ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಪವಾಸ ಕೈಬಿಡಲು ರಾಮ್‌ದೇವಜಿಗೆ ಮನವಿ

Last Updated 9 ಜೂನ್ 2011, 7:00 IST
ಅಕ್ಷರ ಗಾತ್ರ

ಯಾದಗಿರಿ: ದೇಶದಲ್ಲಿನ ಭ್ರಷ್ಟಾಚಾರದ ಹರಿದ್ವಾರದಲ್ಲಿ ಬಾಬಾ ರಾಮದೇವಜಿ ನಡೆಸುತ್ತಿರುವ ಉಪವಾಸ ಸತ್ಯಾಗ್ರಹವನ್ನು ಕೈಬಿಡುವಂತೆ ಅಖಿಲ ಭಾರತ ಯೋಗೀಶ್ವರ ಯಾಜ್ಞವಲ್ಕ್ಯ ಸಮಿತಿ ಅಧ್ಯಕ್ಷರು, ಹುಣಸಿಹೊಳಿ ಕಣ್ವ ಮಠದ ಪೀಠಾಧಿಪತಿ ವಿದ್ಯಾಭಾಸ್ಕರ ತೀರ್ಥ ಸ್ವಾಮೀಜಿ ಮನವಿ ಮಾಡಿದ್ದಾರೆ.

ಬಾಬಾ ರಾಮ್‌ದೇವಜಿ ಅವರ ಉಪವಾಸ ಸತ್ಯಾಗ್ರಹಕ್ಕೆ ತಮ್ಮ ಬೆಂಬಲವಿದ್ದು, ಆದರೆ ಈ ಉಪವಾಸ ಸತ್ಯಾಗ್ರಹಕ್ಕೆ ಮಾನ್ಯತೆ ನೀಡುವ ಸರ್ಕಾರಗಳು ಇಲ್ಲ. ಈ ಹಿನ್ನೆಲೆಯಲ್ಲಿ ಉಪವಾಸ ಸತ್ಯಾಗ್ರಹವನ್ನು ಹಿಂದಕ್ಕೆ ಪಡೆದು ಆರೋಗ್ಯ ಕಾಪಾಡಿಕೊಳ್ಳಬೇಕು. ಜೊತೆಗೆ ದೇಶದ ಪ್ರತಿಯೊಬ್ಬ ಪ್ರಜೆಯನ್ನು ಭ್ರಷ್ಟಾಚಾರದ ವಿರುದ್ಧದ ಹೋರಾಟಕ್ಕೆ ಪ್ರೋತ್ಸಾಹಿಸಬೇಕು ಎಂದು ತಿಳಿಸಿದ್ದಾರೆ.

ಭ್ರಷ್ಟಾಚಾರದಲ್ಲಿ ಮುಳುಗಿರುವ ರಾಜಕಾರಣಿಗಳು ಮಾನವೀಯತೆಯನ್ನು ಕಳೆದುಕೊಂಡಿದ್ದಾರೆ. ವಿದೇಶದಲ್ಲಿರುವ ಕಪ್ಪು ಹಣ ವಾಪಸ್ ತರುವುದು ಹಾಗೂ ದೇಶದಲ್ಲಿನ ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡುವಲ್ಲಿ ಬಾಬಾ ರಾಮದೇವಜಿ ಅವರ ನೇತೃತ್ವ ಅತ್ಯವಶ್ಯಕ. ಅದಕ್ಕಾಗಿ ಉಪವಾಸ ಸತ್ಯಾಗ್ರಹದಿಂದ ಆರೋಗ್ಯವನ್ನು ಕೆಡಿಸಿಕೊಳ್ಳುವ ಬದಲು ಹಂತ ಹಂತವಾಗಿ ಉಪವಾಸವನ್ನು ನಡೆಸಿಕೊಂಡು ಬರುವುದರ ಜೊತೆಗೆ ಜನರನ್ನು ಸಾಂಘಿಕವಾಗಿ ಬಳಕೆ ಮಾಡಿಕೊಂಡು ಬೇರು ಸಹಿತ ಕಿತ್ತು ಹಾಕಬೇಕು ಎಂದು ಹರಿದ್ವಾರಕ್ಕೆ ಕಳುಹಿಸಿರುವ ಫಾಕ್ಸ್ ಸಂದೇಶದಲ್ಲಿ ಸಲಹೆ ಮಾಡಿದ್ದಾರೆ.

ವಿದ್ಯಾ ಭಾಸ್ಕರ್ ಶ್ರೀಗಳ ಜೊತೆಗೆ ಪತಂಜಲಿ ಯೋಗ ಸಮಿತಿ ಜಿಲ್ಲಾ ಪ್ರಭಾರಿ ಅನಿಲ ಗುರೂಜಿ ಸಹ, ಉಪವಾಸ ಕೈಬಿಡುವಂತೆ ಬಾಬಾ ರಾಮ್‌ದೇವಜಿ ಅವರಲ್ಲಿ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT