ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಐಇಇಇ ಫಲಿತಾಂಶ ಪ್ರಕಟ

Last Updated 10 ಜೂನ್ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು:  ಅಖಿಲ ಭಾರತ ಎಂಜಿನಿಯರಿಂಗ್ ಪ್ರವೇಶ ಪರೀಕ್ಷೆ (ಎಐಇಇಇ) ಫಲಿತಾಂಶ ಭಾನುವಾರ ಪ್ರಕಟಗೊಂಡಿದೆ.

ರಾಜಾಜಿನಗರದ `ನ್ಯಾಷನಲ್ ಪಬ್ಲಿಕ್ ಸ್ಕೂಲ್~ ವಿದ್ಯಾರ್ಥಿ ಸಾಗರ್ ಹೊನ್ನುಂಗಾರ್ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ್ದಾರೆ. ಇವರದು ರಾಷ್ಟ್ರಮಟ್ಟದಲ್ಲಿ 21ನೇ ರ‌್ಯಾಂಕ್. ಇಂದಿರಾನಗರದ `ನ್ಯಾಷನಲ್ ಪಬ್ಲಿಕ್ ಸ್ಕೂಲ್~ ವಿದ್ಯಾರ್ಥಿನಿ ಅದಿತಿ ರಘುನಾಥನ್ ರಾಜ್ಯಕ್ಕೆ ದ್ವಿತೀಯ ಹಾಗೂ ರಾಷ್ಟ್ರಮಟ್ಟದಲ್ಲಿ 61ನೇ ಸ್ಥಾನ ಗಳಿಸಿದ್ದಾರೆ.

ನಗರದ `ನ್ಯಾಷನಲ್ ಹಿಲ್ ವ್ಯೆ ಪಬ್ಲಿಕ್ ಸ್ಕೂಲ್~ ವಿದ್ಯಾರ್ಥಿನಿ ಪೃಥ್ವಿ ಹೆಗಡೆ ರಾಜ್ಯಕ್ಕೆ 3ನೇ ರ‌್ಯಾಂಕ್ ಹಾಗೂ ರಾಷ್ಟ್ರಕ್ಕೆ 130ನೇ ರ‌್ಯಾಂಕ್ ಗಳಿಸಿದ್ದಾರೆ.

ಈ ಬಗ್ಗೆ `ಪ್ರಜಾವಾಣಿ~ ಜತೆ ಸಂತಸ ಹಂಚಿಕೊಂಡ ಸಾಗರ್ `ರ‌್ಯಾಂಕ್ ಗಳಿಸುವ ಭರವಸೆ ನನಗೆ ಇತ್ತು. ಮೊದಲಿನಿಂದಲೂ ದಿನನಿತ್ಯ 4-5 ಗಂಟೆ ಕಾಲ ಅಭ್ಯಾಸ ಮಾಡುತ್ತಿದ್ದೆ. ಶ್ರಮಕ್ಕೆ ತಕ್ಕ ಪ್ರತಿಫಲ ದೊರೆತಿದೆ~ ಎಂದರು.

ರ‌್ಯಾಂಕ್ ನಿರೀಕ್ಷೆಯಲ್ಲಿದ್ದ ಅದಿತಿ, `ಪರೀಕ್ಷೆಯ ಭಯ ವಿದ್ಯಾರ್ಥಿಗಳಲ್ಲಿ ಸಾಮಾನ್ಯ. ಭಯ ಬಿಟ್ಟು ಧೈರ್ಯದಿಂದ ಪರೀಕ್ಷೆ ಎದುರಿಸಿದರೆ ಹೆಚ್ಚಿನ ಅಂಕ ಗಳಿಸಲು ಸಾಧ್ಯ~ ಎಂದರು.

ಇವರಿಬ್ಬರಿಗೂ ಚೆನ್ನೈನಲ್ಲಿರುವ `ಐಐಟಿ- ಮದ್ರಾಸ್~ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮುಂದುವರಿಸುವ ಹಂಬಲವಿದೆ. ದೆಹಲಿಯಲ್ಲಿನ `ವಾಸ್ತುಶಿಲ್ಪ ಶಾಲೆ~ಯಲ್ಲಿ ಉನ್ನತ ಅಧ್ಯಯನ ನಡೆಸುವ ಹಂಬಲ ಪೃಥ್ವಿ  ಅವರದ್ದು.
ದೇಶದಾದ್ಯಂತ ಸುಮಾರು 11 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT