ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಐಟಿಎ ವಿರುದ್ಧ ಭೂಪತಿ ಕಿಡಿ

Last Updated 19 ಜನವರಿ 2012, 19:30 IST
ಅಕ್ಷರ ಗಾತ್ರ

ಮೆಲ್ಬರ್ನ್ (ಐಎಎನ್‌ಎಸ್): ಮಹತ್ವದ ಅಂತರರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಆಡುವ ಡಬಲ್ಸ್ ಜೋಡಿಯನ್ನು ಸೂಕ್ತವಾದ ರೀತಿಯಲ್ಲಿ ರೂಪಿಸದ ಅಖಿಲ ಭಾರತ ಟೆನಿಸ್ ಸಂಸ್ಥೆ (ಎಐಟಿಎ) ವಿರುದ್ಧ ಮಹೇಶ್ ಭೂಪತಿ ಕಿಡಿಕಾರಿದ್ದಾರೆ.

ದೇಶವನ್ನು ಪ್ರತಿನಿಧಿಸುವ ತಂಡವನ್ನು ಆಯ್ಕೆ ಮಾಡುವಾಗ ಯಾವುದೇ ವಿವೇಚನೆ ಇಲ್ಲದೇ ಮನಬಂದಂತೆ ಜೋಡಿಗಳನ್ನು ಮಾಡುತ್ತಾರೆಂದು ದೂರಿರುವ ಅವರು `2010ರ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಸಾನಿಯಾ ಮಿರ್ಜಾ ಅವರನ್ನು ಮಿಶ್ರ ಡಬಲ್ಸ್‌ನಲ್ಲಿ ಲಿಯಾಂಡರ್ ಪೇಸ್ ಜೊತೆಗೆ ಆಡಿಸಲಾಗಿತ್ತು. ಆ ಕೂಟಕ್ಕೆ ಮುನ್ನ ನಾನು ಹಾಗೂ ಸಾನಿಯಾ ಆಸ್ಟ್ರೇಲಿಯಾ ಓಪನ್‌ನಲ್ಲಿ ಚಾಂಪಿಯನ್ ಆಗಿದ್ದೆವು. ಆದರೂ ಆ ಅಂಶವನ್ನು ಪರಿಗಣಿಸಲಿಲ್ಲ~ ಎಂದು ಗುರುವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಆಸ್ಟ್ರೇಲಿಯಾ ಓಪನ್‌ನಲ್ಲಿ ಆಡುತ್ತಿರುವ ಅವರು ಲಂಡನ್ ಒಲಿಂಪಿಕ್‌ನಲ್ಲಿ ತಮ್ಮ ಜೊತೆಗೆ ಮಿಶ್ರಡಬ      ಲ್ಸ್‌ನಲ್ಲಿ ಯಾರು ಆಡುತ್ತಾರೆ ಎನ್ನುವುದು `ಗೊತ್ತಿಲ್ಲ~ವೆಂದು ಸ್ಪಷ್ಟವಾಗಿ ಹೇಳಿದರು.

`ಗ್ರ್ಯಾಂಡ್ ಸ್ಲಾಮ್ ಟೂರ್ನಿಗಳ ನಾನು ಮತ್ತು ಸಾನಿಯಾ ಮತ್ತೆ ಚಾಂಪಿಯನ್ ಪಟ್ಟ ಪಡೆಯಲು ಪ್ರಯತ್ನಿಸುತ್ತೇವೆ ಎಂದು ಮಾತ್ರ ಹೇಳಬಲ್ಲ. ಆದರೆ ಮುಂಬರುವ ಒಲಿಂಪಿಕ್‌ನಲ್ಲಿ ನನ್ನೊಂದಿಗೆ ಯಾರಿರುತ್ತಾರೆಂದು ತಿಳಿದಿಲ್ಲ~ ಎಂದರು.

`ಎಐಟಿಎ ಒಳಗಿನ ರಾಜಕೀಯ ಯಾವ ಮಟ್ಟದಲ್ಲಿ ಇದೆಯೆಂದರೆ ನಮಗೆ ಸೂಕ್ತ ಎನಿಸುವ ಜೊತೆಗಾರರನ್ನು ಹೊಂದುವುದೂ ಸಾಧ್ಯವಿಲ್ಲ~ ಎಂದ ಅವರು `ಕಾಮನ್‌ವೆಲ್ತ್ ಕೂಟದ ಸಂದರ್ಭದಲ್ಲಿನ ಘಟನೆಯ ನಂತರ ಎಐಟಿಎ ಹೇಗೆ ಯೋಚನೆ ಮಾಡುತ್ತದೆಂದು ಸ್ಪಷ್ಟವಾಗಿ ಅರಿತಿದ್ದೇನೆ. ಆದ್ದರಿಂದ ಲಂಡನ್ ಒಲಿಂಪಿಕ್‌ನಲ್ಲಿ ಯಾರೊಂದಿಗೆ ಆಡುತ್ತೇನೆಂದು ಯೋಚನೆ ಮಾಡುವುದನ್ನೇ ಕೈಬಿಟ್ಟಿದ್ದೇನೆ~ ಎಂದು ಬೇಸರದಿಂದ ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT