ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂ.ಜಿ.ರೋಡ್ ಬಜಾರ್ 17ರವರೆಗೆ ವಿಸ್ತರಣೆ

Last Updated 8 ಏಪ್ರಿಲ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ಟ್ರೇಡರ್ಸ್‌ ಅಸೋಸಿಯೇಷನ್ (ಬಿಟಿಎ) ಏಪ್ರಿಲ್ 2ರಿಂದ 11ರವರೆಗೆ ಹಮ್ಮಿಕೊಂಡಿದ್ದ ‘ಎಂ.ಜಿ.ರೋಡ್ ಬಜಾರ್’ ವ್ಯಾಪಾರ ಮೇಳಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದ ಹಿನ್ನೆಲೆಯಲ್ಲಿ ಏ.17ರವರೆಗೂ ವಿಸ್ತರಿಸಿದೆ.

‘ಏಪ್ರಿಲ್ 4ರಿಂದ ಮೊದಲ ಹಂತದ ಮೆಟ್ರೊ ರೈಲು ಎಂ.ಜಿ.ರಸ್ತೆಯ ಮೇಲೆ ಸಂಚರಿಸಲಿದ್ದು, ಆ ಮೂಲಕ ಇಲ್ಲಿಗೆ ನೀಡುವ ಗ್ರಾಹಕರ ಸಂಖ್ಯೆಯಲ್ಲಿ ಹೆಚ್ಚಳವಾಗಿ ವ್ಯಾಪಾರವೂ ಹೆಚ್ಚಲಿದೆ’ ಎಂದು ನಿರೀಕ್ಷಿಸಿದ್ದ ಬಿಟಿಎಗೆ ಮೆಟ್ರೊ ಸಂಚಾರದ ದಿನಾಂಕ ಮುಂದೂಡಲ್ಪಟ್ಟ ನಂತರವೂ ಚಿಂತೆಯೇನೂ ಆಗಿಲ್ಲ. ಪ್ರತಿ ವಸ್ತುಗಳ ಖರೀದಿಯಲ್ಲಿ ರಿಯಾಯಿತಿ ಘೋಷಿಸಿದ್ದರಿಂದ ವ್ಯಾಪಾರ ಭರ್ಜರಿಯಾಗಿಯೇ ನಡೆದಿದೆ. ಅಲ್ಲದೇ ನಿಯಮಿತವಾಗಿ ಪ್ರತಿನಿತ್ಯ ಈ ರಸ್ತೆಯಲ್ಲಿ ಸಂಚರಿಸುವವರಿಂದಲೂ ಕೂಡ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.

ಇದನ್ನು ಸಮರ್ಥವಾಗಿ ಬಳಸಿಕೊಳ್ಳಲು ನಿರ್ಧರಿಸಿರುವ ಬಿಟಿಎ ಬಜಾರ್‌ನ ಅವಧಿಯನ್ನು ಹೆಚ್ಚುವರಿಯಾಗಿ ಆರು ದಿನಗಳವರೆಗೆ ವಿಸ್ತರಿಸಿದೆ. ಏ.14ರಿಂದ 17ರವರೆಗೆ ರಜಾದಿನಗಳು ಬರಲಿದ್ದು, ಗ್ರಾಹಕರ ಸಂಖ್ಯೆಯಲ್ಲೂ ಹೆಚ್ಚಳ ಕಂಡು ಬರಲಿದೆ ಎಂದು ಅಂದಾಜಿಸಲಾಗಿದೆ.

ಎಂ.ಜಿ.ರಸ್ತೆ ಹರಡಿಕೊಂಡಿರುವ ಕುಂಬ್ಳೆ ವೃತ್ತದಿಂದ ಟ್ರಿನಿಟಿ ವೃತ್ತದವರೆಗೂ ದೀಪಾಲಂಕಾರವನ್ನು ಮಾಡುವ ಕಾರ್ಯ ಪ್ರಗತಿಯಲ್ಲಿದೆ. ಇದಕ್ಕೆ ಪೂರಕವಾಗಿ ಕಂಬಗಳನ್ನು ಅಳವಡಿಸುವ ಕಾರ್ಯ ಅಂತಿಮ ಹಂತಕ್ಕೆ ಬಂದಿದೆ. ದೀಪಂ ಸಿಲ್ಕ್ಸ್ ಮತ್ತು ಅದ್ವೈತ್ ಹುಂಡೈ ಸೇರಿದಂತೆ ಹಲವು ಮಾರಾಟ ಮಳಿಗೆಗಳ ಮುಂಭಾಗದಲ್ಲಿ ಸ್ವಾಗತ ಕಮಾನುಗಳನ್ನು ಅಳವಡಿಸುವ ಮೂಲಕ ಗ್ರಾಹಕರನ್ನು ಆಕರ್ಷಿಸಲಾಗುತ್ತಿದೆ. ಉಚಿತ ಮನರಂಜನಾ ಕಾರ್ಯಕ್ರಮಗಳನ್ನೂ ಕೂಡ ಕೆಲ ಮಳಿಗೆಗಳಲ್ಲಿ ಏರ್ಪಡಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT