ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂವಿಜೆ ಕಾಲೇಜಿನಲ್ಲಿ ಹಳಬರ ಸಮ್ಮಿಲನ

Last Updated 24 ಜನವರಿ 2011, 19:30 IST
ಅಕ್ಷರ ಗಾತ್ರ

ಚನ್ನಸಂದ್ರದಲ್ಲಿನ ಎಂವಿಜೆ ಕಾಲೇಜ್ ಆಫ್ ಎಂಜಿನಿಯರಿಂಗ್‌ನಲ್ಲಿ ಹಳೆ ವಿದ್ಯಾರ್ಥಿಗಳ ಸಮ್ಮೇಳನ  ಸಡಗರ ಸಂಭ್ರಮದಿಂದ ನಡೆಯಿತು.
ವಿಶ್ವದ ವಿವಿಧೆಡೆಯಿಂದ ಬಂದ 1982-85 ತಂಡದ 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದ ಈ ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಎಂ.ಗಿರೀಶ್ ವಹಿಸಿದ್ದರು.

ಈ ಸಮ್ಮೇಳನ ಹಳೇ ವಿದ್ಯಾರ್ಥಿಗಳು ಒಂದೆಡೆ ಸೇರಿ ತಮ್ಮ ಭಾವನೆಗಳನ್ನು ಹಂಚಿಕೊಳ್ಳಲು ವೇದಿಕೆ ಕಲ್ಪಿಸಿತ್ತು. ಇವರೆಲ್ಲ ಕಾಲೇಜು ದಿನಗಳ ನೆನಪನ್ನು ಮೆಲುಕು ಹಾಕಿದರು. ತಮ್ಮ  ಅನುಭವಗಳು ಮತ್ತು ಅವು ತಮ್ಮ ವೃತ್ತಿ ಜೀವನದ ಮೇಲೆ ಬೀರಿದ ಪರಿಣಾಮಗಳನ್ನು ಹಂಚಿಕೊಂಡರು.

1982 ತಂಡದ ರಾಬರ್ಟ್ ಅವರಿಗಂತೂ ಬಹಳ ಖುಷಿಯಾಗಿತ್ತು. ಸಮ್ಮೇಳನದ ಸೂತ್ರಧಾರಿ, ಸಿವಿಲ್ ಎಂಜಿನಿಯರ್ ನಾಗಾರ್ಜುನ ಅವರು, ಬದುಕಿನಲ್ಲಿ ಮುಂದೆ ಬರಲು ಕಾಲೇಜು ನೀಡಿದ ಸಹಕಾರ ಸ್ಮರಿಸಿಕೊಂಡರು.

ಈ ಕಾಲೇಜಿನಿಂದ ಪದವಿ ಪಡೆದು ಹೊರ ಬರುವ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶ ಕಲ್ಪಿಸಲು ಎಲ್ಲ ಬಗೆಯಿಂದ ಸಹಕರಿಸುವುದಾಗಿ ಹಳೆ ವಿದ್ಯಾರ್ಥಿಗಳು ವಾಗ್ದಾನ ಮಾಡಿದರು.

ಕಾಲೇಜಿನ ಅಧ್ಯಕ್ಷ ಬಾಲಚಂದರ್ ಮಾತನಾಡಿ, ಪ್ರತಿ ವರ್ಷ ಈ ರೀತಿಯ ಸಮ್ಮೇಳನವನ್ನು ದೊಡ್ಡ ಮಟ್ಟದಲ್ಲಿ ಅಯೋಜಿಸಲು ಯೋಜಿಸಿದ್ದೇವೆ. ಹಳೆ ವಿದ್ಯಾರ್ಥಿಗಳು ಕಾಲೇಜಿನ ಬಗ್ಗೆ ಇಟ್ಟುಕೊಂಡ ಗೌರವ, ಆದರ ಅನುಕರಣೀಯ ಎಂದರು.

ಮುಂದಿನ ಸಲ ಹಳೆ ವಿದ್ಯಾರ್ಥಿಗಳ ಸಮ್ಮೇಳನವನ್ನು ಮೇ 14 ರಂದು ಆಯೋಜಿಸಿದ್ದು, 1200ಕ್ಕೂ ಹೆಚ್ಚು ಹಳೆ ವಿದ್ಯಾರ್ಥಿಗಳು ತಮ್ಮ ಕುಟುಂಬಗಳೊಂದಿಗೆ ಭಾಗವಹಿಸುವ ನಿರೀಕ್ಷೆಯಿದೆ ಎಂದು ಪ್ರಾಚಾರ್ಯ ಗಿರೀಶ್ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT