ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂಜಿನಿಯರ್‌ಗಳಿಗೆ ಫಿನಿಶಿಂಗ್ ಸ್ಕೂಲ್

Last Updated 9 ಫೆಬ್ರುವರಿ 2011, 18:30 IST
ಅಕ್ಷರ ಗಾತ್ರ

ಭಾರತದಲ್ಲಿ ಯಂತ್ರೋಪಕರಣಗಳು ಹಾಗೂ ಸಲಕರಣೆಗಳ ಉತ್ಪಾದನಾ ಕಾರ್ಖಾನೆಗಳು ಹಾಗೂ ಉದ್ಯಮಗಳಿಗೆ 1 ಕೋಟಿ ಕೌಶಲ್ಯಭರಿತ ಯುವಜನರ ಅಗತ್ಯವಿದೆ. ಆದರೆ, ಈ ಕ್ಷೇತ್ರದಲ್ಲಿ 1ಲಕ್ಷ ಜನ ಮಾತ್ರ ಅಗತ್ಯ ಪರಿಣತಿ ಹೊಂದಿದ್ದಾರೆ.

ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಿಂದ ಹೊರಬಿದ್ದ ಎಷ್ಟೋ ಎಂಜನಿಯರಿಂಗ್ ಪದವೀಧರರು ಉದ್ಯೋಗ ಗಿಟ್ಟಿಸಿಕೊಳ್ಳುವಲ್ಲಿ ವಿಫಲರಾಗುತ್ತಿದ್ದಾರೆ. ವಿದ್ಯಾರ್ಹತೆ, ಉತ್ತಮ ಅಂಕಗಳು ಇದ್ದರೂ ಯಂತ್ರಗಳನ್ನು ನಿರ್ವಹಿಸಲು ಬೇಕಾದ ಕೌಶಲ್ಯ ಇಲ್ಲದಿರುವುದು ಅತಿ ದೊಡ್ಡ ನ್ಯೂನತೆ.

‘ಇಂಡಿಯನ್ ಮಶೀನ್ ಟೂಲ್ ಮ್ಯಾನ್ಯುಫ್ಯಾಕ್ಚರರ್ಸ್‌ ಅಸೋಸಿಯೇಷನ್’ (ಐಎಂಟಿಎಂಎ) ಈ ನ್ಯೂನತೆ ಸರಿಪಡಿಸಲು ಮುಂದಾಗಿದೆ. ತುಮಕೂರು ರಸ್ತೆಯ ‘ಬೆಂಗಳೂರು ಇಂಟರ್‌ನ್ಯಾಷನಲ್ ಎಕ್ಸಿಬಿಷನ್ ಸೆಂಟರ್’ನಲ್ಲಿ (ಬಿಐಇಸಿ) ತಂತ್ರಜ್ಞಾನ ಕೇಂದ್ರ ಆರಂಭಿಸಿದೆ. ಇದು ಕೇಂದ್ರ ಉದ್ಯಮಿಗಳು, ತಜ್ಞರು ಮತ್ತು ಎಂಜಿನಿಯರಿಂಗ್ ಪದವೀಧರರನ್ನು ಬೆಸೆಯುವ ವೇದಿಕೆಯಾಗಿದೆ. ಇಲ್ಲಿರುವ ‘ಫಿನಿಶಿಂಗ್ ಸ್ಕೂಲ್’ನಲ್ಲಿ ವಿಶ್ವವಿದ್ಯಾನಿಲಯಗಳಿಂದ ಹೊರಬಿದ್ದ ಎಂಜನಿಯರ್‌ಗಳಿಗೆ ನಾಲ್ಕು ವಾರಗಳ ತರಬೇತಿ ನೀಡಲಾಗುವುದು.

ಮ್ಯಾನ್ಯುಫ್ಯಾಕ್ಚರಿಂಗ್ ಉದ್ಯಮದಲ್ಲಿ ಈಗ ಸಾಮಾನ್ಯವಾಗಿ ಬಳಸಲಾಗುವ ‘ಸಿಎನ್‌ಸಿ’ ಮೆಶೀನ್‌ಗಳ ಕುರಿತು ಮಾಹಿತಿ, ಅದರ ನಿರ್ವಹಣಾ ವಿಧಾನ ತಿಳಿಸಿಕೊಡಲಾಗುವುದು. ಇದಲ್ಲದೇ ಕ್ಯಾಡ್/ಕ್ಯಾಮ್ ತಂತ್ರಜ್ಞಾನದ ಕುರಿತೂ ತಿಳಿವಳಿಕೆ ನೀಡಲಾಗುವುದು. ಪ್ರತಿ ಬ್ಯಾಚ್‌ನಲ್ಲಿ 20 ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ.
 ಮಾಹಿತಿಗೆ  www.imtma.in  ದೂರವಾಣಿ:  6624 6514/ 6624 6600 
                                

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT