ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಪೇಕ್ಷೆಗೊಳಗಾದ ಪ್ರಾಥಮಿಕ ಶಿಕ್ಷಣದಲ್ಲೂ ನಿರೀಕ್ಷೆ?

Last Updated 15 ಫೆಬ್ರುವರಿ 2016, 11:27 IST
ಅಕ್ಷರ ಗಾತ್ರ

ಪ್ರಾಥಮಿಕ ಶಿಕ್ಷಣದಲ್ಲಿ ಅವಶ್ಯಕ, ಗುರುತರ ಬದಲಾವಣೆ ಬಯಸಿ, ಸಿದ್ದರಾಮಯ್ಯನವರ ಸರ್ಕಾರದ ಬಗ್ಗೆ ಆಶಾವಾದ ಇಟ್ಟುಕೊಂಡು ಆರಂಭದಿಂದಲೂ  ನಿರಂತರವಾಗಿ ಮಾಡುತ್ತಾ ಬಂದ ಹಕ್ಕೊತ್ತಾಯಗಳು; ಜೊತೆಗೆ ಸರ್ಕಾರದಿಂದಾದ ಇವುಗಳ ಉಪೇಕ್ಷೆ ಮತ್ತು ಇನ್ನೂ ಉಳಿದಿರಬಹುದಾದ  ನಿರೀಕ್ಷೆಗಳು ಇಂತಿವೆ.

* ನಾಯಿಕೊಡೆಗಳಂತೆ ರಾಜ್ಯಾದ್ಯಂತ ಹುಟ್ಟಿಕೊಂಡಿರುವ ಅಂದಾಜು 5 ಸಾವಿರಕ್ಕೂ ಹೆಚ್ಚು ಅನಧಿಕೃತ ಖಾಸಗಿ ಶಾಲೆಗಳ ಮಟ್ಟುಗೋಲು.

* ಭಾಷಾ ನೀತಿಯ ವ್ಯತಿರಿಕ್ತ ತೀರ್ಪು ಬಂದ ತಕ್ಷಣ ಸರ್ಕಾರ ತುರ್ತಾಗಿ ಯೋಚಿಸಿ, ತೆಗೆದುಕೊಳ್ಳಬೇಕಿದ್ದ ಕ್ರಮಗಳು.

* ಮುಚ್ಚುವ ಹಂತ ತಲುಪುತ್ತಿರುವ ಸರ್ಕಾರಿ ಶಾಲೆಗಳನ್ನು ಬಲಪಡಿಸಲು ಬೇಕಾದ ಮೂಲಮಟ್ಟದ ರಚನಾತ್ಮಕ ಕಾರ್ಯಯೋಜನೆ.

* ಸರ್ಕಾರಿ ಶಾಲೆಗಳ ಕನಿಷ್ಠ ಮೂಲಭೂತ ಸೌಕರ್ಯಗಳ ಸುಧಾರಣೆ.

* ಶಿಕ್ಷಣ ಖಾಸಗೀಕರಣದ ವ್ಯಾಪಕತೆ ತಡೆಗೆ ಪ್ರಬಲ, ಸಮಗ್ರ ಶೈಕ್ಷಣಿಕ ನೀತಿ

* ಹೈಕೋರ್ಟ್ ತೀರ್ಪಿನಂತೆ, ಶಿಕ್ಷಣ ಹಕ್ಕು ಕಾಯ್ದೆಯನ್ವಯ ಕನಿಷ್ಠ ದೂರದಲ್ಲಿ ಅವಶ್ಯಕತೆ ಇರುವೆಡೆ ಸರ್ಕಾರಿ ಶಾಲೆಗಳ ನಿರ್ಮಾಣ ಮತ್ತು ಮಕ್ಕಳಿಲ್ಲ ಎಂದು ಶಾಲೆ ಮುಚ್ಚಿ ಹತ್ತಿರದ ಶಾಲೆಗೆ ರ್ಗಾವಣೆಗೊಂಡಿರುವ ಮಕ್ಕಳಿಗಾಗಿ ವಾಹನ ಸೌಲಭ್ಯ ಅಥವಾ ವಾಹನ ಭತ್ಯೆ.

* ಸರ್ಕಾರಿ ಸಾರ್ವಜನಿಕ ಸಮಾನ ಶಿಕ್ಷಣಕ್ಕೆ ಬುನಾದಿಯಾಗುವ 3–6 ವರ್ಷದ ಎಲ್ಲಾ ಮಕ್ಕಳ ಕಡ್ಡಾಯ, ಉಚಿತ, ಸಮಾನ ಮತ್ತು ಮಾತೃಭಾಷಾ ಶಿಕ್ಷಣದ ಜವಾಬ್ದಾರಿಯನ್ನು ಸರ್ಕಾರವೇ ತೆಗೆದುಕೊಳ್ಳುವ ದೃಢ ನಿರ್ಧಾರ.

* ಶಿಕ್ಷಣ ಹಕ್ಕು ಕಾಯ್ದೆಯನ್ವಯ ದುರ್ಬಲ ವರ್ಗದ ಮಕ್ಕಳಿಗೆ ಮೀಸಲಿರುವ ಶೇ 25 ಸೀಟುಗಳಿಗಾಗಿ ಆದಾಯ ಮಿತಿಯನ್ನು ಅತ್ಯಂತ ಕನಿಷ್ಠ ಮಟ್ಟಕ್ಕಿಳಿಸುವುದು.

* ಶಾಲೆಯಲ್ಲಿ ಮಕ್ಕಳ ಸುರಕ್ಷತೆಗಾಗಿ ಅಂಗೀಕರಿಸಿದ ನಿಯಮಗಳನ್ನು ತಕ್ಷಣದಲ್ಲಿ ಕಡ್ಡಾಯವಾಗಿ ಜಾರಿಗೊಳಿಸುವುದು.

* ಶಾಲೆಯಿಂದ ಹೊರಗಿರುವ ಮಕ್ಕಳನ್ನು ಒಳ ತರಲು, ಮಕ್ಕಳ ಸಂಬಂಧಿತ ಇಲಾಖೆಗಳು ಹೊಂದಾಣಿಕೆಯಿಂದ ಕೆಲಸ ಮಾಡಲು ಆಡಳಿತಾತ್ಮಕ ತಯಾರಿ.

* ಕೇಂದ್ರ ಸರ್ಕಾರ ತರಲು ಯೋಚಿಸುತ್ತಿರುವ ರಾಷ್ಟ್ರೀಯ ಶಿಕ್ಷಣ ನೀತಿಯ ವ್ಯಾಪಕ ಚರ್ಚೆ ಮತ್ತು ಆಕ್ಷೇಪಣೆ ಸಲ್ಲಿಕೆ.

* ಗ್ರಾಮೀಣ ಹೆಣ್ಣುಮಕ್ಕಳಿಗಾಗಿ ತುರ್ತಾಗಿ ವಸತಿ ಶಾಲೆಗಳನ್ನು ಪ್ರಾರಂಭಿಸುವುದು.

ಇವು ಸರ್ಕಾರದ ಉಳಿದಿರುವ ಇನ್ನು ಮುಂದಿನ ಅವಧಿಯಲ್ಲಾದರೂ ಕಾರ್ಯಗತವಾಗಬಹುದೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT