಿರೀಕ್ಷಿಸಲು ಸಾಧ್ಯವೇ ಎಂದು ಪ್ರಶ್ನಿಸಿದರು.

ಹೆಚ್ಚಿನ ಅಧ್ಯಯನ ಇಲ್ಲದೇ ಬೋಧನೆ ಸತ್ವಕಳೆದುಕೊಳ್ಳುತ್ತಿದೆ. ಆಂಗ್ಲ ಭಾಷೆಯಂತಹ ವಿಷಯಗಳಿಗೆ ವಿಷಯ ವ್ಯಾಪ್ತಿ ಹೆಚ್ಚಿರುತ್ತದೆ. ಅದನ್ನು ಅರ್ಥ ಮಾಡಿಕೊಳ್ಳದಿದ್ದರೇ ಆ ಭಾಷೆ ಯ ಮೆರಗು ಕುಂದುವದರಲ್ಲಿ ಸಂಶಯ ವಿಲ್ಲ ಎಂದ ಅವರು, ಆಂಗ್ಲ ಭಾಷಾ ಪ್ರಯೋಗಾಲಯಗಳನ್ನು ಆರಂಭಿಸುವಾ ಗಿನ ಉತ್ಸಾಹ ಕೊನೆ ಕೊನೆಗೆ ಕಳೆಗುಂದುತ್ತಿವೆ. ಅದು ಭಾಷಾ ಬೆಳವಣಿಗೆಗೆ ಅಡ್ಡಪರಿಣಾಮ ಉಂಟು ಮಾಡುತ್ತಿವೆ ಎಂದರು.

ಬೆಳಗಾವಿ ರಾಣಿ ಚೆನ್ನಮ್ಮ ವಿಶ್ವವಿದ್ಯಾ ಲಯದ ಕುಲಪತಿ ಪ್ರೊ.ಬಿ.ಆರ್. ಅನಂತನ್ ಮಾತನಾಡಿ, ಬೆಳೆಯುವ ಯುವ ಜನಾಂಗಕ್ಕೆ ಆಂಗ್ಲ ಭಾಷಾ ಜ್ಞಾನದ ಅವಶ್ಯಕತೆ ಇದ್ದು, ಆಂಗ್ಲ ಸಾಹಿತ್ಯಕ್ಕಿಂತ ಸಂವಹನ ಕ್ರಿಯೆಗೆ ಮಹತ್ವ ನೀಡುವ ಅನಿವಾರ್ಯತೆ ಇಂದು ಬಹಳಷ್ಟಿದೆ ಎಂದರು.

ಪ್ರತಿಯೊಬ್ಬರೂ ಆಂಗ್ಲ ಭಾಷೆಯ ಮೇಲೆ ಪ್ರಭುತ್ವ ಸಾಧಿಸಿದಾಗ ಜೀವನ ಬೆಳಗುವುದರಲ್ಲಿ ಯಾವುದೇ ಅನುಮಾನ ಗಳಿಲ್ಲ. ಸದ್ಯದ ಬೆಳವಣಿಗೆಯನ್ನು ಅವ ಲೋಕಿಸಿ ನೋಡಿದಾಗ ವ್ಯವಹಾರಿಕ ವಾಗಿ ಆಂಗ್ಲ ಭಾಷೆಯ ಅರಿವು ಎಲ್ಲರಲ್ಲೂ ಮೂಡಿಬರಬೇಕಿದೆ ಎಂದು ಹೇಳಿದರು.

ಯಾವುದೇ ಒಂದು ಭಾಷೆ ಜೀವಂತವಾಗಿರಲು ಹಾಗೂ ಸದಾಕಾಲ ಬೆಳವಣಿಗೆ ಹೊಂದಲು ಸಂವಹನ ಮುಖ್ಯ. ಬೇರೆ ಭಾಷೆಗಳ ಶಬ್ದಗಳನ್ನು ಬಳಸಲು ಮಡಿವಂತಿಕೆ ಮಾಡಬಾರದು. ಹಾಗೆ ಮಾಡಿದರೆ, ಭಾಷೆ ತನ್ನ ಅಸ್ತಿತ್ವ ಕಳೆದುಕೊಳ್ಳುವುದರಲ್ಲಿ ಅನುಮಾನ ವಿಲ್ಲ. ಕೆಲ ಶತಮಾನಗಳ ಹಿಂದೆಯಷ್ಟೇ ಹುಟ್ಟಿದ ಇಂಗ್ಲಿಷ್ ಇಂದು ಜಾಗತಿಕ ಭಾಷೆ ಆಗಿದೆ ಎಂದರೆ, ಅನ್ಯ ಭಾಷೆಗಳ ಶಬ್ದಗಳನ್ನು ಬಳಸುವಲ್ಲಿ ಮಡಿವಂತಿಕೆ ಮಾಡದಿರುವುದು ಪ್ರಮುಖ ಕಾರಣ ಎಂದರು.

ಅಧ್ಯಕ್ಷತೆಯನ್ನು ಕೆಎಲ್‌ಇ ಸಂಸ್ಥೆಯ ಸದಸ್ಯ ಎಸ್.ಸಿ. ಮೆಟಗುಡ್ಡ ವಹಿ ಸಿದ್ದರು. ಬೆಳಗಾವಿ ರಾಣಿ ಚನ್ನಮ್ಮ ವಿವಿ ಭಾಷಾತಜ್ಞರ ಮುಖ್ಯಸ್ಥ ಡಾ. ಎಂ.ಜಿ. ಹೆಗಡೆ, ಕ.ವಿ.ವಿಯ ಇಂಗ್ಲಿಷ್ ವಿಭಾ ಗದ ಶಾಮಲಾ ರತ್ನಾಕರ, ಕೆ.ಎಲ್.ಇ ನಿಕಟಪೂರ್ವ ನಿರ್ದೇಶಕ ಎಂ.ಸಿ.ಕೊಳ್ಳಿ, ಸ್ಥಾನಿಕ ಆಡಳಿತ ಮಂಡಳಿಯ ಅಧ್ಯಕ್ಷ ಪಿ.ಡಿ.ಶಿರೂರ, ಆಂಗ್ಲ ಭಾಷಾ ವಿಭಾ ಗದ ಮುಖ್ಯಸ್ಥ ಡಾ. ಎಂ.ವೈ.ಮೋಳೇ ಕರ, ಡಾ.ಗುರುನಾಥ ಬಡಿಗೇರ, ಪ್ರೊ. ಎನ್.ವಿ.ಕುಂಬಾಳಿಮಠ,ಡಾ.ಎಸ್.ಎಸ್.ಹಲಗೇರಿ ಮತ್ತಿತರರು ಹಾಜರಿದ್ದರು.

ವರ್ಷಾ ಪಾಟೀಲ ಹಾಗೂ ಸಂಗಡಿ ಗರು ಪ್ರಾರ್ಥಿಸಿದರು. ಪ್ರಾಚಾರ್ಯ ಡಾ.ಬಿ.ಸಿ.ಬನ್ನೂರ ಸ್ವಾಗತಿಸಿದರು.

ಪ್ರೊ.ಆರ್.ಐ.ಇನಾಮದಾರ ನಿರೂಪಿಸಿ ದರು. ಪ್ರೊ.ಎನ್.ಕೆಂಚವೀರಪ್ಪ ವಂದಿಸಿ ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT