ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಚ್.ಡಿ. ಕೋಟೆಯಲ್ಲಿ ಆನೆ ಮರಿ ಸಾವು

Last Updated 12 ನವೆಂಬರ್ 2011, 19:30 IST
ಅಕ್ಷರ ಗಾತ್ರ

ಎಚ್.ಡಿ.ಕೋಟೆ: ತಾಲ್ಲೂಕಿನ ಶಾಂತಿಪುರ ಗ್ರಾಮದ ಜಮೀನೊಂದರಲ್ಲಿ ಗಂಡು ಆನೆ ಮರಿಯೊಂದು ಶನಿವಾರ ಮೃತಪಟ್ಟಿರುವ ಘಟನೆ ನಡೆದಿದೆ.ಸುಮಾರು 4 ತಿಂಗಳ ಆನೆ ಮರಿಯು ಗ್ರಾಮದ ಸರ್ವೆ ನಂ. 11 ರ ಬೋಗಯ್ಯ ಬಿನ್ ನಂಜಯ್ಯ ಎಂಬುವವರ ಜಮೀನಿನಲ್ಲಿ ಮೃತಪಟ್ಟಿದ್ದು, ಈ ಆನೆ ಮರಿಯ ಸಾವಿಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ.

ಆನೆಯ ನಾಲಿಗೆಯು ಹೊರ ಬಂದಿರುವುದು ಹಾಗೂ ಆನೆ ಮೃತಪಟ್ಟಿರುವ ಜಾಗದಲ್ಲಿ 10ಕ್ಕೂ ಹೆಚ್ಚು ಕಾಡಾನೆಗಳು ಕಾದಾಟ ನಡೆಸಿದ ಕುರುಹುಗಳು ಇವೆ. ಹಾಗಾಗಿ ಆನೆಗಳ ನಡುವೆ ನಡೆದ ಕಾಳಗದಲ್ಲಿ ಈ ಮರಿ ಆನೆ ಸಿಕ್ಕಿ ಮೃತ ಪಟ್ಟಿರಬಹುದು ಎಂದು ಶಂಕಿಸಲಾಗಿದೆ.

ಶನಿವಾರ ಮುಂಜಾನೆ ಸುಮಾರು 1 ಗಂಟೆಯಲ್ಲಿ ಆನೆಗಳು ಕಾದಾಟ ನಡೆಸುತ್ತಿದ್ದ ಶಬ್ಧ ಕೇಳುತ್ತಿತ್ತು. ಪಕ್ಕದ ಮೇಟಿಕುಪ್ಪೆ ವನ್ಯಜೀವಿ ವಲಯ ವ್ಯಾಪ್ತಿಯ ಕಾಡಿನಿಂದ ಈ ಆನೆಗಳು ಬರುವುದು ಸಾಮಾನ್ಯವಾಗಿದೆ~ ಎನ್ನುತ್ತಾರೆ ಇಲ್ಲಿನ ಗ್ರಾಮಸ್ಥರು.

ಎಸಿಎಫ್ ತಮ್ಮಯ್ಯ ~ಪ್ರಜಾವಾಣಿ~ಯೊಂದಿಗೆ ಮಾತನಾಡಿ, ~ಈ ಮರಿ ಆನೆಗೆ ಮೊದಲೆ ಕಣ್ಣಿನ ಒಂದು ಭಾಗಕ್ಕೆ ಗಾಯವಾಗಿತ್ತು ಎನ್ನುವುದು ಮೇಲ್ನೋಟಕ್ಕೆ ಕಂಡುಬಂದಿದೆ~ ಎಂದರು. ಪ್ರಾದೇಶಿಕ ಅರಣ್ಯ ವಿಭಾಗದ ಪ್ರಭಾರ ಅರಣ್ಯಾಧಿಕಾರಿ ಮೋಹನ್‌ಕುಮಾರ್, ವನಪಾಲಕ ರಂಗಸ್ವಾಮಿ, ಅರಣ್ಯ ರಕ್ಷಕ ಹರ್ಷಕುಮಾರ್, ಸಣ್ಣಸ್ವಾಮಿನಾಯಕ, ರಾಜು ಸಾಗರ್, ಗ್ರಾಮಸ್ಥರು ಹಾಜರಿದ್ದರು.

ತಾಲ್ಲೂಕಿನ ಪಶು ವೈದ್ಯ ವೆಂಕಟರಾಮು ಹಾಗೂ ಅರಣ್ಯ ಇಲಾಖೆಯ ಪಶು ವೈದ್ಯಾಧಿಕಾರಿ ಡಾ. ರಮೇಶ್ ಮರಣೋತ್ತರ ಪರೀಕ್ಷೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT