ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂಡೆವರ್ ಯಾನ ಪೂರ್ಣ

Last Updated 1 ಜೂನ್ 2011, 19:30 IST
ಅಕ್ಷರ ಗಾತ್ರ

ಮಾಸ್ಕೊ (ಐಎಎನ್‌ಎಸ್/ ರಿಯಾ ನೊವೊಸ್ತಿ): ಅಮೆರಿಕದ `ಎಂಡೆವರ್~ ಬಾಹ್ಯಾಕಾಶ ನೌಕೆಯು ತನ್ನ 25ನೇ ಮತ್ತು ಅಂತಿಮ ಅಂತರಿಕ್ಷ ಯಾನವನ್ನು ಯಶಸ್ವಿಯಾಗಿ ಪೂರೈಸಿ 6 ಮಂದಿ ಗಗನಯಾನಿಗಳ ಸಮೇತ ಧರೆಗಿಳಿದಿದೆ.

 ಅಂತರ ರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಎರಡು ದಿನಗಳ ಹಿಂದೆ ಭೂ ಕಕ್ಷೆಯ ಕಡೆಗೆ ಕೊನೆಯ ಯಾನ ಆರಂಭಿಸಿದ್ದ `ಎಂಡೆವರ್~ ಫ್ಲಾರಿಡಾದಲ್ಲಿರುವ ನಾಸಾದ ಕೆನಡಿ ಬಾಹ್ಯಾಕಾಶ ಕೇಂದ್ರದಲ್ಲಿ ಸುರಕ್ಷಿತವಾಗಿ ಬಂದಿಳಿಯಿತು.

ನಾಸಾದ 30 ವರ್ಷಗಳ ಯೋಜನೆಯನ್ನು ಪೂರೈಸಿ ಬುಧವಾರದ ನಸುಕಿನ ಕತ್ತಲಲ್ಲಿ ಭೂ ಸ್ಪರ್ಶ ಮಾಡಿದ ಈ ನೌಕೆಯನ್ನು, ಕೇಂದ್ರದಲ್ಲಿ ನೆರೆದಿದ್ದ ಸಾವಿರಾರು ಜನ ಕಣ್ತುಂಬಿಕೊಂಡರು.

`ಎಂಡೆವರ್~ ನೆಲಕ್ಕೆ ಇಳಿಯುವವರೆಗಿನ ಎಲ್ಲ ಬೆಳವಣಿಗೆಗಳನ್ನೂ ನಾಸಾದ ವೆಬ್‌ಸೈಟಿನಲ್ಲಿ ನೇರ ಪ್ರಸಾರ ಮಾಡಲಾಯಿತು. `ಎಂಡೆವರ್~ ತನ್ನ ಇತಿಹಾಸದಲ್ಲಿ ಎಂಟು ತಾಸಿಗೂ ಹೆಚ್ಚು ಕಾಲದ ಬಾಹ್ಯಾಕಾಶ ನಡಿಗೆಯ ಹೆಗ್ಗಳಿಕೆ ಹೊಂದಿದೆ. ಇದು ಬಾಹ್ಯಾಕಾಶ ಇತಿಹಾಸದಲ್ಲೇ ಆರನೆಯ ಸುದೀರ್ಘ ನಡಿಗೆ ಎಂಬ ದಾಖಲೆ ಇದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT