ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಕ್ಯುಕೆಬಿ: ಜಾಗತಿಕ ಉಗ್ರ ಸಂಘಟನೆ

Last Updated 6 ಜನವರಿ 2012, 19:30 IST
ಅಕ್ಷರ ಗಾತ್ರ

ವಾಷಿಂಗ್ಟನ್ (ಐಎಎನ್‌ಎಸ್):  ಇರಾಕ್ ಮತ್ತು ಇರಾನ್ ನಡುವೆ ಕಾರ್ಯನಿರ್ವಹಿಸುತ್ತಿರುವ  ಅಲ್ ಖೈದಾ ಖುರ್ದಿಷ್ ಬೆಟಾಲಿಯನ್ಸ್ (ಎಕ್ಯುಕೆಬಿ) ಸಂಘಟನೆಯನ್ನು ಅಮೆರಿಕ ಸರ್ಕಾರವು `ವಿಶೇಷವಾಗಿ ನಿಯೋಜಿತಗೊಂಡಿರುವ ಜಾಗತಿಕ ಉಗ್ರ ಸಂಘಟನೆ~ ಎಂದು ಘೋಷಿಸಿದ್ದು, ಅದು ಅಮೆರಿಕ ನೀಡುವ ಶಿಕ್ಷೆಗೆ ಅರ್ಹವಾಗುತ್ತದೆ ಎಂದು ಹೇಳಿದೆ.

`ಅದೊಂದು ಉಗ್ರ ಸಂಘಟನೆ ಎಂದು  ಗೊತ್ತುಪಡಿಸಿರುವುದರಿಂದ,  ಅಮೆರಿಕದ ವ್ಯಾಪ್ತಿಯಲ್ಲಿ ಎಕ್ಯುಕೆಬಿ ಹೊಂದಿರುವ ಆಸ್ತಿಪಾಸ್ತಿಗಳು ಮುಟ್ಟುಗೋಲಿಗೆ ಅರ್ಹವಾಗಿವೆ. ಈ ಸಂಘಟನೆಯೊಂದಿಗೆ ದೇಶದ ನಾಗರಿಕರು ಯಾವುದೇ ರೀತಿಯ ವ್ಯವಹಾರ ನಡೆಸುವುದಕ್ಕೆ ನಿರ್ಬಂಧ ಹೇರಲಾಗಿದೆ. ಈ ಕ್ರಮವು ಆ ಸಂಘಟನೆಗೆ ಪೂರೈಕೆಯಾಗುವ ಹಣಕಾಸು ಮತ್ತು ಇತರ ನೆರವುಗಳಿಗೆ ಕಡಿವಾಣ ಹಾಕಲಿದೆ~ ಎಂಬ ಅಮೆರಿಕದ ವಿದೇಶಾಂಗ ಇಲಾಖೆ ಹೇಳಿಕೆ ಉಲ್ಲೇಖಿಸಿ ಕ್ಸಿನ್‌ಹುವಾ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT