ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂಟನೇ ತರಗತಿ ಕಡ್ಡಾಯವಾಗಲಿ

Last Updated 24 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ರಾಜ್ಯದ ಪಂಚಾಯಿತಿಗಳಲ್ಲಿ 15.823 ಮಂದಿ ಅನಕ್ಷರಸ್ಥ ಪ್ರತಿನಿಧಿಗಳಿದ್ದಾರೆ (ಪ್ರಜಾವಾಣಿ ಡಿ.19) ಎಂದು ಓದಿ ಆಶ್ಚರ್ಯವಾಯಿತು, ಈ ಅನಕ್ಷರಸ್ಥರು ಕೆಲವು ಸಂದರ್ಭಗಳಲ್ಲಿ ಜಿಲ್ಲಾಧಿಕಾರಿ, ತಹಶೀಲ್ದಾರ್, ರೆವಿನ್ಯೂ ಇನ್ಸ್‌ಪೆಕ್ಟರ್ ಮತ್ತು ಇತರೇ ಸರ್ಕಾರಿ ಅಧಿಕಾರಿಗಳ ಬಳಿ ಮಾತನಾಡಿ ಪತ್ರ ವ್ಯವಹಾರ ಮಾಡಬೇಕಾಗುತ್ತದೆ. ಪಂಚಾಯಿತಿಗಳಲ್ಲಿ ನಿರ್ಣಯಗಳನ್ನು ಮಾಡಬೇಕು ಮತ್ತು ಅದರಲ್ಲಿ ಸರಿಯಾಗಿ ಬರೆದಿದ್ದಾರೆಯೇ ಎಂದು ಓದಿ ಸಹಿ ಮಾಡಬೇಕಾಗುತ್ತದೆ. ಓದಲು ಬಾರದಿದ್ದರೆ?

ಇತರರು ಏನೂ ತಪ್ಪು ಬರೆದಿದ್ದರೂ, ಕಣ್ಣು ಮುಚ್ಚಿಕೊಂಡು ಸಹಿ ಮಾಡಬೇಕು, ಈ ರೀತಿ ಆದರೆ ಪಂಚಾಯಿತಿ ಆಡಳಿತವನ್ನು ಹೇಗೆ ನಡೆಸುತ್ತಾರೆ?ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸುವವರು ಪದವೀಧರರಲ್ಲದೆ ಹೋದರೂ ಕನಿಷ್ಟ ಎಂಟನೇ ತರಗತಿಯಾದರೂ ಓದಿರಬೇಕೆಂದು ಕಾನೂನು ಮಾಡಿದರೆ ಒಳ್ಳೆಯದು.   

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT