ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಬ್ರಾಣಿ ಅಮೃತಾಪುರ ಏತ ನೀರಾವರಿ ಯೋಜನೆ....

Last Updated 16 ಸೆಪ್ಟೆಂಬರ್ 2011, 8:30 IST
ಅಕ್ಷರ ಗಾತ್ರ

ತರೀಕೆರೆ: ತಾಲ್ಲೂಕಿನ ಅಮೃತಾಪುರದ ಗುಡ್ಡದ ಮಲ್ಲೆದೇವರ ಕೆರೆಗೆ ತುಂಗಾ ಮೇಲ್ದಂಡೆ ಯೋಜನೆ ಮೂಲಕ ಗುರುವಾರ ಪ್ರಾಯೋಗಿಕವಾಗಿ ನೀರು ಹರಿಸಲಾಯಿತು. ವರ್ಷದ 246 ದಿನಗಳ ಕಾಲ ನಿರಂತರಾಗಿ 1.25 ಕ್ಯೂಸೆಕ್ ನೀರನ್ನು ಹರಿಸಲಾಗುವುದು.

ತಾಲ್ಲೂಕಿನ ಗುಡ್ಡದ ಮಲ್ಲೇದೇವರ ಕೆರೆಗೆ ಗುರುವಾರ ಉಬ್ರಾಣಿ ಮತ್ತು ಅಮೃತಾಪುರ ಯೋಜನೆಯ ಮೊದಲನೆ ವಿಭಾಗದಲ್ಲಿ ಪ್ರಾಯೋಗಿಕ ನೀರು ಸರಬರಾಜು ಕಾರ್ಯಕ್ಕೆ ಚಾಲನೆ ನೀಡಿ ಗಂಗಾಪೂಜೆ ನೆರವೇರಿಸಿ ಮಾತನಾಡಿದ ಶಾಸಕ ಸುರೇಶ್, ಒಟ್ಟಾರೆ 92.50 ಕೋಟಿ ಮೊತ್ತದ ಯೋಜನೆ ಮುಂದಿನ ತಿಂಗಳು ಕಾರ್ಯಾರಂಭ ಮಾಡಲಿದೆ ಎಂದರು.
 
246 ದಿನಗಳ ಕಾಲ ನಿರಂತರವಾಗಿ 1.25 ಟಿಎಂಸಿ ನೀರನ್ನು ಹರಿಸಲಾಗುವುದು. ಭದ್ರಾವತಿ ಬಳಿ ಭದ್ರಾನದಿಯ ದಡದಲ್ಲಿ ಸ್ಥಾಪಿಸಿರುವ ನೀರೆತ್ತುವ ಕೇಂದ್ರದಲ್ಲಿ 1450 ಅಶ್ವಶಕ್ತಿಯ ಮೂರು ಬೃಹತ್ ಮೋಟಾರು ಅಳವಡಿಸಿದೆ.

ಪ್ರತಿದಿವಸ 59 ಕ್ಯೂಸೆಕ್ ನೀರನ್ನು ಗಂಗೂರಿನ ನೀರು ಸಂಗ್ರಹ ಕೇಂದ್ರದಲ್ಲಿ ಶೇಖರಿಸಿ ಹಾದಿಕೆರೆ, ಗುಡ್ಡದ ಮಲ್ಲೇದೇವರಕೆರೆ ಮತ್ತು ಮೆದೆಗೆರೆಗೆ ಗುರುತ್ವಾಕರ್ಷಣ ಮೂಲಕ ನೀರನ್ನು ಹರಿಸಲಿದ್ದು, ಒಟ್ಟು 46 ಪ್ರಮುಖ ಕೆರೆಗಳು ಮತ್ತು ನೂರಾರು ಕಟ್ಟೆಗಳಿಗೆ ನೀರನ್ನು ಪೂರೈಸಲಾಗುವುದು ಎಂದರು.

ಜಿಲ್ಲಾ ಪಂಚಾಯಿತಿ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಆರ್.ಆನಂದಪ್ಪ, ಸದಸ್ಯ ಶಂಬೈನೂರು ಆನಂದಪ್ಪ, ತಾಲ್ಲೂಕು ಪಂಚಾಯಿತಿ ಆದ್ಯಕ್ಷ ಬಿ.ಆರ್.ರವಿ, ಸ್ಥಾಯಿ ಸಮಿತಿ ಅಧ್ಯಕ್ಷ ವಿಜಯಾನಾಯ್ಕ, ಡಿಸಿಸಿ ಬ್ಯಾಂಕ್ ನಿರ್ದೇಶಕ ಎ.ಆರ್.ರಾಜಶೇಖರ್, ತುಂಗಾ ಮೇಲ್ದಂಡೆ ಯೋಜನೆಯ ಎಇಇ ಚಂದ್ರಶೇಖರ್, ಎಇ ಓಂಕಾರಪ್ಪ, ಕರಿಯಪ್ಪ ಮತ್ತು ರಾಜು ಹಾಗೂ ಈ ಭಾಗದ ನೂರಾರು ರೈತರು ಇದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT