ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂಸಿಎಫ್ ಜತೆ ಯುಪಿಎಲ್ ಮೈತ್ರಿ

Last Updated 3 ಮೇ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ನಲವತ್ತು ವರ್ಷಗಳಿಂದ ಕೃಷಿ ರಾಸಾಯನಿಕ ತಯಾರಿಕೆ ಮತ್ತು ಬಿತ್ತನೆ ಬೀಜ ಮಾರಾಟದಲ್ಲಿ ನಿರತವಾಗಿರುವ ಯುನೈಟೆಡ್ ಫಾಸ್ಪರಸ್ ಲಿ.(ಯುಪಿಎಲ್) ಕರ್ನಾಟಕದ ಮೂಲದ ರಸಗೊಬ್ಬರ ತಯಾರಿಕಾ ಕಂಪೆನಿ `ಮಂಗಳೂರು ಕೆಮಿಕಲ್ಸ್ ಅಂಡ್ ಫರ್ಟಿಲೈಸರ್ಸ್‌ ಲಿ.~(ಎಂಸಿಎಫ್) ಜತೆ ಸಹಯೋಗ ಸ್ಥಾಪಿಸಿದೆ.

ಈ ವಿಷಯವನ್ನು ಬೆಂಗಳೂರಿನಲ್ಲಿ ಗುರುವಾರ ಪ್ರಕಟಿಸಿದ `ಯುಪಿಎಲ್~ ಸಿಇಒ ಜಯ್ ಷ್ರಾಫ್, ಯುಪಿಎಲ್ ಕಂಪೆನಿ ಸಮೂಹ 100ಕ್ಕೂ ಅಧಿಕ ದೇಶಗಳಲ್ಲಿ ಕಾರ್ಯನಿರತವಾಗಿದೆ. ಭಾರತದಲ್ಲಿಯೂ ಸರ್ಕಾರದ ಅಂಗಸಂಸ್ಥೆಗಳು, ವಿವಿಧ ಕಂಪೆನಿಗಳ ಸಹಯೋಗದಲ್ಲಿ ವಿಶಾಲ ವ್ಯಾಪ್ತಿಯಲ್ಲಿ ಚಟುವಟಿಕೆ ನಡೆಸಿದ್ದೇವೆ.

ಇದೀಗ ಎಂಸಿಎಫ್ ಜತೆಗೂಡಿ ಬೆಳೆಗಳ ಸಂರಕ್ಷಣೆಗೆ ಅಗತ್ಯವಾದ ಸುಧಾರಿತ ಸಲಕರಣೆ ಮತ್ತು ಕ್ರಮಗಳನ್ನು ರೈತರಿಗೆ ತಲುಪಿಸಲಿದೆ. ಭಾರತದ ಕೃಷಿಕರು ಏಕರೆವಾರು ಕೃಷಿ ಇಳುವರಿ ಹೆಚ್ಚಿಸುವಂತೆ ಮಾಡುವುದಕ್ಕೆ ನಮ್ಮ ಕಂಪೆನಿ ನೆರವಾಗಲಿದೆ~ ಎಂದರು.

ಯುಪಿಎಲ್ ಸಮೂಹ ಬ್ರೆಜಿಲ್, ಅಮೆರಿಕದಲ್ಲಿ ಹೆಚ್ಚು ಚಟುವಟಿಕೆಯಿಂದಿದೆ. ಜಪಾನ್‌ನ ಸಂಶೋಧನಾ ಸಂಸ್ಥೆಯೊಂದರ ಜತೆಗೂ ಮೈತ್ರಿ ಮಾಡಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT